ಅಧಿಕಾರಕ್ಕೊಸ್ಕರ ನಾನು ರಾಜಕಾರಣ ಮಾಡುವವನಲ್ಲ ವಿಜಯನಗರ ಜಿಲ್ಲೆ ಕಂಪಲ್ಸರಿ ಆಗಬೇಕು -ಸಚಿವ ಶ್ರೀರಾಮುಲು…

kannada t-shirts

ಮೈಸೂರು,ನವೆಂಬರ್,26,2020(www.justkannada.in): ರಮೇಶ್‌ ಜಾರಕಿಹೊಳಿ ಆಗಮನದಿಂದ ಶ್ರೀರಾಮುಲುಗೆ ಹಿನ್ನಡೆ ಎಂಬ ಚರ್ಚೆ ಹಿನ್ನೆಲೆ ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಶ್ರೀರಾಮುಲು,  ನಾನು ಹಿನ್ನೆಡೆಯಾಗುತ್ತೆ ಅಂತ ಯಾವತ್ತೂ ರಾಜಕಾರಣ ಮಾಡಿದವನಲ್ಲ. ಇಂದಿಗೂ ನನ್ನ ಜೊತೆ ಹಲವಾರು ಶಾಸಕರು, ಸಮುದಾಯದ ಬೆಂಬಲ‌ ಇದೆ. ಅಧಿಕಾರಕ್ಕೊಸ್ಕರ ರಾಜಕಾರಣ ಮಾಡುವವನು ನಾನಲ್ಲ ಎಂದು ಹೇಳಿದರು.

ಮೈಸೂರಿನಲ್ಲಿ ಮಾತನಾಡಿ ರಮೇಶ್‌ ಜಾರಕಿಹೊಳಿ ಜೊತೆ ಮಾತುಕತೆ ಬಗ್ಗೆ ಸ್ಪಷ್ಟನೆ ನೀಡಿದ ಸಚಿವ ಶ್ರೀರಾಮುಲು, ರಾಜಕೀಯವಾಗಿ ನಾನು ಯಾವುದೇ ಭೇಟಿ ಮಾಡಲ್ಲ. ನಾನು ಜವಾಬ್ದಾರಿಯುತ ಸ್ಥಾನದಲ್ಲಿರೋನು. ನಾನು ತುಂಗಭದ್ರಾ ವ್ಯಾಪ್ತಿಯ ನವಿಲಿ ಏತ ನೀರಾವರಿ ಯೋಜನೆ ಸಂಬಂಧ ಭೇಟಿ ಕೊಟ್ಟಿದ್ದೆ ಎಂದು ತಿಳಿಸಿದರು.vijayanagar-district-become-compulsory-mysore-minister-sriramulu

ರಮೇಶ್‌ ಜಾರಕಿಹೊಳಿ ಆಗಮನದಿಂದ ರಾಮುಲುಗೆ ಹಿನ್ನಡೆ  ಎಂಬ ಚರ್ಚೆಯಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಶ್ರೀರಾಮುಲು, ನಾನು ಹಿನ್ನೆಡೆಯಾಗುತ್ತೆ ಅಂತ ಯಾವತ್ತೂ ರಾಜಕಾರಣ ಮಾಡಿದವನಲ್ಲ. ಇಂದಿಗೂ ನನ್ನ ಜೊತೆ ಹಲವಾರು ಶಾಸಕರು, ಸಮುದಾಯದ ಬೆಂಬಲ‌ ಇದೆ‌. ಅಧಿಕಾರಕ್ಕೊಸ್ಕರ ರಾಜಕಾರಣ ಮಾಡುವವನು ನಾನಲ್ಲ. ಚಾಮರಾಜನಗರದಿಂದ ಬೀದರ್‌ವರೆಗೆ ಅದೇ ಪ್ರೀತಿ ವಿಶ್ವಾಸ ತೋರುತ್ತಿದ್ದಾರೆ. ಆ ಕ್ರೆಡಿಬಿಲಿಟಿಯೇ ನನ್ನನ್ನ ಕೈ ಹಿಡಿಯುತ್ತೇ ಅನ್ನೋ ವಿಶ್ವಾಸವಿದೆ ಎಂದರು.

ವಿಜಯನಗರ ಪ್ರತ್ಯೇಕ ಜಿಲ್ಲೆ ಕಂಪಲ್ಸರಿ ಆಗಬೇಕು.

ವಿಜಯನಗರ ಪ್ರತ್ಯೇಕ ಜಿಲ್ಲೆ ವಿವಾದ  ಕುರಿತು ಪ್ರತಿಕ್ರಿಯಿಸಿದ ಸಚಿವ ಶ್ರೀರಾಮುಲು, ವಿಜಯನಗರ ಪ್ರತ್ಯೇಕ ಜಿಲ್ಲೆ ಕಂಪಲ್ಸರಿ ಆಗಬೇಕು. ಬಳ್ಳಾರಿ 250 ಕಿ.ಮಿ. ವ್ಯಾಪ್ತಿಯ ಅತಿ ದೊಡ್ಡ ಜಿಲ್ಲೆ. ಬಹಳ ದಿನಗಳಿಂದ ಪ್ರತ್ಯೇಕ ಜಿಲ್ಲೆ ಆಗಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಇದು ನಾನು ಸಿಎಂ ವಿವೇಚನೆಗೆ ಬಿಟ್ಟ ವಿಚಾರ ಅಂತ ಹೇಳಿದ್ದೆ. ಈಗಾಗಲೇ ಸೋಮಶೇಖರ್‌ ರೆಡ್ಡಿಯನ್ನ ಸಿಎಂ ಮನವೊಲಿಸಲು ಮುಂದಾಗಿದ್ದಾರೆ. ನಾನು ಸೋಮಶೇಖರ್ ರೆಡ್ಡಿ ಮನವೊಲಿಸುತ್ತೇನೆ ಎಂದರು.vijayanagar-district-become-compulsory-mysore-minister-sriramulu

ಬಿಜೆಪಿಯಲ್ಲಿ ಮೂಲ ವಲಸಿಗ ಎಂಬ ಜಟಾಪಟಿ  ನಡೆಯುತ್ತಿರುವ ವಿಚಾರ ಸಂಬಧ ನಾನು ಬಿಜೆಪಿಯೇ ಒಂದು ಎಂದು ತಿಳಿಕೊಂಡಿದ್ದೇನೆ. ಸರ್ಕಾರ ಬಂದ ಮೇಲೆ ಬಿಜೆಪಿಯಲ್ಲಿ ನಿಂತು ಗೆದ್ದಿದ್ದಾರೆ. ಆದರೆ ಐದಾರು ಬಾರಿ ಗೆದ್ದಿರುವ ಕೆಲವರಿಗೆ ಅವಕಾಶ ಸಿಗಬೇಕು. ಐದಾರು ಬಾರಿ ಗೆದ್ದಿರುವ ಯಾರ್ಯಾರು ಆಕಾಂಕ್ಷಿಗಳಿದ್ದಾರೋ ಅವರಿಗೆ ಆದ್ಯತೆ ನೀಡುವಂತೆ ಸಿಎಂಗೆ ಮನವಿ ಮಾಡಿದ್ದೇವೆ. ಮುಖ್ಯಮಂತ್ರಿಗಳು ಸೂಕ್ತ ಕಾಲದಲ್ಲಿ ಸೂಕ್ತ ನಿರ್ಣಯ ಕೈಗೊಳ್ತಾರೆ ಎಂದರು.

ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿವಾದ ವಿಚಾರ: ಯಾವುದೇ ರಾಜಕೀಯ ಸ್ವಾರ್ಥ ಇಲ್ಲ.

ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿವಾದ ವಿಚಾರ ಕುರಿತು ಮಾತನಾಡಿದ ಸಚಿವ ಶ್ರೀರಾಮುಲು, ನಾವು ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿಲ್ಲ‌. ಆ ಜಾತಿಯ ಅಭಿವೃದ್ದಿಗಾಗಿ ನಿಗಮ ಸ್ಥಾಪಿಸಿದ್ದೇವೆ. ದೇಶಕ್ಕಾಗಿ ಹೋರಾಡಿದ ಕ್ಷತ್ರಿಯ ಸಮುದಾಯದ ಅದು. ಬೆಳಗಾವಿ ಬೀದರ್ ಭಾಗದಲ್ಲಿ ಆ ಸಮುದಾಯದಲ್ಲಿ ಬಡತನ ಇದೆ. ಈ ವಿಚಾರದಲ್ಲಿ ಯಾವುದೇ ರಾಜಕೀಯ ಸ್ವಾರ್ಥ ಇಲ್ಲ ಎಂದು ನುಡಿದರು.

key words: Vijayanagar –district- become- compulsory-mysore-Minister Sriramulu.

website developers in mysore