ನಾವು ಯಾವಾಗ ಬೇಕಾದ್ರೂ ಎಲೆಕ್ಷನ್ ಗೆ ಸಿದ್ಧ: ಆದ್ರೆ ಚುನಾವಣಾ ದಿನಾಂಕ ಘೋಷಣೆ ದಿನೇ ದಿನೇ ಮುಂದಕ್ಕೆ –ಡಿಕೆ ಶಿವಕುಮಾರ್ ಕಿಡಿ.

ಬೆಂಗಳೂರು,ಮಾರ್ಚ್,7,2023(www.justkannada.in): ನಾವು ಯಾವಾಗ ಬೇಕಾದರೂ ಚುನಾವನೆ ಎದುರಿಸಲು ಸಿದ್ಧ.  ಆದರೆ ಚುನಾವಣಾ ದಿನಾಂಕ ಘೋಷಣೆ ದಿನೇ ದಿನೇ ಮುಂದಕ್ಕೆ ಹೋಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಿಡಿ ಕಾರಿದರು.

ಕೆಪಿಸಿಸಿ ಕಚೇರಿಯಲ್ಲಿ ಇಂದು ಮಾತನಾಡಿದ ಡಿ.ಕೆ ಶಿವಕುಮಾರ್,  ಮುಂದಿನ ದಿನಗಳಲ್ಲಿ ಬಿಜೆಪಿ ಶಾಸಕರು ಕೂಡ ಕಾಂಗ್ರೆಸ್ ಸೇರುತ್ತಾರೆ. ಇವತ್ತು ಕಾಂಗ್ರೆಸ್ ಸೇರ್ಪಡೆಯಾಗುವವರ ದೊಡ್ಡಪಟ್ಟಿ ಇತ್ತು. ಕಾಂಗ್ರೆಸ್ ಸೇರುವ ಕೆಲವರ ಹೆಸರನ್ನ ಚರ್ಚೆ ಮಾಡಬೇಕಿತ್ತು ಎಂದರು.

ಬಿಜೆಪಿಯವರು ಚುನಾವಣೆಗೆ ಹೋಗಬೇಕೆಂದು ಚರ್ಚೆ ಮಾಡಿದರು. ಅಧಿಕಾರಿಗಳನ್ನ ಕರೆದು ಚರ್ಚೆ ಮಾಡಿದರು. ಆದರೆ ಈಗ ಚುನಾವಣೆ ಮುಂದಕ್ಕೆ ಹಾಕಲಾಗುತ್ತಿದೆ. ಈಗ ಶಾರ್ಟ್ ಟರ್ಮ್ ಟೆಂಡರ್ ಕರೆಯುತ್ತಿದ್ದಾರೆ. ಆದಷ್ಟು ಬೇಗ ಚುನಾವಣೆ ಮಾಡಿ. ಬ್ರಹ್ಮಾಂಡ ಭ್ರಷ್ಟಾಚಾರವನ್ನ ತಡೆಯಬೇಕು. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದರು.

ಬಿಜೆಪಿಯರವಿಗೆ ನಿತ್ಯ ಜನರೇ ಶಕಿಂಗ್ ನ್ಯೂಸ್ ಕೊಡುತ್ತಿದ್ದಾರೆ. ಆದರೂ ಯಾವುದನ್ನ ಗಮನಿಸದೇ ಬಿಜೆಪಿಯವರು ಟೆಂಡರ್ ಕರೆಯುತ್ತಿದ್ದಾರೆ ಎಂದು ಗುಡುಗಿದ ಡಿ.ಕೆ ಶಿವಕುಮಾರ್,  ಪ್ರತಿ ತಾಲ್ಲೂಕಿನಲ್ಲಿ ಸೋಲಾರ್ ತಂದಿದ್ದೇವೆ. ನಾವು 200 ವ್ಯಾಟ್ ವಿದ್ಗುತ್,  10 ಕೆಜಿ ಅಕ್ಕಿ ಕೊಡುವುದು ನಿಶ್ಚಿತ. ಇದು ನಮ್ಮ ಭರವಸೆ ಮಾಡಿಯೇ ಮಾಡುತ್ತೇವೆ ಎಂದರು.

Key words: We -ready – elections – But- announcement –late – DK Shivakumar