15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಕುರಿತು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್  ಹೆಗ್ಡೆ ಅಭಿಪ್ರಾಯ ವ್ಯಕ್ತಪಡಿಸಿದ್ದು ಹೀಗೆ…

kannada t-shirts

ಬೆಂಗಳೂರು,5,2019(www.justkannada.in): ಇಂದು ನಡೆಯುತ್ತಿರುವ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಕುರಿತು ಪ್ರತಿಕ್ರಿಯಿಸಿರುವ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಈ ಚುನಾವಣೆಯನ್ನ ಜನರು ಬಯಸಿರಲಿಲ್ಲ. ರಾಜಕೀಯ ಲಾಭದಿಂದ ಈ ಚುನಾವಣೆ ನಡೆಯುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಸಂತೋಷ್ ಹೆಗ್ಡೆ, ಇದೊಂದು ಅನಾವಶ್ಯಕವಾದ ಚುನಾವಣೆ. ಉಪಚುನಾವಣೆ ಜನರ ಬಯಸಿರಲಿಲ್ಲ. ಮೂರುವರೆ ವರ್ಷ ಎಲೆಕ್ಷನ್ ಬೇಕಾಗಿರಲಿಲ್ಲ. ರಾಜಕೀಯ ಲಾಭಕ್ಕೋಸ್ಕರ ಉಪಚುನಾವಣೆ ನಡೆಯುತ್ತಿದೆ ಎಂದು ಟೀಕಿಸಿದರು.

ಹಾಗೆಯೇ ಜನ ಮತದಾನ ಧಿಕ್ಕರಿಸುತ್ತಾರೆ. ಜನರು ಬಂದು ಮತದಾನ ಮಾಡುತ್ತಿಲ್ಲ ಇದೊಂದು ಅನಾವಶ್ಯಕವಾದ ಚುನಾವಣೆ ಎಂದು ಸಂತೋಷ್ ಹೆಗ್ಡೆ ಹೇಳಿದರು.

Key words:  Voting – by-elections – 15 assembly –constituencies- Lokayukta -retired Justice- Santosh Hegde

website developers in mysore