ಮೈಸೂರು ನಗರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ- ನೂತನ ಮೇಯರ್ ಶಿವಕುಮಾರ್.

ಮೈಸೂರು,ಸೆಪ್ಟಂಬರ್,6,2022(www.justkannada.in): ಮೈಸೂರು ಮೇಯರ್ ಹಾಗೂ ಉಪಮೇಯರ್ ಎರಡು ಸ್ಥಾನವನ್ನ ಪಡೆದು ಬಿಜೆಪಿ ಅಧಿಕಾರಕ್ಕೇರಿದ್ದು, ಈ ನಡುವೆ ಮುಂದಿನ ದಿನಗಳಲ್ಲಿ ಮೈಸೂರು ನಗರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ನೂತನ ಮೇಯರ್ ಶಿವಕುಮಾರ್ ತಿಳಿಸಿದರು.

ಮೇಯರ್ ಆಗಿ ಆಯ್ಕೆಯಾದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಶಿವಕುಮಾರ್,  ಸಾಮಾನ್ಯವಾಗಿ ವರ್ಗಕ್ಕೆ ಮೀಸಲಾಗಿದ್ದ ಮೇಯರ್ ಸ್ಥಾನಕ್ಕೆ  ಒಬ್ಬ ಪರಿಶಿಷ್ಟ ಜಾತಿಯ ನಾಯಕ ಜನಾಂಗದ ನನ್ನನ್ನು ಮೇಯರ್ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ಇದು ಬಿಜೆಪಿಯಿಂದ ಮಾತ್ರ ಸಾಧ್ಯ. ನನಗೆ ಎಲ್ಲ ರೀತಿಯಲ್ಲೂ ಸಹಕರಿಸಿದ ಪಕ್ಷದ ವರಿಷ್ಠರಿಗೆ ,ಮುಖಂಡರಿಗೆ ಅನಂತ ಧನ್ಯವಾದಗಳು ಎಂದರು.

ಪಾರಂಪರಿಕ ನಗರ,ಅರಮನೆಗಳ ನಗರ, ಸಾಂಸ್ಕೃತಿಕ ನಗರ ಎಂದು ಏನು ಹೆಸರದಿಯೋ ಆ ಹೆಸರನ್ನು ಉಳಿಸುವ ಕೆಲಸ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಮೈಸೂರು ನಗರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಂತಿಮ ಕ್ಷಣದಲ್ಲಿ ಜೆಡಿಎಸ್ ಗೆ ಉಪಮೇಯರ್ ಸ್ಥಾನ ಕೈತಪ್ಪಿದ ಕುರಿತು ಪ್ರತಿಕ್ರಿಯಿಸಿದ ಮೇಯರ್  ಶಿವಕುಮಾರ್,  ಅದು ನಾವು ಮಾಡಿದ ತಪ್ಪಲ್ಲ. ಅವರು ನಾಮಪತ್ರ ಸಲ್ಲಿಸುವಾಗ ದಾಖಲಾತಿ ಸಲ್ಲಿಸುವಲ್ಲಿ ತಪ್ಪು ಮಾಡಿದ್ದಾರೆ. ಇದಕ್ಕೆ ನಾವು ಹೊಣೆ ಅಲ್ಲ  ಎಂದರು.

Key words: work – comprehensive -development – Mysore city – New Mayor- Shivakumar.