ವಿಶ್ವದೆಲ್ಲೆಡೆ ವಾಟ್ಸಪ್ ಸರ್ವರ್ ಡೌನ್ : ಪರದಾಡಿದ ಬಳಕೆದಾರರು.

kannada t-shirts

ಬೆಂಗಳೂರು,ಅಕ್ಟೋಬರ್,25,2022(www.justkannada.in):  ವಿಶ್ವದಾದ್ಯಂತ ಸುಮಾರು 2 ಗಂಟೆಗಳ ಕಾಲ ವಾಟ್ಸಪ್ ಸರ್ವರ್ ಡೌನ್ ಆಗಿ ಬಳಕೆದಾರರು ಪರದಾಡಿದ್ದಾರೆ.

ಮೇಸಜ್ ಕಳುಹಿಸಲು ಆಗದೇ ಬಳಕೆದಾರರು ಪರದಾಡಿದರು. ತಾಂತ್ರಿಕ ಸಮಸ್ಯೆಯಿಂದ ಸರ್ವರ್ ಡೌನ್ ಆಗಿತ್ತು ಎಂದು  ಹೇಳಲಾಗುತ್ತಿದೆ.

ಮೆಟಾ ಒಡೆತನದ ವಾಟ್ಸಪ್ ಬಳಕೆದಾರರಿಗೆ ಸೇವೆಯಲ್ಲಿ ವ್ಯತ್ಯಯವಾಗಿತ್ತು. ಇಂದು ಮಧ್ಯಾಹ್ನ 12:30 ನಂತರ ವಾಟ್ಸ್​ಆಯಪ್ ಕಾರ್ಯ ನಿರ್ವಹಿಸದೇ ಸ್ಥಗಿತವಾಗಿತ್ತು. ಆಂಡ್ರ್ಯಾಯ್ಡ್ , ಐಒಎಸ್ ಹಾಗೂ ವೆಬ್‌ ಅಪ್ಲಿಕೇಷನ್ಸ್‌ಗಳಲ್ಲೂ ಕೆಲಸ ಮಾಡುತ್ತಿಲ್ಲ. ವಾಟ್ಸ್​ಆಯಪ್​ ನಲ್ಲಿ ಯಾರಿಗೂ ಮೆಸೇಜ್ ಸೆಂಡ್ ಮಾಡಲು ಆಗುತ್ತಿಲ್ಲ. ಅಂತೆಯೆ ಯಾವುದೇ ಮೆಸೇಜ್ ರಿಸಿವ್ ಆಗುತ್ತಿರಲಿಲ್ಲ. ಈಗ ತಾಂತ್ರಿಕ ದೋಷ ಸರಿಪಡಿಸಲಾಗಿದ್ದು ವಾಟ್ಸಪ್ ಪುನಾರಂಭಗೊಂಡಿದೆ.

Key words: WhatsApp server – down – world.

ENGLISH SUMMARY..

WhatsApp server down causes chaos among users across the world
Bengaluru, October 25, 2022 (www.justkannada.in): WhatsApp users across the world were under deep chaos for sometime as they couldn’t send or receive messages due to server down.
It is learnt that the WhatsApp server was down for 30 minutes, resulting in chaos among the users. A technical problem is said to be the reason behind this. WhatsApp users couldn’t send or receive messages for nearly 30 minutes from 12.30 pm today. The problem existed in all the platforms including android, IoS and web applications.
However, the problem was set right and the services were restored. But we are so used to these technical platforms that it really caused panic among us, isn’t it?
Keywords: WhatsApp/ server down/ 30 minutes

website developers in mysore