ನಾಳೆ (ಮಾರ್ಚ್ 10) ವಿಶ್ವ ಕಿಡ್ನಿ ದಿನದ ಅಂಗವಾಗಿ ಮೈಸೂರು ಮೆಡಿಕಲ್ ಕಾಲೇಜಿನಿಂದ ‘ವಾಕಥಾನ್’

ಮೈಸೂರು, ಮಾರ್ಚ್ 09, 2022 (www.justkannada.in): ವಿಶ್ವ ಕಿಡ್ನಿ ದಿನದ ಅಂಗವಾಗಿ ಕೆ.ಆರ್.ಆಸ್ಪತ್ರೆ, ಮೈಸೂರು ಮೆಡಿಕಲ್ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆ ವತಿಯಿಂದ ಮಾರ್ಚ್ 10ರಂದು ನಗರದಲ್ಲಿ ವಾಕಥಾನ್ ಆಯೋಜಿಸಲಾಗಿದೆ.

ಕೆ.ಆರ್.ಆಸ್ಪತ್ರೆಯ ನೆಫ್ರೋ ಹಾಗೂ ಯೂರೋಲಜಿ ವಿಭಾಗದಿಂದ ಆಯೋಜಿಸಿರುವ ವಾಕಥಾನ್’ಗೆ ನಗರದ ಜೆಕೆ ಗ್ರೌಂಡ್ಸ್ ನಲ್ಲಿ ಬೆಳಗ್ಗೆ 7 ಗಂಟೆಗೆ ಚಾಲನೆ ನೀಡಲಾಗುತ್ತದೆ.

ಎಲ್ಲರ ಕಿಡ್ನಿ ಆರೋಗ್ಯ ವಿಷಯದಡಿ ಈ ಬಾರಿ ವಿಶ್ವ ಕಿಡ್ನಿ ದಿನವನ್ನು ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಕಿಡ್ನಿ ಆರೋಗ್ಯದ ಕುರಿತು ಅರಿವು ಮೂಡಿಸಲು ವಾಕಥಾನ್ ಏರ್ಪಡಿಸಲಾಗಿದೆ.

ನಂತರ ಬೆಳಗ್ಗೆ 10 ಗಂಟೆಗೆ ಕೆ.ಆರ್.ಆಸ್ಪತ್ರೆಯ ಸೆಂಟ್ರಲ್ ಲ್ಯಾಬೋರೆಟರಿ ಎದುರು ನಡೆಯುವ ಕಾರ್ಯಕ್ರಮದಲ್ಲಿ ಮೈಸೂರು ಮೆಡಿಕಲ್ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆ ಡೀನ್, ನಿರ್ದೇಶಕರೂ ಆದ ಡಾ.ಎಚ್.ಎನ್.ದಿನೇಶ್, ಬೆಂಗಳೂರಿನ ನೆಫ್ರೋ ಹಾಗೂ ಯೂರೋಲಜಿ ಇನ್ಸ್ ಟಿಟ್ಯೂಟ್ ನ ನಿರ್ದೇಶಕರಾದ ಡಾ.ಆರ್.ಕೇಶವಮೂರ್ತಿ, ಎಂಎಂಸಿಆರ್ ಐ ಪ್ರಾಂಶುಪಾಲರಾದ ಡಾ.ದ್ರಾಕ್ಷಾಹಿಣಿ, ಡಾ.ಬಿ.ಎಲ್.ನಂಜುಂಡಸ್ವಾಮಿ, ಡಾ.ಸುಧಾ ರುದ್ರಪ್ಪ, ಡಾ.ಕೆ.ಎಚ್.ಪ್ರಸಾದ್, ಡಾ.ಮಂಜುನಾಥ್ ಶೆಟ್ಟಿ, ಡಾ.ಕ್ಷೇವಿಯರ್ ಡಿಸೋಜಾ ಇತರರು ಪಾಲ್ಗೊಳ್ಳಲಿದ್ದಾರೆ.