ಡಾ.ಅಂಬೇಡ್ಕರ್ ಕೇಂದ್ರಕ್ಕೆ 6.9 ಕೋಟಿ ಅನುದಾನ ನೀಡಲು ಕೇಂದ್ರ ರಾಜ್ಯ ಸಚಿವರಿಗೆ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮನವಿ

kannada t-shirts

ಮೈಸೂರು,ಸೆಪ್ಟಂಬರ್,24,2022(www.justkannada.in):  ಡಾ. ಬಿ.ಆರ್. ಅಂಬೇಡ್ಕರ್ ಕೇಂದ್ರಕ್ಕೆ  6.9  ಕೋಟಿ ರೂ. ಅನುದಾನವನ್ನು ಮಂಜೂರು ಮಾಡಿಕೊಡಬೇಕೆಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅವರು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ರಾಮದಾಸ್ ಅತವಾಳೆ ಅವರಿಗೆ ಶನಿವಾರ  ಮನವಿ ಮಾಡಿದರು.

ಮಾನಸ ಗಂಗೋತ್ರಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ವತಿಯಿಂದ ಪೂನಾ ಒಪ್ಪಂದ ದಿನದ ಅಂಗವಾಗಿ ಒಂಭತ್ತು ದಶಕಗಳ ರಾಜಕೀಯ ಮೀಸಲಾತಿ: ವಿದ್ಯಮಾನ, ಪರಿಣಾಮ ಮತ್ತು ಬದಲಾವಣೆಗಳು ಎಂಬ ವಿಷಯದ ಬಗ್ಗೆ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ದಲಿತ ದಾಖಲಾತಿ ಕೇಂದ್ರ ಮತ್ತು ವಸ್ತುಸಂಗ್ರಹಾಲಯ ನಿರ್ಮಾಣದ ನಾಲ್ಕನೇ ಹಂತವನ್ನು ಪೂರೈಸಲು 6.9 ಕೋಟಿ ರೂಪಾಯಿ ಅಗತ್ಯವಿದ್ದು, ಮಂಜೂರು ಮಾಡಿಕೊಡಬೇಕೆಂದು ಮನವಿ ಮಾಡಿದರು.

ಮೈಸೂರು ಬೌದ್ಧ ಅಧ್ಯಯನ ಕೇಂದ್ರವನ್ನು ಸ್ಥಾಪಿಸಿದೆ. ಚಾಮರಾಜನಗರ ಸಂಸದರಾದ ವಿ.ಶ್ರೀನಿವಾಸ ಪ್ರಸಾದ್ ಅವರು ಇತ್ತೀಚೆಗೆ ಮೈಸೂರಿಗೆ ಭೇಟಿ ನೀಡಿದ್ದ ಪ್ರಧಾನಮಂತ್ರಿ  ನರೇಂದ್ರ ಮೋದಿಜಿ ಅವರಿಗೆ ಈ ಕೇಂದ್ರಕ್ಕೆ ಹತ್ತು ಕೋಟಿ ರೂಪಾಯಿಗಳನ್ನು ಮಂಜೂರು ಮಾಡುವಂತೆ ಮನವಿ ಮಾಡಿದ್ದರು ಎಂದು ಇದೇ ಸಂದರ್ಭದಲ್ಲಿ ಸ್ಮರಿಸಿದರು.

ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಡಾ. ಅಂಬೇಡ್ಕರ್ ಮತ್ತು ಗಾಂಧೀಜಿಯವರು ಆದರ್ಶ ಮತ್ತು ವಾಸ್ತವವಾದದ ನೆಲೆಗಳಲ್ಲಿ ಎಲ್ಲರನ್ನು ಒಳಗೊಳ್ಳುವ ಪ್ರಜಾತಂತ್ರ ವ್ಯವಸ್ಥೆಯನ್ನು ಕಟ್ಟಿದ್ದಾರೆ. ಅಂಬೇಡ್ಕರ್ ಅವರನ್ನು ಹುಟ್ಟು ಪ್ರಜಾಪ್ರಭುತ್ವವಾದಿ ಎಂದು ಕರೆಯಲ್ಪಡಲಾಗಿದೆ. ಈ ದೇಶದ ಸಾಮಾಜಿಕ ವ್ಯವಸ್ಥೆಯನ್ನು ಸರಿಯಾಗಿ ಗಹಿಸಿ ಅನಾರೋಗ್ಯದಿಂದ ಬಳಲುತ್ತಿರುವ ಸಾಮಾಜಿಕ ನೆಲೆಗಳಿಗೆ ಸೂಕ್ತವಾದ ಚಿಕಿತ್ಸೆಯನ್ನು ನೀಡುವ ಸಲುವಾಗಿ ತಮ್ಮ ಇಡೀ ಜೀವನವನ್ನು ಸಮರ್ಪಿಸಿ ವಿಶ್ವಜ್ಞಾನಿಯಾದವರು ಅಂಬೇಡ್ಕರ್. ಗಾಂಧೀಜಿ ಮತ್ತು ಬಾಬಾಸಾಹೇಬ್ ಅವರ ನಡುವೆ ಪೂನಾ ಒಪ್ಪಂದವಾಗಿ ಒಂಭತ್ತು ದಶಕಗಳು ಕಳೆದಿರುವ ಭಾರತದಲ್ಲಿ ರಾಜಕೀಯ ಮೀಸಲಾತಿಯ ನಡೆಯನ್ನು ವಿಮರ್ಶಾತ್ಮಕವಾಗಿ ಅವಲೋಕಿಸುವ ಕಾರ್ಯಕ್ರಮ ಇದಾಗಿದೆ ಎಂದರು.

ಒಂಭತ್ತು ದಶಕಗಳ ರಾಜಕೀಯ ಪಯಣದಲ್ಲಿ ಹೆಸರಿಗೆ ಮಾತ್ರ ಒಳಗೊಳ್ಳುವ ರಾಜಕಾರಣ ಸೃಷ್ಟಿಯಾದರೆ ಸಾಲದು, ಅದು ನೈಜ ರೂಪದಲ್ಲಿ ಕಾರ್ಯ ನಿರ್ವಹಿಸಬೇಕು. ಬಾಬಾಸಾಹೇಬ್ ಅಂಬೇಡ್ಕರ್ ನಂತರ ಈ ರಾಷ್ಟ್ರದಲ್ಲಿ ಬಾಬಾಸಾಹೇಬರ ರೀತಿಯ ವ್ಯಕ್ತಿತ್ವ, ನಾಯಕತ್ವ, ಚಿಂತನೆಗಳನ್ನು ನಾವು ಕಾಣುತ್ತಿದ್ದೇವೆಯೇ? ಎಂಬ ಪ್ರಶ್ನೆಗೆ ಉತ್ತರ ನಮ್ಮಲ್ಲಿಲ್ಲ. ಇಂದಿನ ಯುವಸಮುದಾಯ ಹಾಗೂ ರಾಜಕೀಯ ಕ್ಷೇತ್ರವನ್ನು ಪ್ರತಿನಿಧಿಸುವವರು ಇದನ್ನರಿತು ತಾವುಗಳಿರುವ ನೆಲೆಗಳಲ್ಲಿ ಬಾಬಾಸಾಹೇಬರ ಆಶಯವನ್ನು ಸಾಕಾರಗೊಳಿಸುವಂತಾಗಬೇಕು. ದಲಿತ ರಾಜಕಾರಣಕ್ಕೆ ಗಟ್ಟಿನೆಲವನ್ನು ಕಂಡುಕೊಳ್ಳುವಂತಾಗಬೇಕು ಎಂದರು.

ರಾಜಕೀಯ ಮೀಸಲಾತಿ ಇದನ್ನು ಸಾಧ್ಯಗೊಳಿಸುತ್ತದೆ ಎಂದು ನಂಬಿದವರಿಗೆ ನಾವು ಉತ್ತರಿಸಿದ್ದೇವೆಯೇ? ಹಾಗಾಗಿಯೇ ಇಂತಹ ಚರ್ಚೆಗಳು ಮೇಲಿಂದ ಮೇಲೆ ನಡೆಯುತ್ತಿರಬೇಕು, ರಾಜಕೀಯ ಕ್ಷೇತ್ರವನ್ನು ಬಾಬಾಸಾಹೇಬರು ಬಯಸಿದಂತೆ ಸಜ್ಜುಗೊಳಿಸಬೇಕು. ಒಂಭತ್ತು ದಶಕಗಳ ಪಯಣ ತೃಪ್ತಿದಾಯಕವಾಗಿಲ್ಲ. ಆದರೆ ಅತೃಪ್ತಿಯನ್ನು ಹೆಚ್ಚಿಸುತ್ತಿದೆ ಎಂದೆನಿಸಿದೆ. ಬಾಬಾಸಾಹೇಬರ ರಾಜಕೀಯ ಪ್ರಯೋಗಗಳ ನಂತರ ಕಾನ್ಸಿರಾಮ್‌ ಜಿ ಅವರ ಪ್ರಯತ್ನಗಳು ನಮ್ಮ ಮುಂದಿವೆ. ಆದರೂ ದಲಿತ ರಾಜಕಾರಣ ಭಾರತದ ರಾಜಕಾರಣದಲ್ಲಿ ಪಡೆದುಕೊಳ್ಳಬೇಕಾದ ಸ್ವರೂಪ ವ್ಯಾಪ್ತಿ ಮತ್ತು ಮಹತ್ವವನ್ನು ಪಡೆದುಕೊಂಡಿರುವುದಿಲ್ಲ ಎಂದರು.

ರಾಜಕೀಯ ಮೀಸಲಾತಿ ಬೇಕು:

ನವದೆಹಲಿಯ ಸಾಮಾಜಿಕ ವ್ಯವಸ್ಥೆಗಳ ಅಧ್ಯಯನ ಕೇಂದ್ರದ ಮುಖಸ್ಥ ಪ್ರೊ.ವಿವೇಕ್ ಕುಮಾರ್ ಮಾತನಾಡಿ, ದೇಶದಲ್ಲಿ ದಲಿತರಿಗೆ ರಾಜಕೀಯದಲ್ಲಿ ಶೇ.50ರಷ್ಟು ಮೀಸಲಾತಿ ಬೇಕು. ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್ ಇದಕ್ಕಾಗಿ ಶ್ರಮಿಸಿದ್ದರು.ಪ್ರಜಾಪ್ರಭುತ್ವದ ಆಶಯ ಮೀಸಲಾತಿ ಆಗಿತ್ತು.  ಕ್ಯಾಬಿನೆಟ್ ನಲ್ಲಿ ಇದು ಚರ್ಚೆಗೆ ಬರಬೇಕು. ಅನುಷ್ಠಾನಕ್ಕೆ ಬರಬೇಕು. ದಲಿತ ರಾಜಕಾರಣ ಸ್ವರೂಪ ಬದಲಾಗಬೇಕು ಎಂದರು.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ರಾಮದಾಸ್ ಅತವಾಳೆ ಮಾತನಾಡಿದರು. ಕೇಂದ್ರದ ನಿರ್ದೇಶಕ ಡಾ.ಎಸ್.ನರೇಂದ್ರ ಕುಮಾರ್, ಪ್ರಾಧ್ಯಾಪಕ ಡಾ.ಜೆ.ಸೋಮಶೇಖರ್ ಸೇರಿದಂತೆ ಇತರರು ಇದ್ದರು.

Key words: VC- Prof. G. Hemanth Kumar – Union Minister – 6.9 crores – Dr. Ambedkar Centre.

ENGLISH SUMMARY…

UoM VC appeals Union State Minister to grant Rs.6.9 crore for Dr. Ambedkar Kendra
Mysuru, September 24, 2022 (www.justkannada.in): Prof. G. Hemanth Kumar, Vice-Chancellor, University of Mysore, today appealed to the Union Minister for State, Social Justice and Empowerment Ramdas Atawale to grant Rs.6.9 crore for the Dr. B.R. Ambedkar Kendra.
He participated in a lecture program on the topic, “Political Reservation of Nine Decades: Phenomenon, IMpact and Changes,” organized by the Dr. B.R. Ambedkar Research and Extension Center, University of Mysore, on the occasion of the Poona Agreement Day. He appealed the Union Minister to provide Rs. 6.9 crore to undertake the fourth phase of the Dalit Enrolment Kendra and Museum.
He also informed that the University has established the Buddha Research Center and Chamarajangara MP V. Srinivasa Prasad had urged Prime Minister Narendra Modi during his recent visit to Mysuru to grant a sum of Rs. 10 crore for the Kendra.
“In the history of Indian democracy, Dr. Ambedkar and Gandhiji have built a democratic country including all, based on principles of ethics and reality. Ambedkar is called as a democrat by birth. He understood the social system of the country and dedicated his entire life to give proper treatment to the society which was suffering from several stigmas, and became a visionary. The Poona agremeent was made about nine decades ago between Mahatma Gandhiji and Babasaheb Ambedkar, and this program is to analyze critically the political reservation in India,” he observed.
Prof. Vivek Kumar, Head, Soical Systems Research Center, New Delhi, in his address, said, 50% reservation should be provided to dalits in politics, for which Gandhiji and Dr. B.R. Ambedkar had strove. The aspiration of democracy was reservation. It should be discussed in the cabinet and come to implementation. The entire dalit political scenario should change.
Social Justice and Empowerment State Minister Ramdas Atawale spoke on the occasion. Centre Director Dr. S. Narendra Kumar, Prof. Dr.J. Somashekar and others were present.
Keywords: University of Mysore/ Dr. B.R. Ambedkar Kendra/ Union Minister Ramdas Atawale

website developers in mysore