ಮಹಿಳೆ ಪರಿಹಾರ ಹಣ ವಾಪಸ್ ಎಸೆದ ವಿಚಾರ: ಕೆಲವರ ಕುಮ್ಮಕ್ಕಿನಿಂದ ಹಣ ತಿರಸ್ಕರಿಸಿದ್ದಾರೆ ಎಂದ ಮಾಜಿ ಸಚಿವ ಯುಟಿ ಖಾದರ್.

ಬಾಗಲಕೋಟೆ,ಜುಲೈ,16,2022(www.justkannada.in):  ಕೆರೂರು ಗ್ರಾಮದಲ್ಲಿ ಗಲಭೆಯಲ್ಲಿ ಗಾಯಗೊಂಡವರಿಗೆ   ವಿಪಕ್ಷ ನಾಯಕ ಸಿದ್ದರಾಮಯ್ಯ ಕೊಟ್ಟ  ಪರಿಹಾರದ ಹಣವನ್ನ ಮಹಿಳೆ ವಾಪಸ್ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ  ಮಾಜಿ ಸಚಿವ ಯು ಟಿ ಖಾದರ್ , ಕೆಲವರ ಕುಮ್ಮಕ್ಕಿನಿಂದ ಹಣ ತಿರಸ್ಕರಿಸಿದ್ದಾರೆ. ಮಹಿಳೆ ಹಣ ಎಸೆದ ಘಟನೆಯಿಂದ ಸಿದ್ದರಾಮಯ್ಯನವರ ವ್ಯಕ್ತಿತ್ವಕ್ಕೆ ಗೌರವ ಕುಂದು ಉಂಟಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಬಾಗಲಕೋಟೆಯಲ್ಲಿ ಮಾತನಾಡಿದ ಯು.ಟಿ ಖಾದರ್, ರಾಜ್ಯದ ಜನರಿಗೆ ಅನ್ಯಾಯವಾದಾಗ ಎಲ್ಲ ವರ್ಗದ ಜನರಿಗಾಗಿ ಧ್ವನಿ ಎತ್ತುವ ವ್ಯಕ್ತಿತ್ವವನ್ನ ಸಿದ್ದರಾಮಯ್ಯ ಹೊಂದಿದ್ದಾರೆ. ನ್ಯಾಯ ನಮಗೆ ಕೊಡಲಿ ಅಂತ ಕೇಳೋಕೆ, ನ್ಯಾಯ ಕೊಡಲಿಕ್ಕೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಿದ್ದರಾಮಯ್ಯ ಮುಖ್ಯಮಂತ್ರಿಗಳಲ್ಲ, ಗೃಹ ಸಚಿವರು ಅಲ್ಲ. ಮಾನವೀಯತೆ ದೃಷ್ಟಿಯಿಂದ ವೈಯಕ್ತಿಕವಾಗಿ ಸಿದ್ಧರಾಮಯ್ಯ ಸಹಾಯ ಮಾಡಿದ್ದರು. ಆದರೆ ಕೆಲವರ ಕುಮ್ಮಕ್ಕಿನಿಂದ ಮಹಿಳೆ ಹಣ ತಿರಸ್ಕರಿಸಿದ್ದಾರೆ. ನಂತರ ಮನ ಬದಲಾಯಿಸಿ ಹಣ ಸ್ವೀಕರಿಸಿದ್ದಾರೆ ಎಂದರು.

ಕೆಲವೊಂದು ಕಾಣದ ಕೈಗಳು ಈ ಸಂದರ್ಭದ ಲಾಭವನ್ನು ಪಡೆದುಕೊಂಡು ಮುಗ್ದ ಮಹಿಳೆಯರಿಗೆ ತಮ್ಮ ಕುಮ್ಮಕ್ಕು ಕೊಟ್ಟು, ಈ ರೀತಿ ಬಿಂಬಿಸುವ ಪ್ರಯತ್ನ ಮಾಡಿದ್ದಾರೆ‌‌‌‌‌. ನಿಜವಾಗಿ ನೊಂದವರಿಗೆ ಯಾವುದು ಬೇಕಾಗಿಲ್ಲ. ಅವರಿಗೆ ನ್ಯಾಯ ಬೇಕು. ಈಗ ಬಿಜೆಪಿ ಸರಕಾರವಿದೆ. ಬಿಜೆಪಿ ಸರ್ಕಾರದಲ್ಲಿ ಆಗುವಂತಹ ಸಮಸ್ಯೆಗಳು ಏನು ಎಲ್ಲರಿಗೂ ಗೊತ್ತು. ಕೆಲವೊಂದು ಶಕ್ತಿಗಳು ತಮ್ಮ ಹಿಡನ್ ಅಜೆಂಡಾ ಅನುಷ್ಠಾನಗೊಳಿಸುವ ಪ್ರಯತ್ನ ಮಾಡುತ್ತಿವೆ‌‌  ಎಂದು ಯುಟಿ ಖಾದರ್ ಕಿಡಿಕಾರಿದರು.

Key words:  woman-threw back -compensation –money- siddaramaiah-UT Khader