ಮದುವೆ ಆದ್ಮೇಲೆ ಫಸ್ಟ್ ನೈಟ್‌ನಲ್ಲಿ ಏನ್ ಮಾಡ್ತೀರಾ?: ಟ್ರೋಲ್ ಪೇಜ್ ಗಳಿಗೆ ಆಹಾರವಾದ ರಚಿತಾ ರಾಮ್ ಪ್ರಶ್ನೆ!

ಬೆಂಗಳೂರು, ನವೆಂಬರ್ 11, 2021 (www.justkannada.in): ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ನಟಿ ರಚಿತಾ ರಾಮ್ ಸುದ್ದಿಗಾರರಿಗೆ ಕೇಳಿದ ಪ್ರಶ್ನೆಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮದುವೆ ಆದ್ಮೇಲೆ ಫಸ್ಟ್ ನೈಟ್‌ನಲ್ಲಿ ಏನ್ ಮಾಡ್ತೀರಾ? ಎಂಬ ರಚಿತಾ ಪ್ರಶ್ನೆ ವೈರಲ್ ಆಗಿದೆ. ಸಾಕಷ್ಟು ಟ್ರೋಲ್ ಪೇಜ್ ಗಳು ಈ ವಿಡೀಯೋ ಇಟ್ಟುಕೊಂಡು ಸಾಕಷ್ಟು ಟ್ರೋಲ್ ಮಾಡುತ್ತಿವೆ. ಮಾಧ್ಯಮದವರು ಕೇಳಿದ ಪ್ರಶ್ನೆಗೆ ಗರಂ ಆಗಿದ್ದರು.

ಅಜೇಯ್ ರಾವ್ ಜೊತೆ ಲವ್ ಯೂ ರಚ್ಚು ಸಿನಿಮಾದಲ್ಲಿ ಈ ಹಾಡಿನ ಒಂದು ದೃಶ್ಯದಲ್ಲಿ ರಚಿತಾ ರಾಮ್ ಬೋಲ್ಡ್ ಕ್ಯಾರೆಕ್ಟರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಿಂದೆ ಬೋಲ್ಡ್ ಸೀನ್‌ಗಳಲ್ಲಿ ನಟಿಸುವುದಿಲ್ಲವೆಂದು ಹೇಳಿಕೆ ನೀಡಿದ್ದಿರಲ್ಲ ಎಂಬ ಪ್ರಶ್ನೆಗೆ ರಚಿತಾ ಗರಂಗೊಂಡು ಮರು ಪ್ರಶ್ನೆ ಹಾಕಿದ್ದರು.

ಬೋಲ್ಡ್ ಸೀನ್ ಮಾಡಿದ್ದೇನೆ ಅಂದರೆ ಅದರಲ್ಲಿ ಏನೋ ಒಂದು ವಿಷಯ ಇರುತ್ತೆ ಅಂತ ಅಲ್ವಾ? ಮದ್ವೆ ಆದ್ಮೇಲೆ ಫಸ್ಟ್ ನೈಟ್‌ನಲ್ಲಿ ಏನ್ ಮಾಡ್ತೀರಾ? ಮದುವೆ ಆದ್ಮೇಲೆ ಫಸ್ಟ್‌ನೈಟ್‌ನಲ್ಲಿ ಸಾಮಾನ್ಯವಾಗಿ ಏನ್ ಮಾಡ್ತಾರೆ? ರೊಮ್ಯಾನ್ಸ್ ಮಾಡ್ತಾರೆ ಅಲ್ವಾ? ಅದನ್ನೇ ಈ ಹಾಡಿನಲ್ಲೂ ಮಾಡಿದ್ದೇವೆ. ಡಿಟೈಲ್ ಆಗಿ ಹೋಗಿಲ್ಲ ಬೇಸಿಕ್ ಏನಿದೆಯೋ ಅದನ್ನೇ ಮಾಡಿದ್ದೇವೆ ಎಂದು ಉತ್ತರ ಕೊಟ್ಟಿದ್ದಾರೆ.