ವಿಶ್ವನಾಥನ್ ಆನಂದ್ ‘ಮೈಂಡ್ ಮಾಸ್ಟರ್’ ಆಟೋಬಯೋಗ್ರಾಫಿ ಬಿಡುಗಡೆ

ಚೆನ್ನೈ, ಡಿಸೆಂಬರ್ 14, 2019 (www.justkannada.in): ಮಾಜಿ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್​​ರ ಮೈಂಡ್ ಮಾಸ್ಟರ್ ಆಟೋಬಯೋಗ್ರಾಫಿ, ನೆನ್ನೆ ಚೆನ್ನೈನಲ್ಲಿ ಬಿಡುಗಡೆಯಾಗಿದೆ.

5 ಬಾರಿ ವಿಶ್ವ ಚೆಸ್ ಚಾಂಪಿಯನ್ ಆಗಿದ್ದ ವಿಶ್ವನಾಥನ್ ಆನಂದ್​​​, ಈ ಪುಸ್ತಕದಲ್ಲಿ ಸಾಕಷ್ಟು ಕುತೂಹಲಕಾರಿ ವಿಷಯಗಳನ್ನು ಈ ಪುಸ್ತಕರಲ್ಲಿ ಬರೆದಿದ್ದಾರೆ.

ಈ ಮೈಂಡ್ ಮಾಸ್ಟರ್ ಪುಸ್ತಕವನ್ನ ವಿಶ್ವನಾಥನ್ ಆನಂದ್​, ತನ್ನ ದವಂಗತ ತಾಯಿ ಸುಶೀಲಾಗೆ ಅರ್ಪಿಸಿದ್ದಾರೆ. ಆನಂದ್ ತಂದೆ ವಿಶ್ವನಾಥನ್, ಭಾರತ ಹಾಕಿ ತಂಡದ ಮಾಜಿ ನಾಯಕ ಭಾಸ್ಕರನ್, ಭಾರತ ಮಹಿಳಾ ತಂಡದ ಕೋಚ್ ಡಬ್ಲ್ಯೂ.ವಿ.ರಾಮನ್, ಮಾಜಿ ಸ್ಕ್ಯಾಶ್ ಕೋಚ್ ಸೈರಸ್ ಪೊಂಚಾ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.