‘ಮಹಿಳಾ ಕಾಂಗ್ರೆಸ್ ನಡಿಗೆ ಅ‌ನ್ನದಾತರ ಬಳಿಗೆ’ ಅಭಿಯಾನ’ : ಭತ್ತ ಮತ್ತು ರಾಗಿ ಕಟಾವು ಮಾಡಿ ರೈತರ ಜತೆ ಊಟ ಸವಿದ ‘ಕೈ’ ಕಾರ್ಯಕರ್ತೆಯರು….

ಮೈಸೂರು,ಡಿಸೆಂಬರ್,17,12,2020(www.justkannada.in): ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕೃಷಿ ಮಸೂದೆಗೆ ವಿರೋಧ ವ್ಯಕ್ತಪಡಿಸಿ ರೈತರು  ಪ್ರತಿಭಟನೆ ನಡೆಸುತ್ತಿದ್ದು,  ರೈತರ ಹೋರಾಟಕ್ಕೆ  ರಾಜ್ಯ ಕಾಂಗ್ರೆಸ್ ಮಹಿಳಾ ಘಟಕ ವಿನೂತನವಾಗಿ  ಬೆಂಬಲ ನೀಡಿದೆ.womans-congress-activitist-walk-farmer-paddy-mysore

ಮಹಿಳಾ ಕಾಂಗ್ರೆಸ್ ನಡಿಗೆ ಅ‌ನ್ನದಾತರ ಬಳಿಗೆ ಎಂಬ ಅಭಿಯಾನದ ಮೂಲಕ ರೈತರ ಹೊರಾಟಕ್ಕೆ ರಾಜ್ಯ ಕಾಂಗ್ರೆಸ್ ಮಹಿಳಾ ಘಟಕ ಅನ್ನದಾತರ ಬೆಂಬಲಕ್ಕೆ ನಿಂತಿದ್ದು, ಈ ನಡುವೆ ಈ ವಿನೂತನ ಅಭಿಯಾನ ಮೈಸೂರು ಜಿಲ್ಲೆಯ ಹುಣಸೂರಿನಿಂದ ಆರಂಭವಾಗಿದೆ.

ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ  ಅಧ್ಯಕ್ಷೆ ಡಾ. ಪುಷ್ಪಾ ಅಮರ್ ನಾಥ್ ನೇತೃತ್ವದಲ್ಲಿ ರೈತರ ಹೊಲದತ್ತ ನಡಿಗೆ ಅಭಿಯಾನ  ಪ್ರಾರಂಭಿಸಿದ್ದು, ಇಂದು ಡಾ.ಪುಷ್ಪ ಅಮರ್ ನಾಥ್ ಮತ್ತು ಮಹಿಳಾ ಕಾರ್ಯಕರ್ತೆಯರು ರೈತರ ಹೊಲಗಳಿಗೆ ಭೇಟಿ ನೀಡಿ ಶ್ರಮದಾನ ಮಾಡಿದರು.womans-congress-activitist-walk-farmer-paddy-mysore

ಭತ್ತ ಮತ್ತು ರಾಗಿ ಕಟಾವು ಮಾಡಿ ರೈತರಿಗೆ ಸಾಥ್ ನೀಡಿ  ಹೊಲದಲ್ಲೇ ಬೆಳೆದ ಉತ್ಲನ್ನಗಳಿಂದ ಜಮೀನಿನಲ್ಲೇ ಅಡುಗೆ ತಯಾರು ಮಾಡಿದ  ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರು ರೈತರ ಜೊತೆ ಹೊಲದಲ್ಲೇ ಊಟ ಸವಿದರು. ನಂತರ ರೈತರ ಸಮಸ್ಯೆಗಳನ್ನು ಆಲಿಸುತ್ತಾ ಕೃಷಿ ಮಸೂದೆ ಬಗ್ಗೆ ರೈತರೊಂದಿಗೆ ಚರ್ಚಿಸಿದರು. ಇದೇ ವೇಳೆ ರೈತರು, ರೈತ ಮಹಿಳೆಯರು, ಕೃಷಿ ಕೂಲಿ ಕಾರ್ಮಿಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಮೈಸೂರು ಜಿಲ್ಲೆಯಿಂದ ಎಲ್ಲಾ ಜಿಲ್ಲೆಗಳಲ್ಲೂ ಮಹಿಳಾ ಕಾಂಗ್ರೆಸ್ ನಿಂದ  ಈ ಅಭಿಯಾನ ಹಮ್ಮಿಕೊಳ್ಳಲು ಮುಂದಾಗಿದೆ.

Key words: Woman’s Congress –activitist-walk –farmer-paddy –mysore