ಪ.ಬಂಗಾಳದಲ್ಲಿ ಟಿಎಂಸಿ ಮತ್ತು ಬಿಜೆಪಿ ನಡುವೆ ಜಿದ್ಧಾಜಿದ್ದಿನ ಫೈಟ್: ಸಿಎಂ ಮಮತಾ ಬ್ಯಾನರ್ಜಿಗೆ ಹಿನ್ನೆಡೆ …

ಪ.ಬಂಗಾಳ,ಮೇ2,2021(www.justkannada.in): ಪಶ್ಚಿಮ ಬಂಗಾಳದಲ್ಲಿ  ಈ ಬಾರಿ 8 ಸುತ್ತುಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಫಲಿತಾಂಶ ಹೊರಬೀಳುತ್ತಿದ್ದು ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಮತ್ತು ಬಿಜೆಪಿ ನಡುವೆ ಜಿದ್ಧಾಜಿದ್ದಿನ ಫೈಟ್ ನಡೆಯುತ್ತಿದೆ.jk

ಪ. ಬಂಗಾಳದ 294 ಕ್ಷೇತ್ರಗಳಿಗೆ ನಡೆದ ಚುನಾವಣೆಯ ಫಲಿತಾಂಶ ಇಂದು ಹೊರಬೀಳುತ್ತಿದ್ದು, 126 ಕ್ಷೇತ್ರಗಳಲ್ಲಿ ಟಿಎಂಸಿ  ಮುನ್ನಡೆ ಕಾಯ್ದುಕೊಂಡರೇ ಬಿಜೆಪಿ 119 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ಫೈಟ್ ನೀಡುತ್ತಿದೆ. ಇತರೆ 3 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. ಇನ್ನು ಸಿಎಂ ಮಮತಾ ಬ್ಯಾನರ್ಜಿ ಅವರು ಹಿನ್ನಡೆ ಸಾಧಿಸಿದ್ದಾರೆ ಎನ್ನಲಾಗಿದೆ. ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿಗೆ 4500 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

west-bengal-election-fight-between-tmc-bjp-cm-mamata-banerjee

ಚುನಾವಣಾ ಪ್ರಚಾರದ ವೇಳೇ ಪರಸ್ಪರ ದೋಷಾರೋಪ, ಒಳ-ಹೊರಗೆ ಚರ್ಚೆಗಳು, ರಾಜಕೀಯ ವಾಗ್ದಾಳಿಗಳು ಚುನಾವಣಾ ಪ್ರಚಾರ ವೇಳೆ ಸಾಕಷ್ಟು ಕಂಡುಬಂದವು.  ಮೊನ್ನೆ ಏಪ್ರಿಲ್ 29ರಂದು ಹೊರಬಂದ ಚುನಾವಣೋತ್ತರ ಸಮೀಕ್ಷೆಯಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಪ್ರಬಲ ಪೈಪೋಟಿಯಿದೆ ಎಂದು ಕಂಡುಬಂದಿತ್ತು.

Key words: West Bengal-Election-  fight between -TMC – BJP -CM -Mamata Banerjee.