ಏಳು ದಿನದಲ್ಲಿ ದಾಖಲೆ ನೆರವು ಸಂಗ್ರಹಿಸಿದ ವಿರಾಟ್-ಅನುಷ್ಕಾ ಜೋಡಿ!

kannada t-shirts

ಬೆಂಗಳೂರು, ಮೇ 15, 2021 (www.justkannada.in): ಕೋವಿಡ್ ಸಂಕಷ್ಟದಲ್ಲಿರುವವರಿಗಾಗಿ ನೆರವು ಸಂಗ್ರಹಿಸುತ್ತಿರುವ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಇದರಲ್ಲೂ ದಾಖಲೆ ಬರೆದಿದ್ದಾರೆ.

7 ದಿನಗಳಲ್ಲಿ ಸಂಗ್ರಹವಾದ ಹಣವನ್ನು ಆಕ್ಸಿಜನ್ ಸಿಲಿಂಡರ್, ವೈದ್ಯಕೀಯ ಸೌಲಭ್ಯ, ಟೆಲಿ ಮೆಡಿಸಿನ್ ಪೂರೈಸಲು ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ.

ಹೌದು. ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಕೋವಿಡ್ ವಿರುದ್ದದ ಹೋರಾಟಕ್ಕೆ 2 ಕೋಟಿ ರುಪಾಯಿ ದೇಣಿಗೆ ನೀಡಿದ್ದರು. ಜತೆಗೆ ಕೆಟ್ಟೋ ಸಹಭಾಗಿತ್ವದಲ್ಲಿ ಒಂದು ವಾರದ ಅವಧಿಯಲ್ಲಿ ಕನಿಷ್ಠ 7 ಕೋಟಿ ರುಪಾಯಿ ಸಂಗ್ರಹಿಸಿದ್ದಾರೆ.

7 ದಿನಗಳ ಅಂತರದಲ್ಲಿ ವಿರುಷ್ಕಾ ಜೋಡಿ ಬರೋಬ್ಬರಿ 11 ಕೋಟಿ 39 ಲಕ್ಷದ 11 ಸಾವಿರದ 820 ರುಪಾಯಿ(11,39,11,820 ರುಪಾಯಿ)  ದೇಣಿಗೆ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ.

ಇದರೊಂದಿಗೆ ಸಮಾಜಮುಖಿ ಕಾರ್ಯಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ವಿರುಷ್ಕಾ ದಂಪತಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

 

website developers in mysore