ನಾಳೆ 2 ನೇ ಹಂತದ ಗ್ರಾ.ಪಂ ಚುನಾವಣೆ ಮತದಾನ: ತಾಲ್ಲೂಕು ಕೇಂದ್ರಗಳಲ್ಲಿ ಮಸ್ಟರಿಂಗ್ ಕಾರ್ಯ ಆರಂಭ….

kannada t-shirts

ಮೈಸೂರು,ಡಿಸೆಂಬರ್,26,2020(www.justkannada.in): ಈಗಾಗಲೇ ಗ್ರಾಮಪಂಚಾಯಿತಿ ಮೊದಲ ಹಂತದ ಚುನಾವಣೆ ಮತದಾನ ಡಿಸೆಂಬರ್ 22 ರಂದು ನಡೆದಿದ್ದು ಇದೀಗ ಎರಡನೇ ಹಂತದ ಗ್ರಾಮಪಂಚಾಯತ್ ಚುನಾವಣೆ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ.Teachers,solve,problems,Government,bound,Minister,R.Ashok

ನಾಳೆ ಎರಡನೇ ಹಂತದ ಮತದಾನ ನಡೆಯಲಿದ್ದು ಮೈಸೂರಿನ ತಾಲೂಕು ಕೇಂದ್ರಗಳಲ್ಲಿ ಮಸ್ಟರಿಂಗ್ ಕಾರ್ಯ ಆರಂಭವಾಗಿದೆ. ಮೈಸೂರು ತಾಲೂಕಿಗೆ ಮಹಾರಾಣಿ ವಾಣಿಜ್ಯ ಕಾಲೇಜಿನಲ್ಲಿ ಮಸ್ಟರಿಂಗ್ ಕಾರ್ಯ ನಡೆಸಲಾಗುತ್ತಿದೆ.

ಮೈಸೂರು ತಾಲೂಕಿನಲ್ಲಿ ಒಟ್ಟು 23 ಗ್ರಾಮಪಂಚಾಯತಿಗೆ ಚುನಾವಣೆ ನಡೆಯಲಿದ್ದು, 237 ಮತಗಟ್ಟೆ ಸ್ಥಾಪನೆ ಮಾಡಲಾಗಿದೆ. ಇನ್ನು ಚುನಾವಣೆ ಕರ್ತವ್ಯಕ್ಕೆ  ಹಾಜರಾಗಿರುವ ಚುನಾವಣಾ ಸಿಬ್ನಂದಿ ಮಸ್ಟರಿಂಗ್ ಕೇಂದ್ರದತ್ತ ಆಗಮಿಸಿದ್ದಾರೆ.

ಕೋವಿಡ್ ಮುಂಜಾಗ್ರಾತಾ ಕ್ರಮದೊಂದಿಗೆ ಮಸ್ಟರಿಂಗ್ ಕಾರ್ಯ ಆರಂಭವಾಗಿದ್ದು ಚುನಾವಣೆ ಸಿಬ್ಬಂದಿಯನ್ನು ಕರೆದೊಯ್ಯಲು  ಮಸ್ಟರಿಂಗ್ ಕೇಂದ್ರಲ್ಲಿ ರಾಜ್ಯ ಸಾರಿಗೆ ಬಸ್ ಗಳು ಸಿದ್ದವಾಗಿವೆ. ಚುನಾವಣಾ ಕರ್ವ್ಯಕ್ಕೆ ಹಾಜರಾಗುವ ಸಿಬ್ಬಂದಿಗೆ ಅಂತಿಮ ತರಬೇತಿ ನೀಡಲಾಗುತ್ತಿದೆ.

Key words: Voting – 2nd phase – GP election- tomorrow-Start -mastering work – taluk centers.

ENGLISH SUMMARY

GP elections – Second phase voting tomorrow: Mustering activities begin in Taluk HQs
Mysuru, Dec. 26, 2020 (www.justkannada.in): The first phase of Gram Panchayat elections is already completed, which took place on December 22. The countdown for the second phase of voting has commenced, which will be held tomorrow.
Mustering activities at the Taluk Headquarters have begun in Mysore District. Voting for a total number of 23 GPs will take place tomorrow. A number of 237 booths have been established. The booth staff is being provided training on COVID-19 precautionary measures.
Keywords: GP elections/ second phase voting tomorrow/ 23 GPs

 

website developers in mysore