ಇನ್ನರ್ ವೀಲ್ ಕ್ಲಬ್ ಮೈಸೂರು ಈಸ್ಟ್ ನ ಯೋಜನೆಗಳನ್ನು ಶ್ಲಾಘಿಸಿದ ವಾರಿಜಾ ಜಗದೀಶ್…

ಮೈಸೂರು,ಫೆಬ್ರವರಿ,15,2021(www.justkannada.in):  ಇನ್ನರ್ ವೀಲ್ ಕ್ಲಬ್ ಮೈಸೂರು ಈಸ್ಟ್ ಗೆ ಜಿಲ್ಲೆ  318ರ ಜಿಲ್ಲಾ ಅಧ್ಯಕ್ಷೆ ವಾರಿಜಾ ಜಗದೀಶ್ ಅವರು ಭೇಟಿ ನೀಡಿ ಕ್ಲಬ್ ನ ಈವರೆಗಿನ ಚಟುವಟಿಕೆಗಳ ಪರಿಶೀಲನೆ ನಡೆಸಿದರು.jk

ಕ್ಲಬ್ ನ ಈವರೆಗಿನ ಚಟುವಟಿಕೆಗಳ ಪರಿಶೀಲಿಸಿ ಬಳಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ವಾರಿಜಾ ಜಗದೀಶ್ ಅವರು,, ತಮ್ಮ ಭಾಷಣದಲ್ಲಿ 103 ದೇಶವನ್ನು ಒಳಗೊಂಡ ನಮ್ಮ ಸಂಸ್ಥೆ ಒಂದು ಬಹುದೊಡ್ಡ ಅಂತರಾಷ್ಟ್ರೀಯ ಸಂಸ್ಥೆಯಾಗಿದ್ದು, ಇನ್ನು ಮೂರು ವರ್ಷಗಳಲ್ಲಿ ಶತಮಾನೋತ್ಸವವನ್ನು ಕಾಣಲಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಕೋವಿಡ್- 19 ಮಹಾಮಾರಿಯ ಈ  ವರ್ಷದಲ್ಲಿ ಕ್ಲಬ್ ನ ಧ್ಯೇಯವಾಕ್ಯವಾದ “lead the change ಸಮಂಜಸವಾಗಿ ಮೂಡಿಬಂದಿದ್ದು ಜಿಲ್ಲೆ 318 ರ 44 ಕ್ಲಬ್ ಗಳು ಹತ್ತು ಹಲವು ಜನೋಪಯೋಗಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದನ್ನು ಸಂತಸದಿಂದ ವಾರಿಜ ಜಗದೀಶ್ ಹಂಚಿಕೊಂಡರು.

ಹಾಗೆಯೇ ಮೈಸೂರ್ ಸೌತ್ ಈಸ್ಟ್ ಕ್ಲಬ್ ನಡೆಸಿದ ಯೋಜನೆಗಳನ್ನು ಶ್ಲಾಘಿಸಿದ  ವಾರಿಜಾ ಜಗದೀಶ್, ನೀರು ಶೇಖರಣೆ ಮರುಪೂರಣ, ಇವುಗಳ  ಬಗ್ಗೆ ಇನ್ನಷ್ಟು ಕಾಳಜಿಯಿಂದ ಯೋಜನೆಗಳನ್ನು ಕೈಗೊಳ್ಳುವಂತೆ ಕರೆ ನೀಡಿದರು. ಪರಿಸರಕ್ಕೆ ಹಾನಿ ಉಂಟುಮಾಡುವ ತ್ಯಾಜ್ಯವನ್ನು ಶೇಖರಿಸಿ(e-waste) ಸಂಬಂಧ ಪಟ್ಟ ಇಲಾಖೆಗೆ ತಲಪಿಸುವಂತೆ ಕರೆನೀಡಿದರು. ಆರೋಗ್ಯಕ್ಕೆ ನೆರವು,  ಹಿರಿಯನಾಗರಿಕರ ಕ್ಷೇಮ,  ದೇಶಪ್ರೇಮ, ಪರಿಸರ ಕಾಳಜಿ ಇವುಗಳ ಬಗ್ಗೆ ಕಳಕಳಿಯಿಂದ ಮಾತನಾಡಿದ ಅವರು ಮುಂದಿನ ಎಲ್ಲಾ ಕಾರ್ಯಯೋಜನೆಯನ್ನು ಉತ್ತಮವಾಗಿ ನಡೆಸಲು ತಿಳಿಸಿದರು.

ಸಭೆಯಲ್ಲಿ ಭಾಗವಹಿಸಿದ್ದ ರೋಟರಿ ಕ್ಲಬ್ ಮೈಸೂರ್ ಸೌತ್ ಈಸ್ಟ್  ನ ಅಧ್ಯಕ್ಷರಾದ ರೋ. ರಾಜೀವ್ ಅವರು ಕ್ಲಬ್ ನ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಹಾಗೂ ರೋಟರಿ ಕ್ಲಬ್ ನ ಯೋಜನೆಯಾದ ಚೆಕ್ ಡ್ಯಾo ಗೆ ಇನ್ನರ್ ವೀಲ್ ಕ್ಲಬ್ ವತಿಯಿಂದ 15,000 ರೂ ಗಳನ್ನು ಕೊಡುಗೆಯಾಗಿ ಸ್ವೀಕರಿಸಿದ ಅವರು ತಮ್ಮ ಭಾಷಣದಲ್ಲಿ ಸಭೆಗೆ ತಮ್ಮ ಕ್ಲಬ್ ನ ಯೋಜನೆಯ ಬಗ್ಗೆ ವಿವರಿಸಿದರು.

ಸಭೆಯಲ್ಲಿ ರೋಟರಿ ಮೈಸೂರ್  ಸೌತ್ ಈಸ್ಟ್ ನ ಸದಸ್ಯರು ಹಾಗೂ ಮೈಸೂರಿನ ಏಳೂ ಇನ್ನರ್ ವೀಲ್ ಕ್ಲಬ್ ನ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯರು ಭಾಗವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಇಬ್ಬರಿಗೆ ಕೃತಕ ಕಾಲು ಜೋಡಣೆಯನ್ನು ವಾರಿಜಾ ಜಗದೀಶ್ ಅವರು ಹಸ್ತಾಂತರಿಸಿದರು.varija Jagdish- praising- Inner Wheel Club- Mysore East

ವೇದಿಕೆಯಲ್ಲಿ  ಜಿಲ್ಲಾ ಉಪಾಧ್ಯಕ್ಷೇ ಪುಷ್ಪಾ ಗುರುರಾಜ್ ಹಾಗೂ ಕ್ಲಬ್ ನ ಅಧ್ಯಕ್ಷೆ ಶುಭಾ ಮುರಳಿಧರ್ ಮತ್ತು ಕಾರ್ಯದರ್ಶಿ ಶ್ರೀಮತಿ ವೀಣಾ ರವೀಂದ್ರ ಉಪಸ್ಥಿತರಿದ್ದರು.

Key words:  varija Jagdish- praising- Inner Wheel Club- Mysore East