ಹಾಡಹಗಲೇ ಮಹಿಳೆಯ ಕೊಲೆ ; ಬೆಚ್ಚಿಬಿದ್ದ ಜನತೆ

Promotion

 

ಪಿರಿಯಾಪಟ್ಟಣ, ಫೆ.03, 2020 : ( www.justkannada.in news ) ಇಲ್ಲಿನ ಬ್ರಾಹ್ಮಣ ಬೀದಿಯ ವಾಸವಾಗಿದ್ದ ಮಹಿಳೆಯೊಬ್ಬಳನ್ನು ಹಾಡಹಗಲೇ ಕೊಲೆ ಮಾಡಿದ ಘಟನೆ ನಡೆದಿದೆ. ಇಂದ್ರೇಶ್ ಎಂಬುವವರ ಪತ್ನಿ ಕಲಾವತಿ ಹತ್ಯೆಗೀಡಾದ ಮಹಿಳೆ.
ಈಕೆ ಇಂದು ಬೆಳಗ್ಗೆ ಮನೆಯಲ್ಲಿ ಒಬ್ಬರೇ ಈ ಘಟನೆ ನಡೆದಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಕೊಲೆಯಾದ ಮಹಿಳೆ ಶವವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ಆಸ್ಪತ್ರೆ ಮುಂದೆ ಪ್ರತಿಭಟನೆ:

ಪಿರಿಯಾಪಟ್ಟಣದಲ್ಲಿ ಇತ್ತೀಚೆಗೆ ಕಳ್ಳತನ, ದರೋಡೆ,ಮತ್ತು ಕೊಲೆ, ಪ್ರಕರಣಗಳು ಹೆಚ್ಚಾಗಿವೆ. ಇದಕ್ಕೆ ಪೊಲೀಸರ ವೈಫಲ್ಯವೇ ಕಾರಣ ಎಂದು ಆರೋಪಿಸಿದ ಸಾರ್ವಜನಿಕರು ಆಸ್ಪತ್ರೆ ಮುಂದೆ ಕೆಲ ಕಾಲ ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಮೈಸೂರು ಪೊಲೀಸ್ ಹೆಚ್ಚುವರಿ ಅಧೀಕ್ಷಕಿ ಸ್ನೇಹಾ ಹಾಗೂ ಡಿವೈಎಸ್ಪಿ ಸುಂದರರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು ಎಂದರು. ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಹಾಡಹಗಲೇ ಈ ರೀತಿಯ ಕೃತ್ಯ ನಡೆದಿರುವುದು ಪಿರಿಯಾಪಟ್ಟಣದ ನಾಗರಿಕರನ್ನು ಬೆಚ್ಚಿಬೀಳಿಸಿದೆ. ಸ್ಥಳಕ್ಕೆ ಪಿರಿಯಾಪಟ್ಟಣ ಶಾಸಕ ಕೆ ಮಹದೇವ್ ,ಮಾಜಿ ಶಾಸಕ ಹೆಚ್ ಸಿ ಬಸವರಾಜ್, ಭೇಟಿ ನೀಡಿ ರಾತ್ರಿ ಸಮಯದಲ್ಲಿ ಹೆಚ್ಚು ಪೊಲೀಸರನ್ನು ಗಸ್ತು ಕರ್ತವ್ಯಕ್ಕೆ ನಿಯೋಜನೆ ಮಾಡುವಂತೆ ತಿಳಿಸಿದರು.

key words : women-murdered-periyapatna-mysore-police-protest-public