ವಂದೇ ಭಾರತ ಎಕ್ಸ್ ಪ್ರೆಸ್ ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗದ ರೈಲಿನ ಸಮಯ, ನಿಲ್ದಾಣಗಳ ವಿವರಗಳು ಹೀಗಿದೆ..

ಬೆಂಗಳೂರು ನವೆಂಬರ್,3, 2022 (www.justkannada.in): ಭಾರತೀಯ ರೈಲ್ವೆ ದೇಶದ ಐದನೇ ವಂದೇ ಭಾರತ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ ನೀಡುತ್ತಿದೆ. ಇದು ನವೆಂಬರ್ ಎರಡನೇ ವಾರದಲ್ಲಿ ಚಾಲನೆ ಪಡೆಯುವ ಐದನೇ ರೈಲಾಗಿದೆ. ಇದು ದಕ್ಷಿಣ ಭಾರತದ ಮೊಟ್ಟ ಮೊದಲ ಅತೀ ವೇಗವಾಗಿ ಸಂಚರಿಸುವ ರೈಲಾಗಿದ್ದು, ಮೈಸೂರು-ಚೆನ್ನೈ ನಡುವೆ, ಗಂಟೆಗೆ 74 ಕಿ.ಮೀ.ಗಳ ವೇಗದಲ್ಲಿ, ೪೯೭ ಕಿ.ಮೀ. ದೂರವನ್ನು ಕೇವಲ ೬ ಗಂಟೆ ೪೦ ನಿಮಿಷಗಳಲ್ಲಿ ಕ್ರಮಿಸಲಿದೆ.

ವಂದೇ ಭಾರತ ಎಕ್ಸ್ ಪ್ರೆಸ್ ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗ

ವಂದೇ ಭಾರತ ಎಕ್ಸ್ ಪ್ರೆಸ್ ಚೆನ್ನೈ-ಬೆಂಗಳೂರು-ಮೈಸೂರು ರೈಲು ಸಂಚರಿಸುವ ಮಾರ್ಗ: ಚೆನ್ನೈ ಸೆಂಟ್ರಲ್, ಬೆಂಗಳೂರು ನಗರ ಹಾಗೂ ಮೈಸೂರು ಜಂಕ್ಷನ್. ನಡುವೆ ಪೆರಂಬದೂರು, ವೆಪ್ಪಂಪಟ್ಟು, ಕಾಟ್ಪಾಡಿ ಜಂಕ್ಷನ್, ಗುಡುಪಲ್ಲಿ ಹಾಗೂ ಮಾಲೂರು.

ವಂದೇ ಭಾರತ ಎಕ್ಸ್ಪ್ರೆಸ್ ಚೆನ್ನೈ-ಬೆಂಗಳೂರು-ಮೈಸೂರು ನಡುವಿನ ನಿಲ್ದಾಣಗಳು

ವಂದೇ ಭಾರತ ಎಕ್ಸ್ಪ್ರೆಸ್ ಚೆನ್ನೈ-ಬೆಂಗಳೂರು-ಮೈಸೂರು ನಡುವೆ ಬೆಂಗಳೂರು ನಗರ ಜಂಕ್ಷನ್‌ ನಲ್ಲಿ ಒಂದೇ ಒಂದು ನಿಲುಗಡೆ ಇರುತ್ತದೆ.

ಸಮಯ

ಚೆನ್ನೈ ಸೆಂಟ್ರಲ್‌ನಿಂದ ಬೆಳಿಗ್ಗೆ ೫:೫೦ಕ್ಕೆ ಹೊರಡುತ್ತದೆ. ಬೆಂಗಳೂರು ನಗರ ಜಂಕ್ಷನ್ ಗೆ 359 ಕಿ.ಮೀ.ಗಳನ್ನು ಕ್ರಮಿಸಿ ಬೆಳಿಗ್ಗೆ ೧೦:೨೫ಕ್ಕೆ ಆಗಮಿಸುತ್ತದೆ. ಇಲ್ಲಿ ಐದು ನಿಮಿಗಳ ಕಾಲ ನಿಂತು, ಬೆಳಿಗ್ಗೆ ೧೦:೩೦ ಗಂಟೆಗೆ ಹೊರಡುತ್ತದೆ. ನಂತರ ಮೈಸೂರು ಜಂಕ್ಷನ್‌ಗೆ ೧೩೭.೬ ಕಿ.ಮೀ.ಗಳ ದೂರ ಕ್ರಮಿಸಿ ಮಧ್ಯಾಹ್ನ ೧೨.೩೦ಕ್ಕೆ ತಲುಪುತ್ತದೆ.

ಹಿಂದಿರುಗುವ ಪ್ರಯಾಣದಲ್ಲಿ ವಂದೇ ಭಾರತ ಎಕ್ಸ್ಪ್ರೆಸ್ ರೈಲು ಮೈಸೂರು ಜಂಕ್ಷನ್‌ನಿಂದ ಮಧ್ಯಾಹ್ನ ೧:೦೫ಕ್ಕೆ ಹೊರಟು ೨:೫೫ಕ್ಕೆ ಬೆಂಗಳೂರು ತಲುಪುತ್ತದೆ. ಐದು ನಿಮಿಷಗಳ ನಂತರ, ಅಂದರೆ ೩:೦೦ ಗಂಟೆಗೆ ಹೊರಟು, ಚೆನ್ನೈ ಸೆಂಟ್ರಲ್ ನಿಲ್ದಾಣವನ್ನು ರಾತ್ರಿ ೭:೩೫ಕ್ಕೆ ತಲುಪುತ್ತದೆ.

ಸಂಚಾರದ ದಿನಗಳು

ಚೆನ್ನೈ-ಬೆಂಗಳೂರು-ಮೈಸೂರು ವಂದೇ ಭಾರತ ಎಕ್ಸ್ ಪ್ರೆಸ್ ವಾರದಲ್ಲಿ ಆರು ದಿನಗಳ ಕಾಲ ಅಂದರೆ ಸೋಮವಾರ, ಮಂಗಳವಾರ, ಗುರುವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರಗಳಂದು ಸಂಚರಿಸುತ್ತದೆ.

ಚೆನ್ನೈ-ಬೆಂಗಳೂರು-ಮೈಸೂರು ವಂದೇ ಭಾರತ ಎಕ್ಸ್ ಪ್ರೆಸ್ ರೈಲಿನ ಸಂಖ್ಯೆ

ಚೆನ್ನೈ ಸೆಂಟ್ರಲ್‌ನಿಂದ ಹೊರಟು ಮೈಸೂರು ಜಂಕ್ಷನ್ ತಲುಪುವ ರೈಲು ಸಂಖ್ಯೆ: ೨೦೬೦೮

ಮೈಸೂರು ಜಂಕ್ಷನ್‌ನಿಂದ ಚೆನ್ನೈ ಸೆಂಟ್ರಲ್ ರೈಲು ಸಂಖ್ಯೆ: ೨೦೬೦೭

ಈ ವಂದೇ ಭಾರತ ರೈಲನ್ನು ಸಂಪೂರ್ಣವಾಗಿ ಭಾರತದ ಇಂಟಿಕ್ರೆಲ್ ಕೋಚ್ ಫ್ಯಾಕ್ಟರಿ (ಐಸಿಎಫ್)ಯಲ್ಲಿ ನಿರ್ಮಾಣ ಮಾಡಲಾಗಿದ್ದು, 16 ಬೋಗಿಗಳನ್ನು ಹೊಂದಿರುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ಈ ರೈಲಿಗೆ ಚಾಲನೆ ನೀಡಲಿದ್ದಾರೆ.

ಉಳಿದ ನಾಲ್ಕು ವಂದೇ ಭಾರತ ಎಕ್ಸ್  ಪ್ರೆಸ್ ರೈಲುಗಳು – ನವದೆಹಲಿಯಿಂದ ವಾರಣಾಸಿ (ಫೆಬ್ರವರಿ ೧೫, ೨೦೧೯ರಂದು ಉದ್ಘಾಟಿಸಲಾಯಿತು) ಹಾಗೂ ನವದೆಹಲಿಯಿಂದ ಶ್ರೀ ಮಾತಾ ವೈಷ್ಣೋದೇವಿ ಕತ್ರ (ಅಕ್ಟೋಬರ್ ೩, ೨೦೧೯ರಂದು ಉದ್ಘಾಟಿಸಲಾಯಿತು), ಗಾಂಧಿನಗರದಿಂದ, ಅಹ್ಮದಾಬಾದ್ ಮೂಲಕ ಮುಂಬೈ ಸೆಂಟ್ರಲ್ (ಸೆಪ್ಟೆಂಬರ್ ೩೦ರಂದು ಉದ್ಘಾಟಿಸಲಾಯಿತು) ಹಾಗೂ ಉನಾದಿಂದ ಚಂಡೀಘಡದ ಮೂಲಕ ದೆಹಲಿ (ಅಕ್ಟೋಬರ್ ೧೩ರಂದು ಉದ್ಘಾಟಿಸಲಾಯಿತು).

Key words: Vande Bharat -Express -Chennai-Bangalore-Mysore-train –timings-stations -details