ಅಸಹಕಾರದಿಂದಾಗಿ ಕರ್ನಾಟಕದಲ್ಲಿ ಔಷಧಗಳ ಸರಬರಾಜಿನಲ್ಲಿ ವ್ಯತ್ಯಯ.

ಬೆಂಗಳೂರು, ಜೂನ್ 14, 2022 (www.justkannada.in): ಔಷಧಗಳ ತಯಾರಕರು ಹಾಗೂ ಸರಬರಾಜುದಾರರ ಸಹಕಾರದ ಕೊತೆಯಿಂದಾಗಿ ರಾಜ್ಯದಲ್ಲಿ ಅಗತ್ಯ ಔಷಧಗಳ ಸಗಟು ಖರೀದಿಯ ಮೇಲೆ ಗಂಭೀರವಾದ ಪರಿಣಾಮ ಉಂಟಾಗಿದೆ. ಆಧರೆ ಪ್ರಾಧಿಕಾರಿಗಳ ಪ್ರಕಾರ ಇದರಿಂದಾಗಿ ಸರ್ಕಾರಿ ಆಸ್ಪತ್ರೆಗಳ ಮೇಲೆ ಇದರಿಂದ ಯಾವುದೇ ಪರಿಣಾಮ ಉಂಟಾಗಿಲ್ಲ, ಏಕೆಂದರೆ ಅಗತ್ಯದ ಪ್ರಕಾರ ಸ್ಥಳೀಯ ಮೂಲಗಳಿಂದ ಔಷಧಗಳ ಖರೀದಿಯನ್ನು ಮಾಡಲಾಗುತ್ತಿದೆ.

ಮಾಧ್ಯಮದೊಂದಿಗೆ ಮಾತನಾಡಿದ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತದ (ಕೆಎಸ್‌ಎಂಎಸ್‌ಸಿಎಲ್) ವ್ಯವಸ್ಥಾಪಕ ನಿರ್ದೇಶಕ ಎನ್.ಎಂ. ನಾಗರಾಜ್ ಅವರು ಒಟ್ಟು ೪೫೦ ಅಗತ್ಯ ಔಷಧಗಳ ಪೈಕಿ ಪ್ರಸ್ತುತ ದಾಸ್ತಾನು ಏಜೆನ್ಸಿಯಲ್ಲಿ ೫೦ ಅಗತ್ಯ ಔಷಧಗಳ ದಾಸ್ತಾನಿದೆ. “ನಾವು ಆಹ್ವಾನಿಸಿರುವ ಟೆಂಡರ್‌ಗಳಿಗೆ ಸಾಕಷ್ಟು ಸಂಖ್ಯೆಯ ಕಂಪನಿಗಳು ಸ್ಪಂದಿಸುತ್ತಿಲ್ಲ. ಆದ್ದರಿಂದ ಔಷಧಗಳ ಸರಬರಾಜಿನಲ್ಲಿ ಕೊರತೆ ಎದುರಾಗಿದೆ. ಔಷಧಗಳ ತಯಾರಕರು ಹಾಗೂ ಸರಬರಾಜುದಾರರಿಂದ ಸಹಕಾರದ ಕೊರತೆಯೂ ಇದೆ,” ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಅಗತ್ಯದ ಪ್ರಕಾರ ಸ್ಥಳೀಯವಾಗಿ ಔಷಧಗಳನ್ನು ಖರೀದಿಸಲು ಅನುಮತಿ ನೀಡಿರುವ ಕಾರಣದಿಂದಾಗಿ ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆಯ ಸಮಸ್ಯೆ ಎದುರಾಗಿಲ್ಲ. “ಇದಕ್ಕಾಗಿ ಇಲಾಖೆ ಅಗತ್ಯ ನಿಧಿಯನ್ನೂ ಸಹ ಬಿಡುಗಡೆಗೊಳಿಸಿದೆ,” ಎಂದು ನಾಗರಾಜ್ ತಿಳಿಸಿದರು.

ಎಎಸ್‌ ಎಂಎಸ್‌ ಸಿಎಲ್‌ ಗೆ ಕ್ಷಯ ಹಾಗೂ ಇನ್ನಿತರೆ ಖಾಯಿಲೆಗಳಂತಹ ಅಸಾಮಾನ್ಯವಾದ ಖಾಯಿಲೆಗಳಿಗೆ ವಿಶೇಷ ಔಷಧಗಳನ್ನು ಖರೀದಿಸುವಲ್ಲಿ ತೊಂದರೆ ಇಲ್ಲ, ಆದರೆ ಜನರಲ್ ಔಷಧಗಳನ್ನು ಖರೀಸುವುದೇ ಸಮಸ್ಯೆ, ಎಂದು ವಿವರಿಸಿದರು. ಕನಿಷ್ಠ ೩೦೦ ಅಗತ್ಯ ಔಷಧಗಳ ಸಮರ್ಪಕ ಸರಬರಾಜನ್ನು ಖಾತ್ರಿಪಡಿಸಿದರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು (ಪಿಹೆಚ್‌ಸಿಗಳು) ಹಾಗೂ ಇತರೆ ವೈದ್ಯಕೀಯ ಕೇಂದ್ರಗಳ ಸುಗಮ ಕಾರ್ಯನಿರ್ವಹಣೆಗೆ ನೆರವಾಗುತ್ತದೆ.

ಈ ಸಂಬಂಧ ಕೆಲವು ಜಿಲ್ಲೆಗಳ ಜಿಲ್ಲಾ ಆರೋಗ್ಯ ಅಧಿಕಾರಿಗಳೊಂದಿಗೆ ಮಾತನಾಡಿದಾಗ ಕಳೆದ ಐದಾರು ತಿಂಗಳುಗಳಿಂದ ಔಷಧಗಳ ಸರಬರಾಜಿನಲ್ಲಿ ವ್ಯತ್ಯಯವಿರುವುದು ಖಾತ್ರಿಯಾಯಿತು. ಆದರೆ ಕ್ರಮೇಣ ಸಮಸ್ಯೆ ಸುಧಾರಿಸುತ್ತಿದೆ ಎನ್ನುವುದು ತಿಳಿದು ಬಂದಿದೆ.

“ಔಷಧಗಳ ಸರಬರಾಜಿನಲ್ಲಿ ಕೊರತೆ ಎದುರಾದ ನಂತರ, ಆರೋಗ್ಯ ಇಲಾಖೆಯು ಔಷಧಗಳನ್ನು ಖರೀದಿಸಲು ರಾಷ್ಟ್ರೀಯ ಉಚಿತ ಔಷಧಗಳ ಸೇವೆಗಳು, ಆಯುಷ್ಮಾನ್ ಭಾರತ್ ಹಾಗೂ ಆರೋಗ್ಯ ಕರ್ನಾಟಕ ಯೋಜನೆಗಳ ಅಡಿ ಲಭ್ಯವಿರುವ ನಿಧಿಯನ್ನು ಬಳಕೆ ಮಾಡಿಕೊಳ್ಳಲು ಆದೇಶಿಸಿತು. ಇದರಲ್ಲಿ ಶೇ.೫೦ರಷ್ಟು ಹಣವನ್ನು ಪಿಹೆಚ್‌ಸಿಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಅಗತ್ಯವಿರುವ ಔಷಧಗಳನ್ನು ಖರೀದಿಸಲು ಬಳಸಿಕೊಳ್ಳಬಹುದಾಗಿದೆ ಎಂದು ಡಿಹೆಚ್‌ಒ ಮಾಹಿತಿ ನೀಡಿದರು.

ಕೊರತೆ ಇರುವ ಕೆಲವು ಪ್ರಮುಖ ಔಷಧಗಳ ಪೈಕಿ ಓರಲ್ ಆ್ಯಂಟಿಬಯೋಟಿಕ್‌ಗಳು, ಇಂಟ್ರೀವೀನಸ್ ಫ್ಲೂಯಿಡ್‌ ಗಳು, ಪ್ಯಾರಾಸಿಟಮಾಲ್‌ ಗಳು ಸೇರಿವೆ.

ಈ ನಡುವೆ, ಕೆಲವು ಔಷಧಗಳ ಸರಬರಾಜುದಾರರು ಸಹಕಾರದ ಕೊರತೆಯ ಕುರಿತು ಕೆಎಸ್‌ಎಂಎಸ್‌ಸಿಎಲ್‌ ನ ಆರೋಪಗಳನ್ನು ತಳ್ಳಿಹಾಕಿದರು. ಕೆಎಸ್‌ಎಂಎಸ್‌ಸಿಎಲ್‌ನ ಟೆಂಡರ್‌ಗಳಿಗೆ ಸರಿಯಾಗಿ ಸ್ಪಂದಿಸದೇ ಇರಲು ಕಾರಣ ಏಜೆನ್ಸಿ ವತಿಯಿಂದ ಹಣ ಪಾವತಿಸುವಲ್ಲಿ ಆಗಿರುವ ವಿಳಂಬವೇ ಕಾರಣ ಎಂದು ಸ್ಪಷ್ಟಪಡಿಸಿದರು. “ವಿಶೇಷವಾಗಿ ಸಾಂಕ್ರಾಮಿಕದ ಅವಧಿಯಲ್ಲಿ ಏಜೆನ್ಸಿ ವತಿಯಿಂದ ಔಷಧಗಳ ಸರಬರಾಜಿನ ಬಿಲ್ಲುಗಳಿಗೆ ಹಣಪಾವತಿಯನ್ನು ಬಹಳ ಸಮಯದವರೆಗೂ ವಿಳಂಬ ಮಾಡಿದರು. ಇದರಿಂದಾಗಿ ಏಜೆನ್ಸಿ ಹಾಗೂ ಸರಬರಾಜುದಾರರ ನಡುವೆ ಕೆಲವು ಭಿನ್ನಾಭಿಪ್ರಾಯಗಳು ಉದ್ಭವಿಸಿವೆ,” ಎನ್ನುವುದು ಪ್ರಮುಖ ಔಷಧ ಸರಬರಾಜುದಾರರೊಬ್ಬರ ಅಭಿಪ್ರಾಯವಾಗಿದೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Variation – supply – Medicine -Karnataka