ಭಾರತದ ಫ್ಯಾನ್ಸ್ ಖುಷಿ ಪಡಿಸಲು ಹೊಸ ಪ್ಲಾನ್ ಕಂಡುಕೊಂಡ ವಾರ್ನರ್ !

ಬೆಂಗಳೂರು, ಜುಲೈ 30, 2020 (www.justkannada.in): ಭಾರತದಲ್ಲಿ ಟಿಕ್ ಟಾಕ್ ಬ್ಯಾನ್ ಆದ ಬಳಿಕ ಡೇವಿಡ್ ವಾರ್ನರ್​ ಈಗ ಅಭಿಮಾನಿಗಳನ್ನು ರಂಜಿಸಲು ಬೇರೆ ಮಾರ್ಗವನ್ನು ಕಂಡುಕೊಂಡಿದ್ದಾರೆ.

ಡೇವಿಡ್​ ವಾರ್ನರ್​ ಅವರು ಮಾಡುತ್ತಿದ್ದ ಟಿಕ್​ಟಾಕ್​ ವಿಡಿಯೋಗಳಿಗೆ ಪೋಸ್ಟ್​ ಮಾಡಿದ ಕೆಲವೇ ಗಂಟೆಗಳಲ್ಲಿ ಲಕ್ಷಗಟ್ಟಲೆ ವೀಕ್ಷಣೆ ಸಿಗುತ್ತಿತ್ತು. ಇದೀಗ  ಇನ್​ಸ್ಟಾಗ್ರಾಂ ರೀಲ್ ನಲ್ಲಿ ವೀಡಿಯೋ ಪೋಸ್ಟ್ ಮಾಡುವುದನ್ನು ವಾರ್ನರ್ ಆರಂಭಿಸಿದ್ದಾರೆ.

ಅಂದಹಾಗೆ ಮಕ್ಕಳೊಂದಿಗೆ ಸೇರಿ ಫನ್ನಿ ವಿಡಿಯೋ ಮಾಡುತ್ತಾ, ಅವುಗಳನ್ನು ಪೋಸ್ಟ್​ ಮಾಡುತ್ತಿದ್ದಾರೆ. ಅಷ್ಟೇಅಲ್ಲ, ಮಕ್ಕಳಿಗೆ ಈಜುವುದನ್ನುಹಾಗೂ ಕ್ರಿಕೆಟ್​ ಆಡುವುದನ್ನು ಕಲಿಸುತ್ತಾ ಡೇವಿಡ್ ವಾರ್ನರ್ ಕಾಲ ಕಳೆಯುತ್ತಿದ್ದಾರೆ.

ಡೇವಿಡ್​ ವಾರ್ನರ್​ ಮಗಳು ಗಾಲ್ಫ್​, ಕ್ರಿಕೆಟ್​ ಹಾಗೂ ಈಜುವುದನ್ನು ಅಭ್ಯಾಸ ಮಾಡುತ್ತಿದ್ದಾಳೆ. ಇದರ ಜೊತೆಗೆ ಮಕ್ಕಳೊಂದಿಗೆ ಆಡುತ್ತಲೇ ಡೇವಿಡ್​ ತಮ್ಮ ನಿತ್ಯದ ವ್ಯಾಯಾಮವನ್ನೂ ಮುಗಿಸಿ ಬಿಡುತ್ತಾರೆ.