ಕೇರಳದಲ್ಲಿ ವೀಕೆಂಡ್ ಲಾಕ್’ಡೌನ್, ನೈಟ್ ಕರ್ಫ್ಯೂ ಜಾರಿ ಆದೇಶ

kannada t-shirts

ಬೆಂಗಳೂರು. ಆಗಸ್ಟ್ 28, 2021 (www.justkannada.in): ಕೇರಳದಲ್ಲಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೂ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗುತ್ತಿದೆ.

ಕೋವಿಡ್-19 ಹರಡುವಿಕೆ ತಡೆಗಾಗಿ ಆಗಸ್ಟ್ 30 ರಿಂದ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗುವುದು.. ಭಾನುವಾರ ಲಾಕ್ ಡೌನ್ ಮುಂದಿನ ಆದೇಶದವರೆಗೂ ಮುಂದುವರೆಯಲಿದೆ ಎಂದು ಮುಖ್ಯಮಂತ್ರಿ ಪಿಣರಾಯ್ ವಿಜಯನ್ ತಿಳಿಸಿದ್ದಾರೆ.

ಲಾಕ್ ಡೌನ್ ಸಡಿಲಿಕೆಯಾದ ನಂತರ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಓಣಂ ಹಬ್ಬದ ಸಂದರ್ಭದಲ್ಲಿ ಇದು ವಿಪರೀತವಾಗಿದೆ. ಲಸಿಕಾ ಅಭಿಯಾನ ಸೇರಿದಂತೆ ಚಿಕಿತ್ಸಾ ಸೌಕರ್ಯವನ್ನು ಸರ್ಕಾರ ಹೆಚ್ಚಿಸಿದೆ ಎಂದು ಹೇಳಿದ್ದಾರೆ.

ಸೆರೋಪ್ರೆವೆಲೆನ್ಸ್ ಅಧ್ಯಯನದ ವರದಿಗಳ ಪ್ರಕಾರ, ರಾಜ್ಯದಲ್ಲಿ ಶೇ. 44.4 ರಷ್ಟು ಜನರು ಸೋಂಕಿಗೆ ತುತ್ತಾಗಿದ್ದಾರೆ.

website developers in mysore