ವಿಶ್ವ ವಿಖ್ಯಾತ ಗಿರಿಧಾಮ ನಂದಿಬೆಟ್ಟದಲ್ಲಿ ರೋಪ್ ವೇ  ಕಾಮಗಾರಿಗೆ ಅತಿ ಶೀಘ್ರದಲ್ಲಿ ಚಾಲನೆ- ಸಚಿವ ಸಿ.ಪಿ ಯೋಗೇಶ್ವರ್.

kannada t-shirts

ಚಿಕ್ಕಬಳ್ಳಾಪುರ,ಜುಲೈ,23,2021(www.justkannada.in): ವಿಶ್ವ ವಿಖ್ಯಾತ ಗಿರಿಧಾಮ ನಂದಿಬೆಟ್ಟದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ  ರೋಪ್ ವೇ ನಿರ್ಮಾಣ ಕಾಮಗಾರಿಗೆ ಅತಿ ಶೀಘ್ರದಲ್ಲಿ ಚಾಲನೆ ನೀಡಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿಪಿ ಯೋಗೇಶ್ವರ್ ತಿಳಿಸಿದ್ದಾರೆ.jk

ಇಂದು ನಂದಿಬೆಟ್ಟಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಸಿ.ಪಿ ಯೋಗೇಶ್ವರ್,  ಇಂದು ತಜ್ಞರ ತಂಡದ ತಂಡದಿಂದ ಅಂತಿಮ ಯೋಜನಾ ವರದಿ ಸಿದ್ದತೆ  ಮಾಡಲಾಗುತ್ತಿದೆ. ರಾಜ್ಯದ ಪ್ರಥಮ ರೋಪ್ ವೇ ಯೋಜನೆಯನ್ನು ಅನುಷ್ಠಾನಗೊಳಿಸುವ ಸಂಬಂಧ ಹಲವಾರು ಸಭೆಗಳು ನಡೆದಿದ್ದು ಇಂದು ಅಂತಿಮ ರೂಪ ಕೊಡಲಾಗುತ್ತಿದೆ ಎಂದು ಪ್ರಕಟಿಸಿದರು.

ಒಂದು ದಿನಕ್ಕೆ 3000 ದಿಂದ 5000   ಪ್ರವಾಸಿಗರು  ಬೆಟ್ಟದ ಮೇಲಕ್ಕೆ ಹೋಗುತ್ತಿದ್ದಾರೆ. ನಂದಿಬೆಟ್ಟದ ಮೇಲೆ ಆರು ಸಾವಿರ ಪ್ರವಾಸಿಗರಿಗೆ ಮಾತ್ರ ಸ್ಥಳಾವಕಾಶವಿದೆ. ಇದನ್ನು ಗಮನದಲ್ಲಿಟ್ಟುಕೊಂಡು ರೋಪ್ ವೇ ಯೋಜನೆ ಅನುಷ್ಟಾನ ಗೊಳಿಸಲಾಗುವುದು. ನಂದಿಬೆಟ್ಟದ ಬುಡದಲ್ಲಿ ಏಳು ಎಕರೆ ಸರಕಾರಿ ಜಮೀನಿದೆ. ಉಳಿದ ಜಮೀನನ್ನು ಖಾಸಗಿ ಅವರಿಂದ ಖರೀದಿಸಬೇಕು ಎಂದು ಸಚಿವ ಸಿ.ಪಿ ಯೋಗೇಶ್ವರ್ ತಿಳಿಸಿದರು.

ನಂದಿ ಬೆಟ್ಟದ ಮೇಲೆ ನೀರಿನ ಅಭಾವವಿದೆ .ಸಮೀಪದ ಕೆರೆಯಿಂದ ನೀರನ್ನು ಶಾಶ್ವತವಾಗಿ ತರಬೇಕು. ಯಾವುದೇ ಒಂದು ಯೋಜನೆಯನ್ನು ಕಾರ್ಯಗತಗೊಳಿಸಬೇಕಾದರೆ ಹಲವಾರು ಸವಾಲುಗಳು ಹಾಗೂ ಸಮಸ್ಯೆಗಳು ಎದುರಾಗುತ್ತವೆ ಅವುಗಳನ್ನೆಲ್ಲ ಮೆಟ್ಟಿನಿಂತು ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದರು.

ಪ್ರವಾಸಿಗರ ಸುರಕ್ಷತೆ ಹಾಗೂ ಪರಿಸರಕ್ಕೆ ಯಾವುದೇ ರೀತಿಯ ಧಕ್ಕೆ ಉಂಟಾಗದಂತೆ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಲಾಲ್ ಎಂಬುವವರು ರೋಪ್ ವೇ ನಿರ್ಮಾಣದಲ್ಲಿ 75  -80 ವರ್ಷಗಳ ಅನುಭವವನ್ನು ಪಡೆದಿದ್ದು ದೇಶದಲ್ಲಿ ಹಲವಾರು ರೂಪ್ ವೇಗಳನ್ನು ನಿರ್ಮಾಣ ಮಾಡಿದ್ದಾರೆ. ಅವರು ತಾಂತ್ರಿಕವಾಗಿ ಸಹ ಸಾಕಷ್ಟು ಪಂಡಿತರಾಗಿದ್ದಾರೆ. ಎಲ್ಲ ತಾಂತ್ರಿಕ ಅಂಶಗಳನ್ನು ಹಾಗೂ ಪರಿಸರ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆ ಅನುಷ್ಠಾನಗೊಳಿಸುವುದಾಗಿ ಸಚಿವ ಸಿ.ಪಿ ಯೋಗೇಶ್ವರ್ ತಿಳಿಸಿದರು .

ದ್ವಿಚಕ್ರ ಹಾಗೂ ಕಾರುಗಳ ವಾಹನ ನಿಲ್ದಾಣವನ್ನು ನಿರ್ಮಿಸಲಾಗುವುದು . ಪ್ರವಾಸಿಗರು ಆನ್  ಲೈನ್ ನಲ್ಲಿ ಬುಕ್ ಮಾಡುವ ವ್ಯವಸ್ಥೆ ಕಲ್ಲಿಸುವ ಮೂಲಕ ನಂದಿಬೆಟ್ಟಕ್ಕೆ ಭೇಟಿ ನೀಡುವವರಿಗೆ ಯಾವುದೇ ರೀತಿ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು.

ಬೆಟ್ಟದ  ಸಾಮರ್ಥ್ಯವನ್ನು ನೋಡಿಕೊಂಡು ಪ್ರವಾಸಿಗರಿಗೆ ಆನ್ ಲೈನ್ ನಲ್ಲಿ  ಟಿಕೆಟ್ ಗಳನ್ನು ವಿತರಿಸಲಾಗುವುದು. ಅತಿ ಶೀಘ್ರದಲ್ಲಿ ಟೆಂಡರ್ ಕರೆದು ರಾಜ್ಯದ ಪ್ರಥಮ ರೊಪ್ ವೇ ಯೋಜನೆಗೆ ಚಾಲನೆ ನೀಡುವುದಾಗಿ ಇದೇ ವೇಳೆ ಸಚಿವ ಯೋಗೇಶ್ವರ್ ಪ್ರಕಟಿಸಿದರು.

ENGLISH SUMMARY….

Construction of rope way at Nandi hills to begin soon
Chikkaballapura, July 23, 2021 (www.justkannada.in): Construction works for the proposed ropeway to the world-famous hill station Nandi Hills, at Chikkaballapura, near Bengaluru, will begin soon as informed by Tourism Minister C.P. Yogeshwar.
He addressed a press meet after inspecting the spot at Nandi hills today. “Preparation of the final project report is in the process by the experts’ team. Several meetings have been held in this regard and the project is taking its final shape,” he informed.
“About 3,000 to 5,000 tourists are visiting Nandi hills every day, whereas there is place only for only 6,000 tourists atop the hills. The ropeway is proposed keeping this in mind and it will be implemented soon. There are seven acres of land near the foothills of Nandi and the remaining amount of land should be purchased from private persons,” he added.
The works of the ropeway is being given to a person called Lal, who has 75-80 years of experience in the field. Two-wheeler and car parking, an online ticket booking system and other facilities will be provided.
Keywords: Tourism Minister/ C.P. Yogeshwar/ Nandi hills/ rope way/ works to begin soon/ Chikkaballapura

Key words: Very fast – Rope Way –Nandi hills- Minister- C.P. Yogeshwar.

website developers in mysore