ಉಪರಾಷ್ಟ್ರಪತಿ ಕಾರ್ಯಕ್ರಮಕ್ಕೆ ಗೈರಾದ ರಾಜ್ಯಪಾಲ ವಜುಬಾಯಿವಾಲ….!

 

ಮೈಸೂರು, ಜು.13, 2019 : (www.justkannada.in news ) ನಗರದ ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ನೂತನ ಸಭಾಂಗಣ ಉದ್ಘಾಟನೆ ಹಾಗೂ ನೂತನ ಕಟ್ಟದ ಶಂಕುಸ್ಥಾಪನೆಯನ್ನು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ನೆರವೇರಿಸಿದರು.

೧೦೦೦ ಆಸನಗಳ ಸಾಮಾರ್ಥ್ಯ ಹೊಂದಿರು ಡಾ.ಆರ್. ರಾಧಕೃಷ್ಣನ್ ಆಡಿಟೋರಿಯಂಗೆ ಶಂಕುಸ್ಥಾಪನೆ. ಬಳಿಕ
ಕನ್ನಡದಲ್ಲೇ ಭಾಷಣ ಶುರು ಮಾಡಿ ಸಭಿಕರನ್ನ ಕನ್ನಡದಲ್ಲೇ ಸ್ವಾಗತಿಸಿದ ಉಪರಾಷ್ಟ್ರಪತಿಗಳು. ಭಾರತೀಯ ಹೆಮ್ಮೆಯ ಪುತ್ರನ ಹೆಸರಿನ ಸಭಾಂಗಣಕ್ಕೆ ಶಂಕುಸ್ಥಾಪನೆ ಮಾಡಿ ಖುಷಿ ನೀಡಿದೆ ಎಂದು ಸ್ಪಷ್ಟ ಕನ್ನಡದಲ್ಲೇ ಭಾಷಣ ಪ್ರಾರಂಭಿಸಿದ ವೆಂಕಯ್ಯ ನಾಯ್ಡು.

ನಾಲ್ಕು ಭಾಷೆಗಳಲ್ಲಿ ಭಾಷಣ ಮಾಡಿದ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು. ಕನ್ನಡ, ಇಂಗ್ಲಿಷ್, ತೆಲುಗು ಹಾಗೂ ಹಿಂದಿ ಭಾಷೆಗಳನ್ನು ಬಳಸಿಕೊಂಡು ಮಕ್ಕಳಿಗೆ ನೀತಿಪಾಠ ಹೇಳಿದ ವೆಂಕಯ್ಯನಾಯ್ಡು.

ಪ್ರಾದೇಶಿಕವಾಗಿ ಶಿಕ್ಷಣದಲ್ಲಿ ದೇಶ ಸದೃಢವಾಗಬೇಕು. ಇದು ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಚಿಂತನೆಯಾಗಿತ್ತು..
ಇಂದು‌ ಶಿಕ್ಷಣ‌ ಎಂಬುದು ಕೇವಲ ಉದ್ಯೋಗಕ್ಕಾಗಿ ಎನ್ನುವಂತಾಗಿದೆ. ಆದರೆ ಶಿಕ್ಷಣ ಎಂಬುದು ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ವಿಸುತ್ತೆ. ಶಿಕ್ಷಣದಿಂದ ಉದ್ಯಮ ನಡೆಸಲು, ಸ್ವತಂತ್ರವಾಗಿ ಉದ್ಯೋಗ ನಡೆಸಲು, ಇತರರಿಗೆ ಉದ್ಯೋಗ ನೀಡಲೂ ಸಾಧ್ಯವಿದೆ.
ಬಾಲ್ಯದ ದಿನಗಳು, ರಜೆಯ ಮಜಾ ಸಮಯ, ಎಲ್ಲರೊಂದಿಗೆ ಬೆರೆಯುವ ಕಲೆ ಬಗ್ಗೆ ಮಕ್ಕಳಿಗೆ ಪಾಠ. ನಾವು ಜಾಗತೀಕರಣದ ಯುಗದಲ್ಲಿ ಇದ್ದೇವೆ. ಪ್ರಪಂಚ ಸಣ್ಣದೊಂದು ಹಳ್ಳಿಯಾಗಿ ರೂಪಗೊಂಡಿದೆ. ಜಾಗತೀಕ ಮಟ್ಟದಲ್ಲಿ ಪೈಪೋಟಿ ಹೆಚ್ಚಾಗುತ್ತಿದೆ. ಇಲ್ಲಿ ಜ್ಞಾನ ಇದ್ದವರು ಮಾತ್ರ ಸಕ್ಸಸ್ ಆಗಲು ಸಾಧ್ಯ. ಎಲ್ಲರೂ ಆ ನಿಟ್ಟಿನಲ್ಲಿ ಸಾಗಬೇಕಿದೆ.

ಸರ್ವೇಜನ ಸುಖಿನಾಭವಂತೂ ವಸುಧೈವ ಕುಟುಂಬಂ ಎಂಬ ತತ್ವದಲ್ಲಿ ಭಾರತದವರು ನಂಬಿಕೆಯಿಟ್ಟಿದ್ದೇವೆ. ವಿದ್ಯಾರ್ಥಿಗಳಿಗೆ ನೀತಿ ಪಾಠ ಮಾಡಿದ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು. ಐದು ವಿಚಾರಗಳನ್ನು ವಿದ್ಯಾರ್ಥಿಗಳು ಮರೆಯಬಾರದು. ತಾಯಿ- ತಂದೆ, ಹುಟ್ಟಿದ ಊರು, ಮಾತೃ ಭಾಷೆ, ಮಾತೃಭೂಮಿ,ಹಾಗೂ ಗುರು ಇವುಗಳನ್ನ ಮರೆಯಬಾರದು.ನೀವು ಯಾವ ದೇಶಕ್ಕೆ ಹೋಗಿ ದುಡಿಮೆ‌ಮಾಡಿ. ಆದ್ರೆ ಮಾತೃಭೂಮಿಯನ್ನು ಮರೆಯಬೇಡಿ. ಮತ್ತೆ ಮಾತೃಭೂಮಿಯಲ್ಲಿ ಜೀವನ ಮಾಡಿ.

ಪ್ರಧಾನಿಯನ್ನು ಹಾಡಿ ಹೊಗಳಿದ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು. ಭಾರತ ಮುಂದುವರೆಯುತ್ತಿದೆ. ಎಲ್ಲರೂ ಭಾರತವನ್ನು ತಿರುಗಿನೋಡುವಂತಾಗಿದೆ. ಇದಕ್ಕೆ ಪ್ರಧಾನಿ ಮೋದಿ ಕಾರಣ. ಕೇಂದ್ರ ಸರ್ಕಾರದ ಯೋಜನೆಗಳನ್ನು ಪುನರಚ್ಚರಿಸಿದ ಉಪ ರಾಷ್ಟ್ರಪತಿ.
ಮೈಸೂರಿನ ಭಾಷಾ ಸಂಸ್ಥಾನದ ಸ್ವರ್ಣ ಜಯಂತಿ. ಸ್ವರ್ಣ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು. ಉಪರಾಷ್ಟ್ರಪತಿ ವೆಂಕಯ್ಯನಾಯ್ಡುರಿಂದ ಕಾರ್ಯಕ್ರಮ ಉದ್ಘಾಟನೆ.

ಸಿಐಐಎಲ್ ನ ೫೦ನೇ ವರ್ಷದ ಸ್ವರ್ಣ ಜಯಂತಿ ಕಾರ್ಯಕ್ರಮ. ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ್, ಮೈಸೂರು ಮೇಯರ್ ಪುಷ್ಪಲತಾ ಜಗನಾಥ್ ಉಪಸ್ಥಿತಿ. ಈ ಕಾರ್ಯಕ್ರಮಕ್ಕೂ ಗೈರಾದ ರಾಜ್ಯಪಾಲ ವಜುಭಾಯಿ ರೂಡಭಾಯಿ ವಾಲಾ.

key words : vice.president-venkaiaha.naidu-mysore-visits-ciil