ವಿಜ್ಞಾನ ಲೋಕಕ್ಕೆ ವಿಸ್ಮಯ :ಪುರುಷನ ಕತ್ತಿನಲ್ಲಿ ಮೂಡಿದ ಸ್ತನ…

kannada t-shirts

ಮೈಸೂರು,ಫೆ,5,2020(www.justkananda.in): ವಿಜ್ಞಾನ ಲೋಕಕ್ಕೆ ವಿಸ್ಮಯವಾದ ಘಟನೆಯೊಂದು ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ತಾಲ್ಲೂಕಿನ ಸಿಂಗಾನಲ್ಲೂರಿನಲ್ಲಿ ನಡೆದಿದೆ. ಹೌದು, ಮಹಿಳೆಯರಲ್ಲಿ ಸ್ತನ ಮೂಡುವುದನ್ನ ನಾವು ನೋಡಿದ್ದೇವೆ ಆದರೆ ಇಲ್ಲಿ ಪುರುಷರೊಬ್ಬರ ಕತ್ತಿನಲ್ಲಿ ಸ್ತನ ಮೂಡಿದ್ದು ಎಲ್ಲರನ್ನೂ ಅಚ್ಚರಿಗೊಳಿಸಿದೆ.

ಸಿಂಗಾನಲ್ಲೂರು ಗ್ರಾಮದ ವ್ಯಕ್ತಿಯೊಬ್ಬರ ಕತ್ತಿನಲ್ಲಿ ಸ್ತನ ಮೂಡಿದೆ. ಈ ಬಗ್ಗೆ ಮಾತನಾಡಿರುವವೈದ್ಯಾಧಿಕಾರಿ ಡಾ.ಗೋವಿಂದಶೆಟ್ಟಿ,  ಸಿಂಗಾನಲ್ಲೂರು ಗ್ರಾಮದ ವ್ಯಕ್ತಿಯೊಬ್ಬರ ಕತ್ತಿನಲ್ಲಿ ಸ್ತನ ಮೂಡಿದೆ.ಅವರನ್ನ ಟೀ.ನರಸೀಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದೆ. ಈ ವ್ಯಕ್ತಿಗೆ ಚಿಕ್ಕಂದಿನಿಂದಲೇ ಇದು ಸಣ್ಣಪ್ರಮಾಣದಲ್ಲಿತ್ತು. ನೋವು ಇರಲಿಲ್ಲ. ಹೀಗಾಗಿ  ಸಂಕೋಚದಿಂದ ಇದನ್ನ  ವೈದ್ಯರಿಗೆ ತೋರಿಸಿರಲಿಲ್ಲ ಚಿಕಿತ್ಸೆಯನ್ನೂ ಪಡೆದಿರಲಿಲ್ಲ. ಆದರೆ ಇದು ದೊಡ್ಡ ಪ್ರಮಾಣದಲ್ಲಿ ಬೆಳೆದಿದ್ದರಿಂದ ಈಗ ಟಿ.ನರಸೀಪುರ ಪಟ್ಟಣಕ್ಕೆ ಆಗಮಿಸಿ ಚಿಕಿತ್ಸೆಗೆ ದಾಖಲಾದರು ಎಂದು  ತಿಳಿಸಿದರು.

ಇಂದು ದಾಖಲಾಗಿದ್ದ ಈ ವ್ಯಕ್ತಿಗೆ ಶಸ್ತ್ರಚಿಕಿತ್ಸೆ ನಡೆಸಿ ಈ ಸ್ತನವನ್ನ ತೆರವುಗೊಳಿಸಲಾಗಿದೆ. ಇದು ಕ್ಯಾನ್ಸರ್ ಗಡ್ಡೆಯಲ್ಲ. ಅಪರೂಪದ ಪ್ರಕರಣದಲ್ಲಿ ಒಂದಾದ ಇದು ವೈದ್ಯಕೀಯ ಲೋಕಕ್ಕೆ ಸವಾಲಾಗಿದೆ ಎಂದು ವೈದ್ಯರು ಅಚ್ಚರಿ ವ್ಯಕ್ತಪಡಿಸಿದರು.

Key words:  Awe -world of science-Breast -covered -man’s- neck-mysore

website developers in mysore