ವಿಶಾಖಪಟ್ಟಣಂ: ಏನಿದು ಸ್ಟೈರೀನ್ ಗ್ಯಾಸ್​ ಲೀಕ್​? ಇದರಿಂದಾಗುವ ಪರಿಣಾಮ ಗಂಭೀರ…

ವಿಶಾಖಪಟ್ಟಣಂ, 07, ಮೇ 2020 (www.justkannada.in): ಬೆಳಗ್ಗೆ ವಿಶಾಖಪಟ್ಟಣಂ ಜಿಲ್ಲೆಯ ಆರ್​. ಆರ್​. ವೆಂಕಟಪುರಂನ ಕೆಮಿಕಲ್​ ಕಾರ್ಖಾನೆಯಲ್ಲಿ ಸ್ಟೈರೀನ್ ಗ್ಯಾಸ್​ ಲೀಕ್​ ಆಗಿದೆ. ಇದರಿಂದಾಗಿಯೇ ಜನರಿಗೆ ಕಣ್ಣು, ಚರ್ಮ ಮತ್ತು ಮೂಗಿನಲ್ಲಿ ಉರಿ ಅನುಭವ ಕಾಣಿಸಿಕೊಂಡಿದ್ದು, ಉಸಿರಾಟದ ತೊಂದರೆಯು ಎದುರಾಗಿದೆ.

ಸ್ಟೈರಿನ್​ ಗ್ಯಾಸ್​ ಒಂದು ಬಣ್ಣರಹಿತ ಸುಡುವ ದ್ರವವಾಗಿದ್ದು, ಇದು ಸುಲಭವಾಗಿ ಆವಿಯಾಗುತ್ತದೆ. ಇದನ್ನು ಪಾಲಿಸ್ಟೈರೀನ್​ ಪ್ಲ್ಯಾಸ್ಟಿಕ್​, ರಾಳ (ರೆಸಿನ್ಸ್​), ಫೈಬರ್​ಗ್ಲಾಸ್​, ರಬ್ಬರ್​ ಮತ್ತು ಲ್ಯಾಟೆಕ್ಸ್​ ತಯಾರಿಕೆಯಲ್ಲಿ ಬಳಸುತ್ತಾರೆ.

ಸ್ಟೈರೀನ್ ಹೊಂದಿರುವ ಗ್ರಾಹಕ ಉತ್ಪನ್ನಗಳು
ಪ್ಯಾಕೇಜಿಂಗ್​ ಮೆಟಿರೀಯಲ್ಸ್​, ವಿದ್ಯುತ್ ಬಳಕೆಗಾಗಿ ಇರುವ ಇನ್ಸುಲೇಶನ್​, ಮನೆ ಮತ್ತು ಇತರೆ ಕಟ್ಟಡಗಳ ಬಳಕೆಗಾಗಿ ಇರುವ ಇನ್ಸುಲೇಶನ್​, ಫೈಬರ್​, ಪ್ಲ್ಯಾಸ್ಟಿಕ್​ ಪೈಪ್ಸ್​, ಆಟೋಮೊಬೈಲ್​ ಬಿಡಿ ಭಾಗಗಳು, ಡ್ರಿಂಕಿಂಗ್​ ಕಪ್ಸ್​ ಹಾಗೂ ಇತರೆ ಆಹಾರ ಪದಾರ್ಥ ಬಳಸುವ ಸಾಮಾಗ್ರಿಗಳಲ್ಲಿ ಸ್ಟೈರಿನ್​ ಇರುತ್ತದೆ.

ಸೋರಿಕೆಯಾದ ಸ್ಟೈರೀನ್ ಗ್ಯಾಸ್​ ಮಾನವನನ್ನು ಸ್ಪರ್ಶಿಸಿದರೆ, ಉಸಿರಾಟದ ತೊಂದರೆ ಎದುರಾಗುತ್ತದೆ. ಕಣ್ಣು, ಮೂಗು ಹಾಗೂ ಚರ್ಮದಲ್ಲಿ ಉರಿ ಮತ್ತು ಜಠರಗರುಳಿನ ಸಮಸ್ಯೆ ಉಂಟಾಗುತ್ತದೆ