ಕಾಂಗ್ರೆಸ್ ನಾಯಕರ ಹೆಸರಲ್ಲಿ ಲೋನ್ ಕೊಡಿಸುವುದಾಗಿ ಹೇಳಿ ಮಹಿಳೆಯಿಂದ ಜನರಿಗೆ ವಂಚನೆ..

kannada t-shirts

ಹುಬ್ಬಳ್ಳಿ,ಫೆಬ್ರವರಿ,27,2021(www.justkannada.in):   ಕಾಂಗ್ರೆಸ್ ನಾಯಕರ ಹೆಸರಲ್ಲಿ  ಲೋನ್ ಕೊಡಿಸುವುದಾಗಿ ಹೇಳಿ ಜನಸಾಮಾನ್ಯರಿಗೆ ಮಹಿಳೆಯೊಬ್ಬರು ವಂಚನೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.jk

ಹುಬ್ಬಳ್ಳಿ-ಧಾರವಾಡದ ಪೂರ್ಣಿಮಾ ಸವದತ್ತಿ ಎಂಬ ಮಹಿಳೆಯೇ ವಂಚನೆ ಮಾಡಿರುವುದು. ಈಗೆ ಕಾಂಗ್ರೆಸ್ ಕಾರ್ಯಕರ್ತೆ ಎಂದು ಹೇಳಲಾಗುತ್ತಿದೆ. ಇನ್ನು  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕಪ್ಪು ಹಣದಲ್ಲಿ ಲೋನ್ ಕೊಡಿಸುವುದಾಗಿ ಹೇಳಿ ಜನರಿಗೆ ಲಕ್ಷಾಂತರ ರೂಪಾಯಿ  ವಂಚನೆ ಮಾಡಿರುವ ಆರೋಪ ಕೇಳಿ ಬಂದಿದೆ.woman-cheating-claiming-congress-leaders-give-loans-hubli

ಕಾಂಗ್ರೆಸ್ ನಾಯಕರ ಹೆಸರು ಹೇಳಿ ವಿದ್ಯಾರ್ಥಿ ಲೋನ್, ಹೋಮ್ ಲೋನ್ ಸೇರಿದಂತೆ ವಿವಿಧ ಲೋನ್ ಗಳನ್ನು ಕಡಿಮೆ ಬಡ್ಡಿ ದರದಲ್ಲಿ ಕೊಡುವುದಾಗಿ ಹೇಳಿ ಮಹಿಲೆ ಪೂರ್ಣಿಮಾ ವಂಚಿಸಿದ್ದಾಳೆ ಎನ್ನಲಾಗಿದೆ. ಮಹಿಳೆಯಿಂದ ಮೋಸ ಹೋದವರು ಪೊಲೀಸ್ ಠಾಣೆಗೆ ದೂರು ನೀಡಿದ್ದು ಈ ಕುರಿತು ಪ್ರಕರಣ ದಾಖಲಾಗಿದೆ.

Key words:  Woman -cheating -claiming -Congress leaders- give- loans-hubli

website developers in mysore