ವಾಂಖೆಡೆ ಮೈದಾನದಲ್ಲಿ ವಿಂಡೀಸ್-ಟೀಂ ಇಂಡಿಯಾ ಅಂತಿಮ ಟಿ-20 ಕದನ

ಮುಂಬೈ, ಡಿಸೆಂಬರ್ 11, 2019 (www.justkannada.in): ಭಾರತ ಮತ್ತು ವೆಸ್ಟ್‌ಇಂಡೀಸ್‌ ಟಿ20 ಸರಣಿಯ ಕಿರೀಟಕ್ಕಾಗಿ ಬುಧವಾರ ವಾಂಖೆಡೆ ಮೈದಾನದಲ್ಲಿ ಸೆಣೆಸಾಟ ನಡೆಸಲಿದೆ.

ಮುಂದಿನ ವರ್ಷ ಆಸ್ಟ್ರೇಲಿಯದಲ್ಲಿ ನಡೆಯುವ ಟಿ20 ವಿಶ್ವಕಪ್‌ಗೆ ಸುಸಜ್ಜಿತ ತಂಡವನ್ನು ರಚಿಸುವ ನಿಟ್ಟಿನಲ್ಲಿ ಇತ್ತಂಡಗಳಿಗೂ ಈ ಸರಣಿ ಗೆಲುವು ಮುಖ್ಯವಾಗಿದೆ.

ವಾಂಖೆಡೆಯಲ್ಲಿ ಆಡಿದ ಈ ಹಿಂದಿನ 6 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 5 ಪಂದ್ಯಗಳು ಚೇಸಿಂಗ್‌ ಮಾಡಿದ ತಂಡವೇ ಜಯಭೇರಿ ಬಾರಿಸಿದೆ. ವಾಂಖೆಡೆಯ ಇತಿಹಾಸ ಗಮನಿಸಿದರೆ ವೆಸ್ಟ್‌ಇಂಡೀಸ್‌ ಗೆಲುವಿನ ನೆಚ್ಚಿನ ತಂಡವಾಗಿದೆ.

ವಾಂಖೆಡೆಯಲ್ಲಿ ಗರಿಷ್ಠ ಗೆಲುವು ಸಾಧಿಸಿದವರ ಪಟ್ಟಿಯಲ್ಲಿ ವೆಸ್ಟ್‌ ಇಂಡೀಸ್‌ ಮುಂದಿದೆ. ಮಾತ್ರವಲ್ಲದೇ 2017ರಲ್ಲಿ ನಡೆದ ಪಂದ್ಯದಲ್ಲಿ ಭಾರತವು ವೆಸ್ಟ್‌ ಇಂಡೀಸ್‌ಗೆ 7 ವಿಕೆಟ್‌ಗಳಿಂದ ಶರಣಾಗಿದೆ. ಚೇಸಿಂಗ್‌ ಮಾಡುವ ತಂಡವೇ ಗೆಲ್ಲುವ ಸಾಧ್ಯತೆಯಿರುವ ಕಾರಣ ಟಾಸ್‌ ಗೆದ್ದ ತಂಡ ಮೊದಲು ಫೀಲ್ಡಿಂಗ್‌ ಆಯ್ಕೆ ಮಾಡುವುದರಲ್ಲಿ ಅನುಮಾನವಿಲ್ಲ.