ಮತದಾರರ ಪಟ್ಟಿಯಲ್ಲಿ ಎರಡು ಕಡೆ ಹೆಸರಿದ್ದವರನ್ನ ಮಾತ್ರ ಕೈಬಿಡಲಾಗಿದೆ-ಮೈಸೂರು ಡಿಸಿ ಡಾ.ಕೆ.ವಿ ರಾಜೇಂದ್ರ.

ಮೈಸೂರು,ಡಿಸೆಂಬರ್,1,2022(www.justkannada.in): ಮತದಾರರ ಪಟ್ಟಿಯಲ್ಲಿ ಎರಡು ಕಡೆ ಹೆಸರಿದ್ದವರನ್ನ ಒಂದು ಕಡೆ ಮಾತ್ರ ಉಳಿಸಿ ಮತ್ತೊಂದು ಕಡೆ  ಕೈಬಿಡಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಮೈಸೂರು ಡಿಸಿ ಕೆವಿ ರಾಜೇಂದ್ರ, ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದೆ. ಕಾಂಗ್ರೆಸ್ ಮುಖಂಡರ ನಿಯೋಗ ಇಂದು  ಭೇಟಿ ಮಾಡಿತ್ತು. ಅವರಿಗೆ ಪಟ್ಟಿಯಿಂದ ಕೈಬಿಡಲಾಗಿರುವ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ. ಖಾಸಗಿ ಕಂಪನಿ ಕೊಟ್ಟು ಪರಿಷ್ಕರಣೆ ಮಾಡಿಲ್ಲ. ಒಂದೇ ಜಿಲ್ಲೆಯಲ್ಲಿ ಎರೆಡು ಕಡೆ ಪಟ್ಟಿಯಲ್ಲಿ ಹೆಸರಿದ್ದರೆ ಅಂತಹವರ ಹೆಸರನ್ನ ಕೈಬಿಟ್ಟಿದ್ದೇವೆ. ಬೂತ್ ಲೇವಲ್ ಅಧಿಕಾರಿಗಳು ತಪ್ಪಾಗಿ ಕೆಲಸ ಮಾಡಿದ್ದರೆ ನಮಗೆ ಮಾಹಿತಿ ನೀಡುವಂತೆ ತಿಳಿಸಿದ್ದೇವೆ. ಎಸ್ಓಪಿ ಪ್ರಕಾರವೇ ಎರೆಡು ಹೆಸರು ಇದ್ದವರ ಒಂದು ಕಡೆ ಉಳಿಸಿ ಡಿಲೀಟ್ ಮಾಡಲಾಗಿದೆ. ಈಗಲೂ ಹೆಸರು ಬಿಟ್ಟಿರುವವರು ಹೆಸರನ್ನ ಸೇರಿಸಿಬಹುದು ಎಂದರು.

ವೋಟರ್ ಐಡಿಗೆ ಆಧಾರ ಲಿಂಕ್ ಮಾಡುವುದು ಕಡ್ಡಾಯವಲ್ಲ. ಆಧಾರ್ ಬದಲಾಗಿ ಬೇರೆ ಡಾಕ್ಯುಮೆಂಟ್ ಕೊಡಬಹುದು. ಜಿಲ್ಲಾ ಚುನಾವಣಾ ಅಧಿಕಾರಿಯಾಗಿ ಹೇಳುತ್ತೇನೆ. ಮತದಾರರ ಪಟ್ಟಿಗೆ ಹೆಸರು ಸೇರಿಸುವಾಗ ಆಧಾರ ಲಿಂಕ್ ಕಡ್ಡಾಯವಲ್ಲ. ನಮ್ಮ ಜಿಲ್ಲೆಗೆ ಹೊಸ ಇವಿಎಂ ಯಂತ್ರ ಬಂದಿದೆ. ಎಲ್ಲರೂ ಹೋಗಿ ಅದನ್ನ ಪರೀಕ್ಷೆ ನಡೆಸಬಹುದು ಎಂದು ಡಿಸಿ ಕೆ.ವಿ ರಾಜೇಂದ್ರ ತಿಳಿಸಿದರು.

Key words: voter- list – Mysore- DC -Dr. KV Rajendra.