“ನಾವು ಏಕೆ ಕ್ವಾಟ್ರಸ್ ಖಾಲಿ ಮಾಡಬೇಕು? : ತಟ್ಟೆ, ಲೋಟ ಬಡಿದು ಸರ್ಕಾರದ ವಿರುದ್ಧ ಸಾರಿಗೆ ನೌಕರರು, ಕುಟುಂಬಸ್ಥರಿಂದ ‌ಆಕ್ರೋಶ”

ಮೈಸೂರು,ಏಪ್ರಿಲ್,12,2021(www.justkannada.in) : ಕ್ಚಾಟ್ರಸ್ ಖಾಲಿ ಮಾಡಿ ಅಂತಾರೇ, ಬಾಡಿಗೆ ಕೊಡುವುದಿಲ್ವ. ನಾವು ಏಕೆ ಕ್ವಾಟ್ರಸ್ ಖಾಲಿ ಮಾಡಬೇಕು? ಎಂದು ಸರ್ಕಾರದ ವಿರುದ್ಧ ಸಾರಿಗೆ ನೌಕರನ ಪತ್ನಿ ಆಕ್ರೋಶವ್ಯಕ್ತಪಡಿಸಿದರು.Sanskrit Vivia,8th event,30 people,Ph.D,43graduates,M.Phil,Awarded 

ನಗರದ ಗಾಂಧಿ ವೃತದ ಬಳಿ ಸೋಮವಾರ ಜಮಾವಣೆಗೊಂಡ ಸಾರಿಗೆ ನೌಕರರು ಹಾಗೂ ಕುಟುಂಬಸ್ಥರು ತಟ್ಟೆ, ಲೋಟ ಚಳುವಳಿ ನಡೆಸಿದರು. ತಟ್ಟೆ, ಲೋಟ ಬಡಿದು ಸರ್ಕಾರದ ವಿರುದ್ಧ ‌ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಸಾರಿಗೆ ನೌಕರನ ಪತ್ನಿ ಸುನೀತಾ ಎಂಬುವವರು ಮಾತನಾಡಿ, ನಮ್ಮ ಯಜಮಾನ್ರು ದಿನಪೂರ್ತಿ ದುಡಿಯುತ್ತಾರೆ. ಬರುವ ಹದಿನೆಂಟು ಸಾವಿರಕ್ಕೆ ಏನ್ ಬರುತ್ತೆ. ಮನೆ ಬಾಡಿಗೆ, ಗ್ಯಾಸ್, ಮಕ್ಕಳ ವಿದ್ಯಾಭ್ಯಾಸ ಶುಲ್ಕ ಕಟ್ಟಿಲ್ಲ‌ ಎಂದು ಕಿಡಿಕಾರಿದ್ದಾರೆ.

ನಾಳೆ ಹಬ್ಬ ಇದೆ, ಮಕ್ಕಳಿಗೆ ಬಟ್ಟೆ ಕೊಡಿಸಿಲ್ಲ, ಎಲ್ಲರ ಮಕ್ಕಳು ಹೊಸ ಬಟ್ಟೆ ಹಾಕೊಂಡ್ರೆ ನಮ್ಮ ಮಕ್ಕಳು ಹಾಗೆಯೇ ಇರಬೇಕ ಎಂದು ಸರ್ಕಾರದ ವಿರುದ್ಧ ಪ್ರತಿಭಟನಾ ನಿರತ ಮಹಿಳೆಯ ಆಕ್ರೋಶವ್ಯಕ್ತಪಡಿಸಿದ್ದಾರೆ.

 

ಕೂಡಲೇ 6ನೇ ವೇತನ ಪರಿಷ್ಕರಣೆ ಮಾಡಬೇಕು. ಸರ್ಕಾರ ಬೇಡಿಕೆ ಈಡೇರಿಸದಿದ್ದಲ್ಲಿ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

key words : Why-Should-We-Empty-Quattrus?-Transportation-Employees-
Family-members-trays-bottles-Knocking-Government-opposite-Outrage