ವಿಶ್ವ ಯೋಗ ದಿನಾಚರಣೆಗೆ ಗಿಫ್ಟ್:  ಮೈಸೂರಿನಲ್ಲಿ ರಚನೆಯಾಗಿದೆ ಇಂಟರ್ ನ್ಯಾಶನಲ್ ಯೋಗ ಅ್ಯಂಥಮ್ …

kannada t-shirts

ಮೈಸೂರು,ಜು,19,2019(www.justkannada.in): ಜೂನ್ 21 ರಂದು ಯೋಗ ದಿನಾಚಾರಣೆಗೆ ಮೈಸೂರು ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜಾಗಿದ್ದು, ಈ ನಡುವೆ ವಿಶ್ವ ಯೋಗ ದಿನಾಚರಣೆಗೆ  ಮೈಸೂರಿನಿಂದ ದೊಡ್ಡ ಉಡುಗೊರೆ  ಸಿಗಲಿದೆ.

ಹೌದು, ವಿದ್ವಾನ್ ಮೈಸೂರು ಮಂಜುನಾಥ್ ಅವರ ನಿರ್ದೇಶನದಲ್ಲಿ ಇಂಟರ್ ನ್ಯಾಶನಲ್ ಯೋಗ ಅ್ಯಂಥಮ್  ರಚನೆಯಾಗಿದ್ದು ಯೋಗದಿನಾಚಾರಣೆ ದಿನದಂದು ಲೋಕಾರ್ಪಣೆ ಮಾಡಲಾಗುತ್ತದೆ.  ವಿಶ್ವದ ಅಗ್ರಗಣ್ಯ ವಿದ್ವಾಂಸರಿಂದ ಅಂತರರಾಷ್ಟ್ರೀಯ ಯೋಗ ಗೀತೆ ರಚನೆಯಾಗಿದೆ. ಅಂತೆಯೇ ಮೈಸೂರಿನ ವಿದ್ವಾನ್ ಸಹ ಅಂತರರಾಷ್ಟ್ರೀಯ ಯೋಗ ಗೀತೆಯನ್ನ ಸಂಯೋಜನೆ ಮಾಡಿದ್ದಾರೆ.

ಯೋಗ ಅ್ಯಂತಮ್ ರಚನೆಗೆ  ಕೇವಲ ಎರಡೇ ವಾರ ಸಮಯ ತೆಗೆದುಕೊಂಡಿದ್ದಾರೆ.  ವಿಶ್ವದ ೨೫ ಕ್ಕೂ ಹೆಚ್ಚು ಅಗ್ರಗಣ್ಯ ವಿದ್ವಾಂಸರು  ಗೀತೆ ರಚನೆ ಮಾಡಿದ್ದಾರೆ.

ಹೊಸ ರಾಗದ ” ಭರತರಾಗ ” ಅನ್ವೇಷಣೆಯೋಂದಿಗೆ ಮೈಸೂರಿನ  ವಿದ್ವಾನ್ ಗೀತೆ ರಚನೆ ಮಾಡಿದ್ದಾರೆ.  ಮೈಸೂರು ಮಂಜುನಾಥ್ ಅವರ ನಿರ್ದೇಶನದಲ್ಲಿ ಈ ಗೀತೆ ಮೂಡಿಬಂದ್ದಿದ್ದು, ಮೈಸೂರಿನ ಗಾಯಕ ವಿಜಯ್ ಪ್ರಕಾಶ್ ಅವರ ಧ್ವನಿಯಲ್ಲಿಯೂ ಸಹ ಈ ಯೋಗ ಗೀತೆ ಮೂಡಿಬರಲಿದೆ.

Key words: World Yoga Day-International- Yoga Anthem -formed – Mysore

 

website developers in mysore