ನಮಗೆ ವಹಿಸಿದರೆ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ನಾವು ಸಿದ್ಧ: ಯದುವೀರ್

ಮೈಸೂರು, ಜನವರಿ 12, 2019 (www.justkannada.in): ನಗರದ ದೇವರಾಜ ಮಾರುಕಟ್ಟೆ ಪಾರಂಪರಿಕ ಕಟ್ಟಡ ಮರು ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ರಾಜವಂಶಸ್ಥ ಯದುವೀರ್ ಪ್ರತಿಕ್ರಿಯೆ ನೀಡಿದ್ದಾರೆ.

ತಜ್ಞ ರ ತಂಡ ಕಟ್ಟಡ ಮರು ನಿರ್ಮಾಣಕ್ಕೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ. ಅದರೆ ಸಾರ್ವಜನಿಕರ ವರದಿ ನೀಡಿಲ್ಲ. ಆ ವರದಿಯನ್ನು ಪರಿಷ್ಕರಿಸಬೇಕಿದೆ. ಆ ತಂಡದಲ್ಲಿ ಪೂರ್ಣ ಪ್ರಮಾಣದಲ್ಲಿ ಸಿವಿಲ್ ಇಂಜಿನಿಯರ್ ಗಳು ಇದ್ದಾರೆ. ಪಾರಂಪರಿಕ ಕಟ್ಟಡ ತಜ್ಞರು ಇರಲಿಲ್ಲ. ಪಾರಂಪರಿಕ ತಜ್ಞರು ಇದ್ದಿದ್ದು ರಂಗರಾಜು ಒಬ್ಬರೇ. ಅವರು ಈ ವರದಿಯನ್ನು ಒಪ್ಪಿಲ್ಲ ಎಂದು ಯದುವೀರ್ ಹೇಳಿದ್ದಾರೆ.

ಸಿಮೆಂಟ್ ಕಟ್ಟಡದಬಗ್ಗೆ ಓದಿದವರು ಪಾರಂಪರಿಕ ಕಟ್ಟಡ ಸಂರಕ್ಷಣೆ ಮಾಡಲಾರರು. ಈ ಬಗ್ಗೆ ಸರ್ಕಾರ ಸಾರ್ವಜನಿಕ ಅಭಿಪ್ರಾಯ ಸ್ವೀಕರಿಸಬೇಕು. ಎರಡು ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸಬಹುದು. ಸರ್ಕಾರ ನಮಗೆ ವಹಿಸಿದ್ದಾರೆ ಸಂರಕ್ಷಿಸಲು ನಾವು ಸಿದ್ದ ಎಂದು
ರಾಜವಂಶಸ್ಥ ಯದುವೀರ್ ಹೇಳಿದ್ದಾರೆ.