ತಮಿಳುನಾಡಿಗೆ ನೀರು ಬಿಡುವಂತೆ ಪ್ರಾಧಿಕಾರ ಆದೇಶ ವಿಚಾರ: ಜಲಸಂಪನ್ಮೂಲ ಸಚಿವ ಡಿ.ಕೆ ಶಿವ ಕುಮಾರ್ ಪ್ರತಿಕ್ರಿಯಿಸಿದ್ದು ಹೀಗೆ….?

ಬೆಂಗಳೂರು,ಮೇ,28,2019(www.justkannada.in): ತಮಿಳುನಾಡಿಗೆ 9.19 ಟಿಎಂಸಿ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶ ಕುರಿತು ಪ್ರತಿಕ್ರಿಯಿಸಿರುವ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್,ಪ್ರಾಧಿಕಾರ ಕೊಟ್ಟ ತೀರ್ಪಿಗೆ ಗೌರವ ಕೊಡ್ತೇವೆ . ಅಗತ್ಯವಿದ್ದರೇ ಸರ್ವ ಪಕ್ಷ ಸಭೆ ಕರೆದು ಚರ್ಚೆ ನಡೆಸುತ್ತೇವೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಸಚಿವ ಡಿ.ಕೆ ಶಿವಕುಮಾರ್, ಈ ಬಗ್ಗೆ ಪ್ರಾಧಿಕಾರದ ಅಧಿಕಾರಿಗಳ ಜತೆ ಚರ್ಚಿಸಿದ್ದೇವೆ. ಜಲಾಶಯಗಳಿಗೆ ಒಳಹರಿವು ಬಂದರೇ ಮಾತ್ರ ನೀರು ಬಿಡಿ ಎಂದು ಪ್ರಾಧಿಕಾರ ಆದೇಶ ನೀಡಿದೆ. ಈ ಬಗ್ಗೆ ಯಾವುದೇ ತಕರಾರು ಇಲ್ಲ. ಜಲಾಶಯಗಳಿಗೆ ಒಳಹರಿವು ಬರುವ ವಿಶ್ವಾಸವಿದೆ.  ರಾಜ್ಯದ ಹಿತ ಮತ್ತು ನ್ಯಾಯಾಲಯದ ಹಿತ ಎರಡನ್ನೂ ಕಾಯುತ್ತೇವೆ ಎಂದರು.

ಇನ್ನು ಈ ಬಗ್ಗೆ ಸಂಸತ್ ನಲ್ಲಿ ಬಿಜೆಪಿಯ ಧ್ವನಿ ಶಕ್ತಿ ಎಷ್ಟಿದೆ ಅಂತಾ ನೋಡೋಣ.  ಏನಾದ್ರೂ ಸಮಸ್ಯೆಯಾಗಿ ನೀರಿಲ್ಲ ಅಂದರೇ ಎಲ್ಲಾ ಪಕ್ಷಗಳ ಸಭೆ ಕರೆದು ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ಸಚಿವ ಡಿ.ಕೆ ಶಿವಕುಮಾರ್ ತಿಳಿಸಿದರು.

Key words: Water Resources Minister DK Shivakumar responded about caveri  Authority’s  order

#MinisterDK Shivakumar #caveridispute #bangalore