ವಿಶ್ವ ಆನೆಗಳ ದಿನಾಚರಣೆ: ಆನೆಗಳ ಬಗ್ಗೆ ಮಾಹಿತಿ ನೀಡುವ ನಾಮ ಫಲಕಗಳ ಹಾಕಿ ಜಾಗೃತಿ….

ಮೈಸೂರು,ಆ,12,2019(www.justkannada.in):  ಇಂದು ವಿಶ್ವ ಆನೆಗಳ ದಿನಾಚರಣೆ ಹಿನ್ನೆಲೆ. ಮೈಸೂರಿನ ಮೃಗಾಲಯದಲ್ಲಿ ಆನೆಗಳ ಮನೆ ಮುಂದೆ ಆನೆಗಳ ಬಗ್ಗೆ ಮಾಹಿತಿ ನೀಡುವ ನಾಮಫಲಕಗಳನ್ನ ಹಾಕಿ ಜಾಗೃತಿ ಮೂಡಿಸಲಾಯಿತು.

ಮೈಸೂರಿನ ಮೃಗಾಲಯದಲ್ಲಿ ವಿಶ್ವ ಆನೆಗಳ ದಿನವನ್ನ ವಿಶೇಷವಾಗಿ ಆಚರಣೆ ಮಾಡಲಾಯಿತು.  ಆನೆಗಳ ದಿನ ನಿತ್ಯದ ಕಾರ್ಯ ಚಟುವಟಿಕೆಗಳ ಬಗ್ಗೆ ಬೆಳಕು ಚೆಲ್ಲುವ ಚಿತ್ರಗಳನ್ನ  ನಾಮ ಫಲಕಗಳ  ಮೂಲಕ  ಜಾಗೃತಿ ಮೂಡಿಸಲಾಯಿತು.

ವನ್ಯಜೀವಿ ಛಾಯಚಿತ್ರಗಾರ ಉಮೇಶ್  ಮಾತನಾಡಿ, ಪ್ರಸ್ತುತ ವಿಶ್ವದಲ್ಲಿ 27 ಸಾವಿರಕ್ಕೂ ಹೆಚ್ಚಿನ ಆನೆಗಳಿವೆ. ಭಾರತದಲ್ಲಿ ಸುಮಾರು 21 ಸಾವಿರ ಆನೆಗಳಿವೆ. ಅದರಲ್ಲೂ ಕರ್ನಾಟಕದಲ್ಲಿಯೇ ಸುಮಾರು 6.5  ಸಾವಿರ ಆನೆಗಳಿದ್ದು, ಭಾರತದಲ್ಲಿಯೇ ಅತಿ ಹೆಚ್ಚು ಆನೆಗಳಿರುವ ರಾಜ್ಯ ಕರ್ನಾಟಕ. 2007 ರಿಂದ ಈಚೆಗೆ ಭಾರತದಲ್ಲಿ ಪ್ರಾಣಿಗಳ ಬೇಟೆ ಕಡಿಮೆಯಾಗಿದೆ. ಈಗಾಗಿ ಆನೆಗಳ ಸಂಸತಿ ಹೆಚ್ಚುತ್ತಿವೆ ಎಂದು ಮಾಹಿತಿ ನೀಡಿದರು.

ಕೆಲವು ರೈತರು ತಮ್ಮ ಬೆಳೆಗಳ ರಕ್ಷಣೆಗೆಂದು ತೋಟ, ಹೊಲಗಳಿಗೆ ವಿದ್ಯುತ್ ಬೇಲಿಗಳನ್ನ ಹಾಕಿ ಆನೆಗಳ ಸಾವಿಗೆ ಕಾರಣವಾಗುತ್ತಿದೆ. ಪ್ರಸ್ತುತ ಅರಣ್ಯ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಯಾಗಿರುವುದರಿಂದ ಕಳ್ಳ ಬೇಟೆಗಳು ದೂರವಾಗಿದೆ. ರಾಷ್ಟ್ರೀಯ ಉದ್ಯಾನಗಳಲ್ಲಿ ರಾತ್ರಿ ಸಂಚಾರದ ವಿಚಾರದಲ್ಲಿ ರಾಜೀಯೆ ಬೇಡ. ಇದರಿಂದ ಪ್ರಾಣಿಗಳ ಸ್ವಾತಂತ್ರಕ್ಕೂ ಹಾಗೂ ಅವುಗಳ ರಕ್ಷಣೆಗೂ ತೊಡಕಾಗುತ್ತದೆ ಎಂದು ವನ್ಯಜೀವಿ ಛಾಯಚಿತ್ರಗಾರ ಉಮೇಶ್  ತಿಳಿಸಿದರು.

Key words: World Elephant Day-awareness – elephant –mysore-zoo