ವೀಕೆಂಡ್ ಕರ್ಫ್ಯೂ: ನಿರಾಶ್ರಿತರು ಮತ್ತು ನಿರ್ಗತಿಕರಿಗೆ ಆಹಾರ, ನೀರು ಒದಗಿಸಿದ ಸುಜೀವ್ ಸಂಸ್ಥೆ…

kannada t-shirts

ಮೈಸೂರು,ಏಪ್ರಿಲ್,24,2021(www.justkannada.in): ಅಬ್ಬರಿಸುತ್ತಿರುವ ಕೊರೊನಾ ನಾಗಲೋಟಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಜಾರಿಗೊಳಿರುವ ವೀಕ್ ಎಂಡ್ ಲಾಕ್ ಡೌನ್ ಸಕ್ಸಸ್ ಆಗಿದೆ. ಈ ಮಧ್ಯೆ ವೀಕೆಂಡ್ ಕರ್ಫ್ಯೂ ನಲ್ಲಿ ಸುಜೀವ್ ಸಂಸ್ಥೆಯು ನಿರಾಶ್ರಿತರಿಗೆ, ನಿರ್ಗತಿಕರಿಗೆ  ಆಹಾರ  ಮತ್ತು ನೀರನ್ನ ವಿತರಿಸಿ ಮಾನವೀಯ ಕಾರ್ಯ ಮಾಡಿದೆ.

ಇಂದು ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ ಜನ್ಮದಿನ ಹಿನ್ನೆಲೆ  ಮೊದಲಿಗೆ ಸುಜೀವ್ ಸಂಸ್ಥೆಯ ಸದಸ್ಯರು  ಡಾ.ರಾಜ್ ಉದ್ಯಾನವನದಲ್ಲಿರುವ ಡಾ.ರಾಜ್ ಪುತ್ಥಳಿಗೆ ನಮಿಸಿ ನಂತರ , ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಹಾಗೂ ನಗರ ಬಸ್ ನಿಲ್ದಾಣದ ಬಳಿ ಕಂಡು ಬಂದ ನಿರಾಶ್ರಿತರು , ನಿರ್ಗತಿಕರಿಗೆ ಆಹಾರದ ಪೊಟ್ಟಣ ,ನೀರು ವಿತರಿಸಿದರು..

ವೀಕೆಂಡ್ ಲಾಕ್ ಡೌನ್ ಹಿನ್ನೆಲೆ ಸರ್ಕಾರದ ಆದೇಶಕ್ಕೆ ಸ್ಪಂದಿಸಿರುವ ರಾಜ್ಯದ ಜನರು ಮನೆಯಿಂದ ಹೊಸಿಲು ದಾಟಿ ಬಂದಿಲ್ಲ. ದಿನಸಿ ಅಂಗಡಿ, ಸೊಪ್ಪು ತರಕಾರಿ, ಹಾಲು, ಮೆಡಿಸನ್ ಮಾರಾಟಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿತ್ತು. ಆದರೆ ಈ ವ್ಯಾಪಾರಕ್ಕೂ ಜನರು ಉತ್ಸಾಹ ತೋರಲಿಲ್ಲ, ವೀಕೆಂಡ್ ಕರ್ಫ್ಯೂ ಸಕ್ಸಸ್ ಏನೋ ಆಗಿದೆ ನಿಜ ಆದ್ರೆ ಇದರಿಂದ ಅಕ್ಷರಶಃ ಸಮಸ್ಯೆ ಎದರಿಸುತ್ತಿರುವುದು ಮಾತ್ರ ನಿರ್ಗತಿಕರು , ನಿರಾಶ್ರಿತರು,

ಹೋಟೆಲ್ ಗಳಿಲ್ಲ , ಬಡವರಿಗಾಗಿ ಸಿದ್ದರಾಮಯ್ಯ ಅವರು ರೂಪಿಸಿದ್ದ ಇಂದಿರಾ ಕ್ಯಾಂಟಿನ್ ಕೂಡ ಸ್ಥಗಿತಗೊಂಡಿರುವ ಪರಿಣಾಮ ಹಸಿವಿನಲ್ಲಿ ದಿನ ದೂಡುವಂತಾಗಿದೆ, ಇಂತವರ ನೆರವಿಗೆ ಬಂದು ಆಹಾರ , ನೀರು ಒದಗಿಸುವ ಮೂಲಕ ಸುಜೀವ್ ಸಂಸ್ಥೆ ಸಾಮಾಜಿಕ ಕಾರ್ಯ ನಿರ್ವಹಿಸಿತು.weekend-curfew-sujeev-institute-provides-food-and-water-refugees

ಈಗಾಗಲೇ ಸುಜೀವ್ ಸಂಸ್ಥೆಯ ಅಧ್ಯಕ್ಷ ರಾಜರಾಂ ಅವರು ಬಡವರ ಪರವಾದ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ವೀಕೆಂಡ್ ಕರ್ಫ್ಯೂ ನಲ್ಲಿಯೂ ನಿರಾಶ್ರಿತರು, ನಿರ್ಗತಿಕರು ಹಸಿವಿನಿಂದ ಬಳಲಬಾರದು ಎಂದು , ತಮ್ಮ ಅನಾರೋಗ್ಯ ಪರಿಸ್ಥಿತಿಯಲ್ಲಿಯೂ , ಅವರ ಅನುಪಸ್ಥಿತಿಯಲ್ಲಿಯೇ ತಮ್ಮ ಸುಜೀವ್ ಸಂಸ್ಥೆಯ ಸದಸ್ಯರ ಮೂಲಕ ಆಹಾರ , ನೀರು  ವಿತರಿಸುವ  ಮೂಲಕ ನೆರವಾದರು.

Key words: Weekend curfew-Sujeev Institute-provides- food and water – refugees

website developers in mysore