ಈ ವರ್ಷ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಆರನೇ ಸ್ಥಾನ ಪಡೆದಿದ್ದೇವೆ- ಸಚಿವ ಯುಟಿ ಖಾದರ್ ಮಾಹಿತಿ

kannada t-shirts

ಬೆಂಗಳೂರು,ಜೂ,7,2019(www.justkannada.in): ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಜಂಟಿ ಯೋಜನೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕಳೆದ ವರ್ಷ 11ನೇ ಸ್ಥಾನದಲ್ಲಿ ಇದ್ದವು.  ಈ ವರ್ಷ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಆರನೇ ಸ್ಥಾನ ಪಡೆದಿದ್ದೇವೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ತಿಳಿಸಿದರು.

ವಿಕಾಸಸೌಧದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಯುಟಿ ಖಾದರ್, ೨.೫ ಸಾವಿರ ಕೋಟಿ ಕೆಲಸ ಆರಂಭವಾಗಿದೆ..ಉಳಿಕೆ ಹಣ ಟೆಂಡರ್ ಹಂತದಲ್ಲಿ ಇದೆ. ಮಂಗಳೂರು, ಬಿಬಿಎಂಪಿ ಬೆಂಗಳೂರು, ಶಿವಮೊಗ್ಗ, ಹುಬ್ಬಳ್ಳಿ ಧಾರವಾಡ, ತುಮಕೂರು, ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆ ಅಡಿ 6448 ಕೋಟಿ ಕಾಮಗಾರಿ ಆರಂಭವಾಗಿದೆ ಎಂದು ತಿಳಿಸಿದರು.

ಕರ್ನಾಟಕ ಸರ್ಕಾರ ದೇಶದಲ್ಲಿಯೇ ನಗರಾಭಿವೃದ್ಧಿ ಇಲಾಖೆ ಮೆಚ್ಚುಗೆ ಪಡೆದಿದೆ. ಶಾಸಕರ ನೇತೃತ್ವದಲ್ಲಿ ಟೀಮ್ ರಚನೆ ಮಾಡುವ ಚಿಂತನೆ ಇತ್ತು. ಆದ್ರೆ ಕೇಂದ್ರ ಸರ್ಕಾರ ಇದಕ್ಕೆ ಒಪ್ಪಲಿಲ್ಲ. ಹೀಗಾಗಿ ಎಸ್ ಪಿಬಿ ರಚನೆಗೆ ಕೇಂದ್ ಸೂಚನೆ ನೀಡಿತ್ತು. ಮಂಡಕ್ಕಿ ಮಾಡುವ ಮೆಷಿನ್ ಸಹ ಉಪಯೋಗ ಮಾಡಬೇಕು ಅನ್ನೋದು ನಮ್ಮ ನಿರ್ಧಾರ. ಆದ್ರೆ ಜನ ಹೊಸತಂತ್ರಜ್ಞಾನಕ್ಕೆ ಜನ ಇನ್ನೂ ಬರುತ್ತಿಲ್ಲ. ದಾವಣಗೆರೆಯಲ್ಲಿ ಇದು ಜಾಸ್ತಿ ಕಾಣುತ್ತಿದೆ.ಜನ ಹೊಸ ಪದ್ಧತಿ ಅಳವಡಿಕೆ ಮಾಡಿಕೊಳ್ಳುತ್ತಿಲ್ಲ. ಹಳೆಯ ಪದ್ದತಿಗೆ ಜನ ಜೋತು ಬಿದ್ದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಬೆಂಗಳೂರಲ್ಲಿ ರೆಸಲ್ ಮಾರುಕಟ್ಟೆ ಮತ್ತು ಮಾರುಕಟ್ಟೆ ಹೆಚ್ಚು ಸೌಲಭ್ಯ ಕೊಡಲು ಮುಂದಾಗಿದ್ದೇವೆ. ಕೇಂದ್ರ ಸರ್ಕಾರ ಹೊಸ ನಗರಗಳನ್ನ ಸೇರ್ಪಡೆ ಮಾಡಿದ್ರೆ ನಮ್ಮದೇನು ಅಭ್ಯಂತರವಿಲ್ಲ ಎಂದು ಯು.ಟಿ ಖಾದರ್ ತಿಳಿಸಿದರು.

Key words: We are ranked sixth in the Smart City project this year-Minister UT Khader

website developers in mysore