ನೀಚ ಕೃತ್ಯವೆಸಗುವವರಿಗೆ ಎಚ್ಚರಿಕೆ ಸಂದೇಶ: ಗ್ಯಾಂಗ್ ರೇಪ್ ಆರೋಪಿಗಳನ್ನ ಬಂಧಿಸಿದ ಪೊಲೀಸರಿಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಶ್ಲಾಘನೆ.

kannada t-shirts

ಬೆಂಗಳೂರು,ಆಗಸ್ಟ್,28,2021(www.justkannada.in): ಮೈಸೂರು ಗ್ಯಾಂಗ್ ರೇಪ್ ಪ್ರಕರಣದ ಐವರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ ಪೊಲೀಸ್ ತಂಡದ ಕಾರ್ಯಕ್ಕೆ ಗೃಹ ಸಚಿವ ಅರಗ ಜ್ಞಾನೇಂದ್ರ ಶ್ಲಾಘಿಸಿದ್ದಾರೆ.

ಮಾಧ್ಯಮಗಳ ಜತೆ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಡಿಜಿ&ಐಜಿಪಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ್ದಾರೆ.  ಪ್ರವಾಸಿಗರು ಜನರು ಸೇರುವ ನಗರ ಮೈಸೂರು.  ಈ ಕೃತ್ಯದಿಂದ ಸಾಕಷ್ಟು ಆತಂಕ ಸೃಷ್ಠಿಯಾಗಿತ್ತು.   ಪ್ರಕರಣ ಸಂಬಂಧ ಪೊಲೀಸರು ಐವರನ್ನ ಬಂದಿಸಿದ್ದಾರೆ. ಆರೋಪಿಗಳನ್ನ ಬಂಧಿಸಿದ ಪೊಲೀಸರನ್ನ ಶ್ಲಾಘಿಸುತ್ತೇವೆ. ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸರಿಗೆ ಧನ್ಯವಾದ. ಅರ್ಪಿಸುತ್ತೇನೆ ಎಂದರು.

ಪೊಲೀಸರಿಗೆ ಇದೊಂದು ಸವಾಲಿನ ಪ್ರಕರಣವಾಗಿತ್ತು. ಆದರೆ ಸವಾಲು ಸ್ವೀಕರಿಸಿ ಪೊಲೀಸರು ಪ್ರಕರಣ ಭೇದಿಸಿದ್ದಾರೆ. ಈ ಮೂಲಕ ನೀಚ ಕೃತ್ಯವೆಸಗುವವರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಇನ್ನು ಸಂತ್ರಸ್ತೆ ಇನ್ನು ಹೇಳಿಕೆ ನೀಡುವ ಸ್ಥಿತಿಯಲ್ಲಿ ಇಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.

Key words: warning -message – police-arrested -gang rape –accused-  Home Minister -Araga Jnanendra

website developers in mysore