“ಭಾರತದ ಪ್ರಜೆಗಳಾದ ನಾವು” ಚಲನಚಿತ್ರ ಫಸ್ಟ್ ಲುಕ್ ಪೋಸ್ಟರ್ ರಿಲೀಸ್

ಮೈಸೂರು,ಏಪ್ರಿಲ್,15,2021(www.justkannada.in) : ಮೈಸೂರಿನ ಜೈಭೀಮ್ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗಿರುವ, ಚಿಂತಕ ಹಾಗೂ ಲೇಖಕ ಡಾ.ಕೃಷ್ಣಮೂರ್ತಿ ಚಮರಂ ನಿರ್ದೇಶಿಸಿರುವ “ಭಾರತದ ಪ್ರಜೆಗಳಾದ ನಾವು” ಚಲನಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.by,election,result,Afterwards,Rahul Gandhi,Lion,fox,Mouse,Will know,Minister,K.S.Eshwarappaಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆ ದಿನಗಳು ಖ್ಯಾತಿಯ ನಿರ್ದೇಶಕಿ ಸುಮನಾ ಕಿತ್ತೂರು ಪೋಸ್ಟರ್ ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಅವರು, ಈ ಸಿನಿಮಾ ಬಾಬಾ ಸಾಹೇಬ್ ಅಂಬೇಡ್ಕರ್  ವಿಚಾರಧಾರೆಯನ್ನು ಸಾರುವ ಸಿನಿಮಾ ಎಂದು ಕೇಳಿ ಸಂತಸ ಆಯಿತು. ಇಂದಿನ ದಿನಗಳಲ್ಲಿ ಅಂಬೇಡ್ಕರ್ ಅವರ ಚಿಂತನೆ ಸಾರುವ ಸಿನಿಮಾಗಳು ಕಡಿಮೆಯಾಗಿದೆ ಎಂದರು.

ಇಂದು ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ ಎಂಬ ಮಿನಿ ಥಿಯೇಟರ್ ಇದೆ. ಇಂದು ಯಾರು ಬೇಕಾದರೂ ಸಿನಿಮಾ ಮಾಡಬಹುದು. ಈ ಮೂಲಕ ಅಂಬೇಡ್ಕರ್ ಅವರ ಚಿಂತನೆಗಳು ಹೆಚ್ಚೆಚ್ಚು ಪ್ರಸಾರ ಆಗಲಿ. ಇದಕ್ಕೆ ಹೆಚ್ಚು ಬಜೆಟ್ ಅವಶ್ಯಕತೆ ಇಲ್ಲ ಎಂದು ಅಭಿಪ್ರಾಯ ವ್ಯಕ್ತಡಿಸಿದರು.We-citizens-India-Movie-First-Look-Poster-Release

ನಂತರ ಮಾತನಾಡಿದ ಚಲನಚಿತ್ರ,  ನಿರ್ದೇಶಕ ಕೃಷ್ಣಮೂರ್ತಿ ಚಮಾರಂ, ಸಿನಿಮಾದ ಕಥೆ, ಸಂದೇಶ, ಪಾತ್ರಗಳು ಹಾಗೂ ಚಿತ್ರೀಕರಣದ ಬಗ್ಗೆ ವಿವರಣೆ ನೀಡಿದರು.

ಕಾರ್ಯಕ್ರಮದಲ್ಲಿ ರಂಗಾಯಣ ಮಾಜಿ ನಿರ್ದೇಶಕ ಜನಾರ್ಧನ್ ಜನ್ನಿ , ಕ್ಯಾಮೆರಾ ಮ್ಯಾನ್ ಜೂಮ್ ರವಿ ಹಾಗೂ ಇನ್ನಿತರರು ಹಾಜರಿದ್ದರು.

key words : We-citizens-India-Movie-First-Look-Poster-Release