ಯದುವೀರ್ ಟ್ವಿಟರ್ ಹ್ಯಾಕ್

ಮೈಸೂರು, ಆಗಸ್ಟ್, 27, 2020(www.justkananda.in) ; ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿ ‘ನಾನು ರಾಜಕೀಯಕ್ಕೆ ಸೇರಬೇಕೆ?’(should i join politics?)’ ಎಂಬ ಸಾಲುಗಳನ್ನು ಫೋಸ್ಟ್ ಮಾಡಲಾಗಿದೆ.

 

18 ಗಂಟೆಗಳ ಹಿಂದೆ  ಯದುವೀರ್ ಅವರ ಟ್ವಿಟರ್ ಖಾತೆಯಿಂದ ‘’ನಾನು ರಾಜಕೀಯಕ್ಕೆ ಸೇರಬೇಕೆ?’(should i join politics?)’’ ಎಂಬ ಈ ಫೋಸ್ಟ್ ಹಾಕಿದ್ದು, ಫೋಸ್ಟ್ ಕೆಳಗೆ ಹೌದು ಅಥವಾ ಇಲ್ಲ ಎಂಬುದನ್ನು ಸೂಚಿಸಲಾಗಿದೆ. ಈಗಾಗಲೇ ಈ ಪೋಸ್ಟ್ ಗೆ 4,511 ಮಂದಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. 225ಕ್ಕೂ ಹೆಚ್ಚು ಮಂದಿ ಸಂದೇಶಗಳನ್ನು ರವಾನಿಸಿದ್ದು, 92 ಮಂದಿ ಅವರ ಆ ಫೋಸ್ಟ್ ಅನ್ನು ರಿ ಟ್ವೀಟ್ ಮಾಡಿದ್ದಾರೆ.

ಟ್ವಿಟರ್ ಖಾತೆ ಹ್ಯಾಕ್ ಮಾಡಲಾಗಿದೆ

ಈ ಕುರಿತು ಯದುವೀರ್ ಅವರನ್ನು ಸಂಪರ್ಕಿಸಿದಾಗ ತಾವು ಆ ರೀತಿಯಾಗಿ ಟ್ವೀಟ್ ಮಾಡಿಲ್ಲ. ಯಾರೋ ನನ್ನ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿ ಈ ರೀತಿಯಾಗಿ ಫೋಸ್ಟ್ ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದರು.

ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರಾಜಕೀಯಕ್ಕೆ ಪ್ರವೇಶ ಮಾಡುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಇದಕ್ಕೆ ಯದುವೀರ್ ಅವರೆ ರಾಜಕೀಯದ ಬಗ್ಗೆ ಸಧ್ಯಕ್ಕೆ ಆಸಕ್ತಿಯಿಲ್ಲ. ಹಿಂದಿನಿಂದಲೂ ಜನರೊಂದಿಗೆ ರಾಜಪರಂಪರೆಯ ನಂಟಿದೆ. ಆ ಸಂಬಂಧವನ್ನು ಮುಂದುವರಿಸಿಕೊಂಡು ಹೋಗುವುದಷ್ಟೇ ನನ್ನ ಮುಂದಿರುವ ಜವಾಬ್ದಾರಿ ಎಂದು ತಿಳಿಸಿದ್ದರು.

key words ; Yadavir-Twitter-Hack