‘ವಿದ್ಯಾಗಮ’ ನಿಲ್ಲಿಸದಿದ್ರೆ ಶಿಕ್ಷಕರ ಜತೆ ಅಹೋರಾತ್ರಿ ಧರಣಿ- ಸರ್ಕಾರಕ್ಕೆ ಗಡುವು ನೀಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ….

ಬೆಂಗಳೂರು,ಅಕ್ಟೋಬರ್,10,2020(www.justkannada.in):  ವಿದ್ಯಾಗಮ ಯೋಜನೆಯಿಂದಾಗಿ  ಮಕ್ಕಳು ಮತ್ತು ಶಿಕ್ಷಕರಿಗೆ ಕೊರೋನಾ ಸೋಂಕು ತಗುಲುತ್ತಿದ್ದು ಈ ಹಿನ್ನೆಲೆ ವಿದ್ಯಾಗಮ ಯೋಜನೆಯನ್ನ ನಿಲ್ಲಿಸಬೇಕು. ಇಲ್ಲದಿದ್ದರೇ ಶಿಕ್ಷಕರ ಜತೆ ಅಹೋರಾತ್ರಿ ಧರಣಿ ನಡೆಸುವುದಾಗಿ ಸರ್ಕಾರಕ್ಕೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.jk-logo-justkannada-logo

ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಶಿಕ್ಷಕರು ಮಕ್ಕಳನ್ನ ಸಂಕಷ್ಟಕ್ಕೆ ದೂಡಿರುವ ವಿದ್ಯಾಗಮ ಯೋಜನೆಯನ್ನ ಸೋಮವಾರದೊಳಗೆ ನಿಲ್ಲಿಸಬೇಕು. ಇಲ್ಲದಿದ್ದರೇ ಶಿಕ್ಷಕರ ಜತೆ ಸೇರಿ ಫ್ರೀಡಂಪಾರ್ಕ್ ನಲ್ಲಿ ಅಹೋರಾತ್ರಿ ಧರಣಿ ಮಾಡಲಾಗುತ್ತದೆ ಎಂದು ಸರ್ಕಾರಕ್ಕೆ ಗಡುವು ನೀಡಿದರು.vidyagama-do-not-stop-former-cm-hd-kumaraswamy-deadline-government

ಸರ್ಕಾರ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಕೊರೋನಾದಿಂದ ಮೃತರಾದ ಶಿಕ್ಷಕರ ಕುಟುಂಬಸ್ಥರಿಗೆ 50 ಲಕ್ಷ ಪರಿಹಾರ ನೀಡಬೇಕು. ಹಾಗೆಯೇ ಅವರ ಕುಟುಂಬದ ಮಕ್ಕಳಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಇಲ್ಲವಾದರೇ ಸರ್ಕಾರದ ವಿರುದ್ಧ ಅಹೋರಾತ್ರಿ ಧರಣಿ ಮಾಡುತ್ತೇವೆ ಎಂದು ಹೆಚ್.ಡಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

Key words: vidyagama- Do not- stop- Former CM- HD Kumaraswamy – deadline – government.