ಮೆಸೆಜಿಂಗ್ ಅಪ್ಲಿಕೇಶನ್ ವಾಟ್ಸಪ್ ಹ್ಯಾಕ್; ಸಾಫ್ಟ್ ವೇರ್ ಅಪ್ ಡೇಟ್​ ಮಾಡಿಕೊಳ್ಳುವಂತೆ ಬಳಕೆದಾರರಿಗೆ ಕಂಪನಿ ಸೂಚನೆ

kannada t-shirts

ನವದೆಹಲಿ:ಮೇ-14:(www.justkannada.in) ವಿಶ್ವದ ನಂಬರ್ ಒನ್ ಮೆಸೆಜಿಂಗ್ ಅಪ್ಲಿಕೇಶನ್ ವಾಟ್ಸಪ್ ಹ್ಯಾಕ್ ಆಗಿದೆ. ವಾಟ್ಸ್​ಆ್ಯಪ್​ ವಾಯ್ಸ್​ಕಾಲ್​ ಮೂಲಕ ಮಿಸ್ಡ್​ಕಾಲ್​ ಕೊಟ್ಟು ವೈರಸ್​ ಅನ್ನು ಬಿಡುಗಡೆ ಮಾಡುವ ಸೈಬರ್​ ದಾಳಿಯನ್ನು ವಾಟ್ಸ್​ಆ್ಯಪ್​ ಸಂಸ್ಥೆ ಪತ್ತೆ ಮಾಡಿದೆ.

ಇಸ್ರೇಲ್​ನ ಎನ್​ಎಸ್​ಒ ಸಮೂಹ ಈ ವೈರಸ್​ ಬಿಡುಗಡೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಕುರಿತು ಸಿಟಿಜನ್​ ಲ್ಯಾಬ್​ ಎಂಬ ಸಂಸ್ಥೆಯ ಸಂಶೋಧಕ ಜಾನ್​ ಸ್ಕಾಟ್​ ರೇಲ್ಟನ್​, ನಿರ್ದಿಷ್ಟವಾಗಿ ಸರ್ಕಾರಿ ಸಂಸ್ಥೆಗಳಿಗಾಗಿ ಸ್ಪೈವೇರ್​ ಅನ್ನು ಸಿದ್ಧಪಡಿಸಿ ಬಿಡುಗಡೆ ಮಾಡುವ ಸಂಸ್ಥೆ ಮೊಬೈಲ್​ಫೋನ್​ನ ಆಪರೇಟಿಂಗ್​ ಸಿಸ್ಟಂ ಮೇಲೆ ದಾಳಿ ಮಾಡುವ ಸಾಮರ್ಥ್ಯದ ವೈರಸ್​ ಅನ್ನು ಬಿಡುಗಡೆ ಮಾಡಿರಬಹುದು ಎಂದು ಹೇಳಿದ್ದಾರೆ.

ಇನ್ನು ಇದಕ್ಕೆ ಪರಿಹಾರ ಒದಗಿಸುವ ಸಾಫ್ಟ್​ವೇರ್​ ಅನ್ನು ಬಿಡುಗಡೆ ಮಾಡಲಾಗಿದ್ದು, ಕೂಡಲೇ ವಾಟ್ಸ್​ಆ್ಯಪ್​ ಅನ್ನು ಅಪ್ ಡೇಟ್​ ಮಾಡಿಕೊಳ್ಳುವಂತೆ ಕಂಪನಿಯು ತನ್ನ 1.5 ಶತಕೋಟಿ ಬಳಕೆದಾರರಿಗೆ ಸೂಚಿಸಿದೆ.

ಟಾರ್ಗೆಟ್ ಮಾಡಿದ ವ್ಯಕ್ತಿಗೆ ವಾಟ್ಸಪ್ ಕರೆ ಬರುತ್ತದೆ. ಈ ಕರೆಯನ್ನು ಸ್ವೀಕರಿಸಿದರೂ ಅಥವಾ ಸ್ವೀಕರಿಸದೇ ಇದ್ದರೂ ಒಂದು ಕಣ್ಗಾವಾಲು ತಂತ್ರಾಂಶ ಇನ್‍ಸ್ಟಾಲ್ ಆಗುತ್ತದೆ. ಕೇವಲ ರಿಂಗ್ ಆದರೂ ಈ ಸಾಫ್ಟ್ ವೇರ್ ಇನ್ ಸ್ಟಾಲ್ ಆಗುವಂತೆ ರೂಪಿಸಲಾಗಿದೆ. ವಾಟ್ಸಪ್ ಭದ್ರತಾ ತಂಡ ಈ ದಾಳಿಯನ್ನು ಒಂದು ತಿಂಗಳ ಹಿಂದೆ ಪತ್ತೆ ಹಚ್ಚಿತ್ತು. ತಕ್ಷಣವೇ ಇದನ್ನು ಪರಿಹರಿಸುವ ಸಾಫ್ಟ್​ವೇರ್​ ಅನ್ನು ಸಿದ್ಧಪಡಿಸಿ ಬಿಡುಗಡೆ ಮಾಡಲಾಗಿದೆ ಎಂದು ವಾಟ್ಸಪ್ ವಕ್ತಾರರು ತಿಳಿಸಿದ್ದಾರೆ.

ಮೆಸೆಜಿಂಗ್ ಅಪ್ಲಿಕೇಶನ್ ವಾಟ್ಸಪ್ ಹ್ಯಾಕ್; ಸಾಫ್ಟ್ ವೇರ್ ಅಪ್ ಡೇಟ್​ ಮಾಡಿಕೊಳ್ಳುವಂತೆ ಬಳಕೆದಾರರಿಗೆ ಕಂಪನಿ ಸೂಚನೆ
WhatsApp hack: Company urges 1.5 billion users to update app over security fears

website developers in mysore