ಅ‌.15ರಂದು ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಕಾರ್ಯಾಗಾರ-  ಪ್ರೊ.ಕೆ.ಎಸ್.ರಂಗಪ್ಪ.

ಮೈಸೂರು,ಅಕ್ಟೋಬರ್,13,2022(www.justkannada.in):  ರಾಷ್ಟ್ರೀಯ ಶಿಕ್ಷಣ ನೀತಿ(ಎನ್ ಇಪಿ) ಬಗ್ಗೆ ಅಕ್ಟೋಬರ್ 15ರಂದು ಕಾರ್ಯಾಗಾರ ನಡೆಸಲಾಗುವುದು ಎಂದು ಮೈಸೂರು ವಿವಿ ವಿಶ್ರಾಂತಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ತಿಳಿಸಿದರು.

ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ ವಿಶ್ರಾಂತ ಕುಲಪತಿಗಳ ವೇದಿಕೆ, ಮೈಸೂರು ವಿವಿಯ ಅಲಮ್ನಿ ಅಸೋಸಿಯೇಷನ್ ವತಿಯಿಂದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಅಂದು ಬೆಳಗ್ಗೆ11ಕ್ಕೆ ನಡೆಯಲಿರುವ ಕಾರ್ಯಾಗಾರವನ್ನು ಶಿಕ್ಷಣ ತಜ್ಞ ದೊರೆಸ್ವಾಮಿ ಉದ್ಘಾಟಿಸಲಿದ್ದಾರೆ. ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಭಾಗವಹಿಸಲಿದ್ದಾರೆ‌ ಎಂದು ಹೇಳಿದರು.

ಈಗಾಗಲೇ ರಾಷ್ಟ್ರೀಯ ಶಿಕ್ಷಣ ನೀತಿಯ 2020ರ ಮೊದಲನೇ ಸ್ನಾತಕ ವರ್ಷದ ಅನುಷ್ಠಾನ ರಾಜ್ಯ ಮಟ್ಟದಲ್ಲಿ ಮುಗಿದು, ವಿದ್ಯಾರ್ಥಿಗಳು, 2ನೇ ಸ್ನಾತಕ ವರ್ಷದ ಅನುಷ್ಠಾನದಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಅದಾಗ್ಯೂ  ಸ್ನಾತಕ ಪದವಿ ಕಾಲೇಜುಗಳು, ಸಂಬಂಧಿಸಿದ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಹಲವಾರು ನ್ಯೂನತೆಗಳಲ್ಲಿದ್ದು, ಅವುಗಳನ್ನು ಗುರುತಿಸಿ, ಪರಿಹಾರ ಸೂಚಿಸುವ ದಿಶೆಯಲ್ಲಿ “Forum of Former Vice Chancellors of Karnataka” ಸಮಿತಿಯೊಂದನ್ನು ರಚಿಸಲಾಗಿದೆ. ಕಳೆದ 2 ತಿಂಗಳಿನಿಂದ ಇದು ಕಾರ್ಯೋನ್ಮುಖವಾಗಿದೆ ಎಂದರು.

ಈಗಾಗಲೇ ಸುಮಾರು 10-12 ಸ್ನಾತಕ ಕಾಲೇಜುಗಳ ಪ್ರಾಂಶುಪಾಲರ ಜತೆ ಸಭೆ ನಡೆಸಲಾಗಿದೆ. ಮೈಸೂರು ವಿವಿ ಕೆಲವು ಅಧಿಕಾರಿಗಳು ಹಾಗೂ ಮೈಸೂರು ವಿಭಾಗದ ಶಿಕ್ಷಣ ಇಲಾಖೆಯ ಕೆಲವು ಅಧಿಕಾರಿಗಳ ಜತೆ ಚರ್ಚಿಸಲಾಗಿದೆ. ಈ ವೇಳೆ ಹತ್ತಾರು ನ್ಯೂನತೆಗಳು ನಮ್ಮ ಗಮನಕ್ಕೆ ಬಂದಿದ್ದು, ಅವುಗಳ ಪರಿಹಾರ ಸೂಕ್ತ ಸಮಯದಲ್ಲೇ ಸುಧಾರಿಸಿ ಪದವಿ ಕಾಲೇಜುಗಳ ಮಟ್ಟದಲ್ಲಿ ಸಾಂಕೇತಿಕವಾಗಿ ಆಯ್ದ 10-12 ಪದವಿ ಕಾಲೇಜುಗಳಲ್ಲಿನ ಪ್ರತಿ ಕಾಲೇಜಿನಿಂದ 3 ವಿದ್ಯಾರ್ಥಿಗಳು ( ಕಲಾ ವಿಭಾಗ + ವಿಜ್ಞಾನ ವಿಭಾಗ – ಕಾಮರ್ಸ್ ವಿಭಾಗ) ಮತ್ತು ಸಂಬಂಧಿಸಿದ 3 ಉಪನ್ಯಾಸಕರು ಜತೆಗೆ ಆಯಾಯ ಕಾಲೇಜಿನ ಪ್ರಾಂಶುಪಾಲರುಗಳನ್ನು ಸೇರಿಸಲಾಗುತ್ತದೆ. ಒಟ್ಟು 30 ವಿದ್ಯಾರ್ಥಿಗಳು + 30 ಉಪನ್ಯಾಸಕರು + 30 Principal ಗಳನ್ನು ಒಂದೆಡೆ ಸೇರಿಸಿ, ಈಗಾಗಲೇ ಗಮನಕ್ಕೆ ಬಂದಿರುವ ಸಮಸ್ಯೆಗಳನ್ನು ಪರಿಹರಿಸಿ ಸೂಕ್ತ ಮಾರ್ಗದರ್ಶನ ನೀಡುವ ಸದುದ್ದೇಶದಿಂದ ಈ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಹೇಳಿದರು.

ಕಾರ್ಯಾಗಾರದ ವರದಿ ತಯಾರಿಸಿ ಮುಂದೆ ಅನುಷ್ಠಾನಗೊಳಿಸಿ ನ್ಯೂನತೆಗಳನ್ನು ಬಹುಪಾಲು ಪರಿಹರಿಸಲು ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ, ಮಾನ್ಯ ಸಚಿವರು ಹಾಗೂ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ವರದಿ ಕಳುಹಿಸಲಾಗುತ್ತದೆ. ಜತೆಗೆ, ಪದವಿ ಕಾಲೇಜುಗಳ ಇನ್ನುಳಿದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರುಗಳಿಗೆ ಇಂತಹದೇ Orientation ಕಾರ್ಯಕ್ರಮ ನಡೆಸುವಂತೆ ತಿಳಿಸಿ, ಜತೆಗೆ ವಿವಿ ಹಾಗೂ ಕಾಲೇಜು ಶಿಕ್ಷಣ ಇಲಾಖೆಯು ಈ ಬಗ್ಗೆ ಆಸಕ್ತಿ ತೋರಿಸುವ ಪ್ರಯತ್ನ ಇದಾಗಿದೆ ಎಂದರು.

ಸುದ್ಧಿಗೋಷ್ಠಿಯಲ್ಲಿ ವಿಶ್ರಾಂತ ಕುಲಪತಿ ಡಾ.ಎನ್. ರಾಮೇಗೌಡ, ಶ್ರೀಕಂಠಸ್ವಾಮಿ ಇದ್ದರು.

Key words: Workshop – National Education Policy –Oct 15-  Prof. K.S. Rangappa

ENGLISH SUMMARY…

Workshop on NEP on Oct. 15: Prof. K.S. Rangappa
Mysuru, October 13, 2022 (www.justkannada.in): University of Mysore, former Vice-Chancellor Prof. K.S. Rangappa, today informed that a workshop on the National Education Policy (NEP) will be held on October 15.
Addressing a press meet in Mysuru today, he informed that the workshop has been organized by the Karnataka Former Vice-Chancellors’ Forum, Alumni Association of the University of Mysore, at the Vignana Bhavana in Manasa Gangotri campus. The workshop will be inaugurated by Education Expert Doreswamy, at 11.00 am. University of Mysore Vice-Chancellor, Prof. G. Hemanth Kumar will be present.
“The first year implementation of the NEP 2020 has already been done at the state-level, and the students are facing at the second year. However, there are still several shortcomings in several postgraduate colleges, universities and Department of Collegiate Education. Hence, this workshop has been organized to identify all the shortcomings and obtain suitable solutions for the same. The Forum of former Vice-Chancellors’ of Karnataka has been formed for this purpose, which is functional from the last two months, He informed.
Former Vice-Chancellor Dr. N. Ramegowda, shrikantaswamy and others were present in the press meet.
Keywords: University of Mysore/ Press meet/ Prof. K.S. Rangappa/ workshop/ NEP 2020