‘ಲವ್ ಯು ಪಾಕ್ ಆರ್ಮಿ’ ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದ ಯುವಕ ಪೊಲೀಸರ ವಶಕ್ಕೆ…

Promotion

ವಿಜಯಪುರ,ಫೆ,25,2020(www.justkannada.in):  ಹುಬ್ಬಳ್ಳಿ, ಬೆಂಗಳೂರಿನಲ್ಲಿ ಪಾಕ್ ಪರ ಘೋಷಣೆ ಕೂಗಿ ಆರೋಪಿಗಳು ಬಂಧಿತರಾಗಿರುವ ಬೆನ್ನಲ್ಲೆ ಇದೀಗ ವಿಜಯಪುರದಲ್ಲೂ ಯುವಕನೋರ್ವ ಪಾಕ್ ಮೇಲೆ ಪ್ರೀತಿ ತೋರಿಸಿ ಪೊಲೀಸರ ಅತಿಥಿಯಾಗಿದ್ದಾನೆ.

 ವಿಜಯಪುರ ಜಿಲ್ಲೆಯ ತಾಳಿಕೋಟೆ ಯುವಕ ಮೇರು ಲವ್ ಯೂ ಪಾಕ್ ಆರ್ಮಿ ಎಂದು ಫೇಸ್ ಬುಕ್ ಪೋಸ್ಟ್ ಹಾಕಿದ್ದಾನೆ. A 2 Z ಖಾತೆಯಲ್ಲಿ ಪೋಸ್ಟ್ ಮಾಡಿದ್ದಾನೆ.  ಪಾಕ್ ಆರ್ಮಿ ಪರವಾಗಿ ತಾಳಿಕೋಟೆ ಯುವಕನ ಫೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಆತನನ್ನ ಮುದ್ದೇಬಿಹಾಳ ಠಾಣಾ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಹುಬ್ಬಳ್ಳಿಯ ಕೆಎಲ್ ಇ ಕಾಲೇಜಿನಲ್ಲಿ ಕಾಶ್ಮೀರದ ಮೂವರು ವಿದ್ಯಾರ್ಥಿಗಳು ಪಾಕ್ ಪರ ಘೋಷಣೆ ಕೂಗಿದ್ದರು. ಇದಾದ ಬಳಿಕ  ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಸಿಎಎ ವಿರುದ್ದ ಪ್ರತಿಭಟನೆ ವೇಳೆ ಅಮೂಲ್ಯ ಎಂಬಾಕೆ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದು ಎಲ್ಲಡೆ ಆಕ್ರೋಶ ವ್ಯಕ್ತವಾಗಿತ್ತು. ಇದಾದ ಬೆನ್ನಲ್ಲೆ ಆರ್ದಾ ಎಂಬಾಕೆಯೂ ಟೌನ್ ಹಾಲ್ ಬಳಿ ಪಾಕ್ ಪರ ಘೋಷಣೆ ಕೂಗಿದ್ದಳು.

Key words: vijaypur-youngman- facebook-posted -Love You Pak Army- arrest.