ನೋಟು ಅಮಾನ್ಯೀಕರಣದ  ಕುರಿತು ಇಂದು ಸುಪ್ರೀಂ ಕೋರ್ಟ್​ನಿಂದ ತೀರ್ಪು.

kannada t-shirts

ನವದೆಹಲಿ,ಜನವರಿ,2,2023(www.justkannada.in):  2016ರಲ್ಲಿ ಸಾವಿರ ರೂ. ಮತ್ತು 500 ರೂ. ಮುಖಬೆಲೆಯ ನೋಟು   ನಿಷೇಧಿಸಿದ್ದ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಕುರಿತು ಇಂದು  ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು  ನೀಡಲಿದೆ.

2016ರ ನವೆಂಬರ್ ತಿಂಗಳಲ್ಲಿ  ಪ್ರಧಾನಿ ಮೋದಿ ಸರ್ಕಾರದ ನೋಟು ಅಮಾನ್ಯೀಕರಣದ ಕಾನೂನು ಸಿಂಧುತ್ವವನ್ನು ಪ್ರಶ್ನಿಸಿ 58 ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಸುಪ್ರೀಂ ಕೋರ್ಟ್‌ ನ ಐವರು ನ್ಯಾಯಾಧೀಶರ ಪೀಠವು ಇಂದು ಪ್ರಕರಣದಲ್ಲಿ ತನ್ನ ತೀರ್ಪನ್ನು ಪ್ರಕಟಿಸಲಿದೆ.

ನೋಟು ಅಮಾನ್ಯೀಕರಣಕ್ಕೆ ಅಗತ್ಯವಾದ ಕಾರ್ಯವಿಧಾನವನ್ನು ಅನುಸರಿಸಲಾಗಿಲ್ಲ ಮತ್ತು ಅನಿಯಂತ್ರಿತ ನಿರ್ಧಾರದಿಂದಾಗಿ ಭಾರತೀಯ ನಾಗರಿಕರ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಎಂದು ಸರ್ಕಾರದ ವಿರುದ್ಧ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಅರ್ಜಿದಾರರು ಕೇಂದ್ರ ಸರ್ಕಾರದಿಂದ ಇಂತಹ ಕೃತ್ಯಗಳು ಪುನರಾವರ್ತನೆಯಾಗದಂತೆ ನಿಯಮಗಳನ್ನು ಸ್ಥಾಪಿಸುವಂತೆ ಕೋರಿದ್ದಾರೆ. ನೋಟು ಅಮಾನ್ಯೀಕರಣ ಕುರಿತು ಇಂದು ತೀರ್ಪು ಹೊರ ಬೀಳಲಿದೆ.

Key words: Verdict -Supreme Court- today – demonetisation

website developers in mysore