ಸ್ಕೂಟಿಗೆ ನೀರಿನ ಟ್ಯಾಂಕರ್ ಡಿಕ್ಕಿ: ಮಹಿಳೆ ಸ್ಥಳದಲ್ಲೇ ದುರ್ಮರಣ.

ಬೆಂಗಳೂರು,ಸೆಪ್ಟಂಬರ್,6,2022(www.justkannada.in): ಸ್ಕೂಟಿಗೆ ನೀರಿನ ಟ್ಯಾಂಕರ್ ಡಿಕ್ಕಿಯಾಗಿ ಮಹಿಳೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಲಗ್ಗೆರೆ ಬಳಿ  ಇರುವ ಗ್ರೇಸ್ ಪಬ್ಲಿಕ್ ಶಾಲೆ ಮುಂಭಾಗ ಈ ಘಟನೆ ನಡೆದಿದೆ. ಸ್ಕೂಟಿಯಲ್ಲಿ ಮುಂದೆ ಹೋಗುತ್ತಿದ್ದ ಮಹಿಳೆಗೆ ಟ್ಯಾಂಕರ್ ಡಿಕ್ಕಿಯಾಗಿದ್ದು ನಂತರ ಮಹಿಳೆಗೆ ಕೆಳಕ್ಕೆ ಬಿದ್ದಿದ್ದಾರೆ.  ಈ ವೇಳೆ ಟ್ಯಾಂಕರ್ ಮಹಿಳೆ ಮೇಲೆ ಹರಿದಿದೆ.

ಟ್ಯಾಂಕರ್ ಡಿಕ್ಕಿಯಿಂದಾಗಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು ಈ ದೃಶ್ಯ  ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

Key words:  Water-tanker-collides – scooty-Woman- dies