ಜಾಕ್​ ಕಾಲೀಸ್​ ದಾಖಲೆ ಮುರಿದ ‘ಕಿಂಗ್’ ಕೊಹ್ಲಿ.. !

kannada t-shirts

ಬೆಂಗಳೂರು ಡಿಸೆಂಬರ್ 23, 2019 (www.justkannada.in): ವೆಸ್ಟ್​ ಇಂಡೀಸ್ ನಡುವಿನ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯ ಜಯಿಸಿದ ಟೀಂ ಇಂಡಿಯಾ ಸರಣಿ ಗೆಲುವಿನ ಮೂಲಕ 2019ಕ್ಕೆ ವಿದಾಯ ಹೇಳಿದೆ.

ಈ ಪಂದ್ಯದಲ್ಲಿ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ್ದಾರೆ.
ಕೊನೆ ಪಂದ್ಯದಲ್ಲಿ ಗೆಲುವಿನ ಪ್ರಮುಖ ಪಾತ್ರ ವಹಿಸಿದ ನಾಯಕ ವಿರಾಟ್​ ಕೊಹ್ಲಿ 85 ರನ್​ ಗಳಿಸಿದ್ದರು. ಈ ಮೂಲಕ ಕೊಹ್ಲಿ ಏಕದಿನ ಕ್ರಿಕೆಟ್​ ರನ್​ ಗಳಿಕೆಯಲ್ಲಿ ದಕ್ಷಿಣ ಆಫ್ರಿಕಾ ಮಾಜಿ ಆಟಗಾರ, ದಿಗ್ಗಜ ಆಲ್​ರೌಂಡರ್​ ಜಾಕ್​ ಕಾಲೀಸ್​ ಅವರನ್ನು ಹಿಂದಿಕ್ಕಿದರು.

ಕಾಲೀಸ್​ 328 ಪಂದ್ಯಗಳಲ್ಲಿ 11,579 ರನ್​ ಬಾರಿಸಿ, ಅತಿಹೆಚ್ಚು ರನ್​ ಗಳಿಸಿದವರ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದರು. ಇದೀಗ ನಿನ್ನೆಯ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್​ ನಡೆಸಿದ ಕೊಹ್ಲಿ ಕಾಲೀಸ್​ರನ್ನು ಹಿಂದಿಕ್ಕಿದ್ದು, ಒಟ್ಟಾರೆ 11,609 ರನ್​ ಬಾರಿದ್ದಾರೆ. ​ಕೊಹ್ಲಿ ಕೇವಲ 242ನೇ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.

website developers in mysore