ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ: ಔಷಧಿ ಗಿಡ ನೆಟ್ಟು ಸಾಮಾಜಿಕ ಕಳಕಳಿ ಮೆರೆದ ಸಿಎಂ ಹೆಚ್.ಡಿ ಕುಮಾರಸ್ವಾಮಿ

ಬೆಂಗಳೂರು,ಜೂ,6,2019(www.justkannada.in): ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿಧಾನಸೌಧದ ಆವರಣದಲ್ಲಿ  ಔಷಧೀಯ ಗಿಡವನ್ನ ನೆಟ್ಟು ಸಾಮಾಜಿಕ ಕಳಕಳಿ ಮೆರೆದರು.

ನಿನ್ನೆ ವಿಶ್ವಪರಿಸರ ದಿನ ಆಚರಣೆ ಮಾಡಲಾಯಿತು. ಈ ಹಿನ್ನೆಲೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿಧಾನಸೌಧದ ಆವರಣದಲ್ಲಿ  ಕ್ಯಾನ್ಸರ್ ರೋಗ ನಿರೋಧಕ ಅಂಶವುಳ್ಳ ಗಿಡ ನೆಟ್ಟು ಸಾಮಾಜಿಕ ಕಳಕಳಿ ಮೆರೆದರು.

ಗಿಡ ನೆಟ್ಟ ಬಳಿಕ ಮಾತನಾಡಿದ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಇದು ಕ್ಯಾನ್ಸರ್ ನಿರೋಧಕ ಅಂಶವುಳ್ಳ ಸಸಿಯಾಗಿದೆ. ಈ ಮರದಲ್ಲಿನ ತೊಗಟೆ ಮತ್ತು ಬೀಜ ಕ್ಯಾನ್ಸರ್ ನಿರೋಧಕ ಶಕ್ತಿಹೊಂದಿದೆ. ಈ ರೀತಿಯ ಸಸಿಗಳನ್ನ ಬೆಳೆಯಬೇಕು ಎಂದು ರೈತರಿಗೆ ಮನವಿ ಮಾಡ್ತೀನಿ. ಕ್ಯಾನ್ಸರ್ ನಿರೋಧಕ ಜೊತೆಗೆ ಕೈಗಾರಿಕಾ ಉತ್ಪನ್ನಕ್ಕೆ ಬೇಕಾಗಿರುವ ಅಂಶಗಳನ್ನ ಹೊಂದಿದೆ. ಇದರ ಸದ್ಬಾಳಕೆಯನ್ನ ನಾಡಿನ ರೈತರು ಬಳಸಿಕೊಳ್ಳಬೇಕು ಕಿವಿಮಾತು ಹೇಳಿದರು.

Key words: World Environment Day Background-CM HD Kumaraswamy, has been planting the plant.

#WorldEnvironmentDay #Background #CMHDKumaraswamy #plant