ಪರಿಸರ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗಬಾರದು: ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

ಮೈಸೂರು, ಜೂನ್ 05, 2020 (www.justkannada.in): ಪರಿಸರ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ನಿತ್ಯವೂ ಪರಿಸರವನ್ನು ಕಾಪಾಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.

ಮಾನಸ ಗಂಗೋತ್ರಿ ಕುವೆಂಪು ಪ್ರತಿಮೆ ಮುಂಭಾಗ ಪರಿಸರ ದಿನಾಚರಣೆ ಅಂಗವಾಗಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಸೈಕಲ್ ಜಾಥಾ ಮತ್ತು ್ರಾನ್ಸಿ ಡ್ರೆಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರಾಷ್ಟ್ರೋತ್ಥಾನ ವಿದ್ಯಾಶಾಲೆ ಮಕ್ಕಳಿಗೆ ಪರಿಸರ ಉಳಿಸುವ ಬಗ್ಗೆ ಉತ್ತಮ ಮಾರ್ಗದರ್ಶನವನ್ನು ನೀಡುತ್ತಿದೆ. ಪರಿಸರವನ್ನು ನಾವು ಹಾಳು ಮಾಡಿದ ಪರಿಣಾಮ ಅದು ಕಲುಷಿತಗೊಂಡಿದೆ. ಈ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿ ಪರಿಸರ ರಕ್ಷಣೆಗೆ ಮಕ್ಕಳನ್ನು ಅಣಿ ಮಾಡಬೇಕಿದೆ. ವಿವಿ ಎಂದರೆ ಕೇವಲ ಉನ್ನತ ಶಿಕ್ಷಣಕ್ಕೆ ಮಾತ್ರ ಸೀಮಿತವಾಗಿಲ್ಲ. ಮಕ್ಕಳಿಗೆ ಪರಿಸರದ ಅರಿವು ಮೂಡಿಸುವುದು ಕೂಡ ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ರಾಷ್ಟ್ರೋತ್ಥಾನ ಗಂಗೋತ್ರಿ ಪರಿಸರದ ಪರಿಚಯವನ್ನು ಮಕ್ಕಳಿಗೆ ಮಾಡಿಕೊಟ್ಟಿದೆ. ಆ ಮೂಲಕ ಈ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಸುಮಾರು 250ರಿಂದ 300 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಸ್ಯಶಾಸ್ತ್ರ ವಿಭಾಗದ ಅಧ್ಯಕ್ಷರಾದ ಡಾ.ಅಮೃತೇಶ್, ಹಿರಿಯ ಉಪನ್ಯಾಸಕರಾದ ಡಾ.ಶಿವಮೂರ್ತಿ, ಡಾ.ನಾಗೇಂದ್ರನ್ ಹಾಗೂ ಡಾ.ಎಚ್.ವಿ.ಗಿರೀಶ್, ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಮೈಸೂರು ವಿಭಾಗದ ನಿರ್ದೇಶಕರಾದ ಡಾ.ಎಲ್.ಸವಿತಾ ಸೇರಿದಂತೆ ಇತರರು ಭಾಗವಹಿಸಿದ್ದರು.

ENGLISH SUMMARY…

“Environment Day should not be limited to just one day”: UoM VC
Mysuru, June 5, 2022 (www.justkannada.in): “The Environment Day should not be limited just to one day. It is the responsibility of all of us to protect the environment every day,” opined Prof. G. Hemanth Kumar, Vice-Chancellor, University of Mysore.
He inaugurated the Bicycle Jatha and Fancy Dress program, organized for the Rashtrottana Vidya Kendra students, on the occasion of the Environment Day, in front of the Kuvempu statue on the Manasa Gangotri campus.
“The Rashtrottana Vidyashale is providing good guidance to the students on environment protection. Today’s environment is contaminated because of us. Hence, there is a need to create awareness among the children and prepare them to protect it. University job is not limited only to higher education. We also have to create awareness among the children about environmental conservation. The Rashtrottana has taken up the work of introducing the Gangotri campus to its students today and made the program more meaningful,” he observed.
About 300 children took part in the program. Dr. Amruthesh, President Botany, Senior Professor Dr. Shivamurthy, Dr. Nagendran, Dr. H.V. Girish, Rashtrottana Vidya Kendra, Mysuru’s Regional Director Dr. L. Savitha, and others were present.
Keywords: Environment Day/ University of Mysore/ Manasa Gangotri