ಪ್ರಧಾನಿ ಮೋದಿಯನ್ನು ವಿಂಡೀಸ್ ಮಾಜಿ ಕ್ರಿಕೆಟಿಗರು ಹಾಡಿ ಹೊಗಳಿದ್ದೇಕೆ?!

ಬೆಂಗಳೂರು, ಮಾರ್ಚ್ 15, 2021 (www.justkannada.in): ವಿಂಡೀಸ್ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗರಾದ ಸರ್ ಐಸಾಕ್ ವಿವಿಯನ್ ಅಲೆಕ್ಸಾಂಡರ್ ರಿಚರ್ಡ್ಸ್, ರಿಚ್ಚಿ ರಿಚರ್ಡ್ಸ್​ನ್, ಜಿಮ್ಮಿ ಆಯಡಮ್ಸ್ ಮತ್ತು ರಾಮ್​ನರೇಶ್ ಸರವಣ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದ್ದಾರೆ.

ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಭಾರತವು ರಾಜಧರ್ಮವನ್ನು ಪಾಲಿಸುತ್ತಿದೆ. ಇದೇ ನಿಜವಾದ ನಾಯಕನ ಕರ್ತವ್ಯ ಎಂದು ಮಾಜಿ ಕ್ರಿಕೆಟಿಗರು ಶ್ಲಾಘಿಸಿದ್ದಾರೆ.

ಕೆರಿಬಿಯನ್ ರಾಷ್ಟ್ರಗಳಿಗೆ ಕೊರೊನಾ ಲಸಿಕೆ ನೀಡಿರುವ ಭಾರತಕ್ಕೆ ಮನಃಪೂರ್ವಕ ಧನ್ಯವಾದವನ್ನೂ ವಿಂಡೀಸ್ ಕ್ರಿಕೆಟಿಗರು ಅರ್ಪಿಸಿದ್ದಾರೆ.

ಮಾರ್ಚ್ ತಿಂಗಳಲ್ಲಿ ಆಯಂಟಿಗುವಾ ಮತ್ತು ಬರ್ಬುಡಾ ದೇಶಗಳಿಗೆ ಭಾರತ 1,75,000 ಡೋಸ್ ಕೊರೊನಾ ಲಸಿಕೆಯನ್ನು ವಿತರಿಸಿದೆ. ಈ ಪೈಕಿ 40,000 ಡೋಸ್ ಲಸಿಕೆಗಳು ವ್ಯಾಕ್ಸಿನ್ ಮೈತ್ರಿ ಯೋಜನೆಯಡಿ ಬರ್ಬುಡಾಗೆ ಉಚಿತವಾಗಿ ನೀಡಿದೆ.