ವೀಸಾ ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂ. ವಂಚನೆ ಮಾಡಿದ್ದ ಆರೋಪಿ ಅಂದರ್.

Promotion

ಮಡಿಕೇರಿ,ನವೆಂಬರ್,9,2022(www.justkannada.in):  ವೀಸಾ ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂ.  ವಂಚನೆ ಮಾಡಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.

ಕೇರಳ ಮೂಲದ ಶ್ರೀನಾಥ್ ಬಂಧಿತ ಆರೋಪಿ. ಶ್ರೀನಾಥ್ ಎಂಬಾತ 60 ಕ್ಕೂ ಹೆಚ್ಚು ಜನರಿಗೆ  ವೀಸಾ ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂ ವಂಚನೆ ಮಾಡಿದ್ದ. ಪ್ರತಿಯೊಬ್ಬರಿಂದ 1 ಲಕ್ಷ ರೂ.  ಸಂಗ್ರಹ  ಮಾಡಿದ್ದ ಎನ್ನಲಾಗಿದೆ.

ಕೊಡಗು, ದಕ್ಷಿಣ ಕನ್ನಡ ಕೇರಳಾದಲ್ಲೂ ಆರೋಪಿ ವಂಚನೆ ಮಾಡಿದ್ದು, ಇದೀಗ ಪೊಲೀಸರು ಆತನನ್ನ ಬಂಧಿಸಿದ್ದಾರೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: visa -cheating- accused -arrest