ಡಿ.16 ರಿಂದ 20ರವರೆಗೆ ಮುಳ್ಳಯ್ಯನಗಿರಿಗೆ ಪ್ರವಾಸಿಗರ ಪ್ರವೇಶ ನಿಷಿದ್ಧ

Promotion

ಬೆಂಗಳೂರು, ಡಿಸೆಂಬರ್ 12, 12, 2021 (www.justkannada.in): ಇನಾಂ ದತ್ತಾತ್ರೇಯ ಪೀಠದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ದತ್ತ ಜಯಂತಿ ಹಿನ್ನೆಲೆ ಡಿ.16 ರಿಂದ 20 ರವರೆಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ.

ದತ್ತಜಯಂತಿ ಆಚರಣೆಯ ವೇಳೆ ಹಿಂದೆ ಆಗಿರುವ ಘಟನೆಗಳಿಂದ ಪೊಲೀಸರು ಜಿಲ್ಲಾದ್ಯಂತ ಹದ್ದಿನ ಕಣ್ಣಿಟ್ಟಿದ್ದು, ಭದ್ರತೆ ಬಿಗಿಗೊಳಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ.

ಡಿಸೆಂಬರ್ 17ಕ್ಕೆ ಅನುಸೂಯ ಜಯಂತಿ, 18ರಂದು ಬೃಹತ್ ಶೋಭಾಯಾತ್ರೆ ಹಾಗೂ 19ರಂದು ದತ್ತಪೀಠದಲ್ಲಿ ದತ್ತಪಾದುಕೆ ದರ್ಶನ ಮಾಡಲಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ, ಬಾಬಾಬುಡನಗಿರಿ ಮತ್ತಿತರ ಕಡೆ ಪ್ರವಾಸದ ಪ್ಲಾನ್ ಮಾಡಿದರೆ ಅದನ್ನುಕ್ಯಾನ್ಸಲ್ ಮಾಡಿದರೆ ಒಳಿತು.