ಕೆ.ಆರ್ ನಗರ ತಾಲ್ಲೂಕಿಗೆ ಭೇಟಿ: ಪ್ರಗತಿಯಲ್ಲಿರುವ ಕಾಮಗಾರಿಗಳನ್ನ ಪರಿಶೀಲಿಸಿದ ಸಂಸದೆ ಸುಮಲತಾ ಅಂಬರೀಶ್..  

ಕೆ.ಆರ್ ನಗರ,ಜನವರಿ,19,2021(www.justkannada.in) ಮಂಡ್ಯ ಲೋಕಸಭಾ ಸದಸ್ಯೆ  ಸುಮಲತಾ ಅಂಬರೀಶ್  ಅವರು ತಮ್ಮ ಮತಕ್ಷೇತ್ರವಾದ ಮೈಸೂರು ಜಿಲ್ಲೆ, ಕೆ.ಆರ್. ನಗರ ತಾಲೂಕಿನಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನ ಪರಿಶೀಲಿಸಿದರು.visit-kr-nagar-taluk-sumalatha-ambarish-works-progress

ಕೆ.ಆರ್ ನಗರ ತಾಲ್ಲೂಕಿನಲ್ಲಿ ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಗ್ರಾಮ ಸಡಕ್  ಹಂತ 3ರ ಯೋಜನೆಯಡಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನ ಮಂಡ್ಯ ಸಂಸದೆ ಸುಮಲತಾ ಅಂಬರೀಶ್  ಪರಿವೀಕ್ಷಣೆ ನಡೆಸಿದರು. ಮೊದಲಿಗೆ ಕೆ.ಆರ್. ನಗರ ತಾಲೂಕಿನ ಕಂಚಿನಕೆರೆ ಗ್ರಾಮ ನಂತರ ಗಂಧನಹಳ್ಳಿ ಗ್ರಾಮ ಮತ್ತು ಕೆಸ್ತೂರು ಕೊಪ್ಪಲು ಗ್ರಾಮಗಳಲ್ಲಿ  ಸಂಸದೆ ಸುಮಲತಾ ಅಂಬರೀಶ್ ಕಾಮಗಾರಿ ಪರಿವೀಕ್ಷಣೆ ನಡೆಸಿದರು.

ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಹಂತ ಮೂರರ ಯೋಜನೆಯಡಿ ಕೆಆರ್ ನಗರ ತಾಲೂಕಿನಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳ ವಿವರ ಹೀಗಿದೆ.

2019 -20 ನೇ ಸಾಲಿನಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಹಂತ 3 ಯೋಜನೆಯಡಿಯಲ್ಲಿ ಕೆ.ಆರ್. ನಗರ ತಾಲೂಕು ವ್ಯಾಪ್ತಿಯಲ್ಲಿ 27.99 ಕಿಲೋಮೀಟರ್ ರಸ್ತೆ ಕಾಮಗಾರಿಗೆ 23.87 ಕೋಟಿ ಮಂಜೂರಾಗಿದ್ದು,  ಈ ಮೊತ್ತದಲ್ಲಿ ಶೇಕಡ 60%ರಷ್ಟು ಕೇಂದ್ರ ಸರ್ಕಾರ ಮತ್ತು ಶೇಕಡ 40%ರಷ್ಟು ರಾಜ್ಯ ಸರ್ಕಾರದ ಅನುದಾನವಾಗಿದೆ.visit-kr-nagar-taluk-sumalatha-ambarish-works-progress

ಎಸ್ .ಹೆಚ್ 57 ಕೆ.ಆರ್. ನಗರ ಹಾಸನ ರಸ್ತೆ ಇಂದ ಕಂಚಿನಕೆರೆ ಮಾರಗೌಡನಹಳ್ಳಿ ಮಾರ್ಗವಾಗಿ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದ್ದು  ರಸ್ತೆಯ ಉದ್ದ : 4.49 ಕಿ.ಮೀ ಅಂದಾಜು ಮೊತ್ತ : 3.84 ಕೋಟಿ ಆಗಿದೆ. ಹಾಗೆಯೇ  Sh-57 ಕೆ.ಆರ್. ನಗರ ಹಾಸನ ರಸ್ತೆ ಇಂದ ಗಂಧನಹಳ್ಳಿ ಮಾರ್ಗವಾಗಿ SH-57 ಕೆ.ಆರ್. ನಗರ ಹಾಸನ ರಸ್ತೆಗೆ ಸೇರುವ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ರಸ್ತೆಯ ಉದ್ದ : 5.18 ಕಿ. ಅಂದಾಜು ಮೊತ್ತ  4.39 ಕೋಟಿ ಆಗಿದೆ.

ತಾಲ್ಲೂಕಿನ ಹಳಿಯೂರು ಅಂಕನಹಳ್ಳಿ ರಸ್ತೆಯಿಂದ ಚಿಕ್ಕ ಕೊಪ್ಪಲು ಕುಪ್ಪೆ ಮಾರ್ಗವಾಗಿ ಕೆಸ್ತೂರು ಕೊಪ್ಪಲು  ಸೇರುವ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ರಸ್ತೆಯ ಉದ್ದ : 9.05 ಕಿ.ಮೀ, ಅಂದಾಜು ಮೊತ್ತ  8.5 ಕೋಟಿಯಾಗಿದೆ.

ಕೆಸ್ತೂರು ಕೊಪ್ಪಲು ನಿಂದ ಶ್ರೀರಾಂಪುರ ಮಾರ್ಗವಾಗಿ ಕಾವೇರಿನದಿಗೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿ. ರಸ್ತೆಯ ಉದ್ದ: 5.02. ಕಿ.ಮೀ ಅಂದಾಜು ಮೊತ್ತ : 4.11 ಕೋಟಿ ಆಗಿದೆ.

ಸಾಲುಕೊಪ್ಪಲು ನಿಂದ ದೊಡ್ಡಕೊಪ್ಪಲು, ಕುಲುಮೆ ಹಾಗೂ ಬಿ.ಹೊಸೂರು ಮಾರ್ಗವಾಗಿ ಕೆ. ಆರ್. ನಗರ ತಾಲ್ಲೂಕು ಬಾರ್ಡರ್ ಗೆ ಸೇರುವ ರಸ್ತೆಯ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು  ರಸ್ತೆಯ ಉದ್ದ : 4.27 ಕಿ.ಮಿ, ಅಂದಾಜು ಮೊತ್ತ 3.46 ಕೋಟಿ ಆಗಿದೆ.

Key words: Visit -KR Nagar-Taluk-Sumalatha Ambarish- works – progress